ಯಾರಿಗೂ ತಿಳಿಯದಂತೆ ಸಾಮಾನ್ಯರಂತೆ ಹಂಪಿ ವೀಕ್ಷಣೆ ಮಾಡಿದ ಇಮ್ರಾನ್ ಖಾನ್!

ಬೆಂಗಳೂರು: ಬಾಲಿವುಡ್ ಕ್ಯೂಟ್ ಆ್ಯಂಡ್ ಯಂಗ್ ಸ್ಟಾರ್ ಇಮ್ರಾನ್ ಖಾನ್ ಪತ್ನಿ ಜೊತೆ ವಿಶ್ವ ವಿಖ್ಯಾತ ಹಂಪಿ ವೀಕ್ಷಣೆ ಮಾಡಿದ್ದಾರೆ. ತಲೆಗೊಂದು ಟೋಪಿ ಧರಿಸಿ ಸಾಮಾನ್ಯರಂತೆ ಹಂಪಿಯ ಎಲ್ಲ ಪ್ರವಾಸಿ ತಾಣಗಳ ವೀಕ್ಷಣೆ ಮಾಡಿದ್ದಾರೆ.

ವಿಶ್ವ ವಿಖ್ಯಾತ ಹಂಪಿಯ ವಿರೂಪಾಕ್ಷ ಸ್ವಾಮಿ ದೇವಸ್ಥಾನ, ಕಡಲೆಕಾಳು ಗಣೇಶ, ಸಾಸಿವೆ ಕಾಳು ಗಣೇಶ, ಕೃಷ್ಣ ದೇವಸ್ಥಾನ, ಬಡವಿಲಿಂಗ, ಉಗ್ರ ನರಸಿಂಹ, ನೆಲಸ್ಥರ ಶಿವಾಲಯ, ಅರಮನೆ ಆವರಣ, ಕಮಲ್ ಮಹಲ್, ಗಜಶಾಲೆ, ಹಜಾರ ರಾಮ ದೇವಸ್ಥಾನ, ಮಹಾನವಮಿ ದಿಬ್ಬ, ಕಪ್ಪುಕಲ್ಲಿನ ಪುಷ್ಕರಣಿ, ರಾಣಿಸ್ನಾನ ಗೃಹ, ವಿಜಯವಿಠ್ಠಲ ದೇವಸ್ಥಾನ ಹಾಗೂ ಹೇಮಕೂಟವನ್ನು ಪತ್ನಿ ಅವಂತಿಕ ಮಲ್ಲಿಕ್ ಜೊತೆ ವೀಕ್ಷಣೆ ಮಾಡಿದ್ದಾರೆ.

ಸಾಮಾನ್ಯರ ಹಾಗೆಯೇ ಹಂಪಿಯ ಪ್ರತಿಯೊಂದು ಸ್ಥಳವನ್ನು ತಿರುಗಾಡಿ ನೋಡಿದ್ದಾರೆ. ಹಂಪಿ ಆಗಮಿಸಿದ್ದ ಇಮ್ರಾನ್ ಸ್ಥಳೀಯ ಕಮಲಾಪುರದ ಖಾಸಗಿ ಹೋಟೆಲ್ ನಲ್ಲಿ ಎರಡು ದಿನಗಳ ಕಾಲ ವಾಸ್ತವ್ಯ ಹೂಡಿದ್ದರು.

ಬಾಲಿವುಡ್‍ನ ಮಿಸ್ಟರ್ ಪರ್ಫೆಕ್ಟ್ ಅಮಿರ್ ಖಾನ್ ಸೋದರನಾಗಿರುವ ಇಮ್ರಾನ್ ಖಾನ್ 2008ರಲ್ಲಿ `ಜಾನೇ ತು, ಯಾ ಜಾನೇ ನಾ’ ಸಿನಿಮಾದ ಮೂಲಕ ಸಿನಿ ಅಂಗಳಕ್ಕೆ ಹೀರೋ ಆಗಿ ಎಂಟ್ರಿ ನೀಡಿದ್ದಾರೆ. ಕಿಡ್ನಾಪ್, ಲಕ್, ಐ ಹೇಟ್ ಲವ್ ಸ್ಟೋರಿ, ಡೆಲ್ಲಿ ಬೆಲ್ಲಿ, ಬ್ರೇಕ್ ಕೆ ಬಾದ್, ಮೇರೆ ಬ್ರದರ್ ಕೀ ದುಲ್ಹನ್, ಏಕ್ ಮೇ ಔರ್ ಏಕ್ ಥು, ಗೋರಿ ತೇರೆ ಪ್ಯಾರ್ ಮೇ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Comments

Leave a Reply

Your email address will not be published. Required fields are marked *