`ನಾಟು ನಾಟು’ ಸಾಂಗ್ ಆಸ್ಕರ್ ಗೆಲ್ಲೋಕೆ ನಾನೇ ಕಾರಣ: ಅಜಯ್ ದೇವಗನ್

ರಾಜಮೌಳಿ (Rajamouli) ನಿರ್ದೇಶನದ RRR ಸಿನಿಮಾದ `ನಾಟು ನಾಟು’ (Naatu Naatu Song)  ಹಾಡಿಗೆ ಆಸ್ಕರ್ ಬಂದಿರೋದು ವಿಶ್ವದೆಲ್ಲೆಡೆಯಿಂದ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ನಾಟು ನಾಟು ಸಾಂಗ್ ಆಸ್ಕರ್ ಗೆದ್ದಿರೋದ್ದಕ್ಕೆ ಇಡೀ ತಂಡದ ಶ್ರಮವಿದೆ. ಹೀಗಿರುವಾಗ ಹಿಂದಿ ನಟ ಅಜಯ್ ದೇವಗನ್ ಅವರು ʻನಾಟು ನಾಟು ಆಸ್ಕರ್ ಗೆದ್ದಿದ್ದಕ್ಕೆ ನಾನೇ ಕಾರಣʼ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ದೇವರಾಜ್ ನಟನೆಯ ‘ವೀರಂ’ ಟ್ರೈಲರ್ ರಿಲೀಸ್

ಬಾಲಿವುಡ್ ನಟ ಅಜಯ್ ದೇವಗನ್ (Ajay Devgan) ನಟಿಸಿ, ನಿರ್ದೇಶಿಸಿರುವ `ಭೋಲಾ’ (Bhola) ಸಿನಿಮಾ ಮಾರ್ಚ್ 30ರಂದು ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಸದ್ಯ ಈ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ನಟ ಬ್ಯುಸಿಯಾಗಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ನಾಟು ನಾಟು ಹಾಡಿನ ಬಗ್ಗೆ ಅಜಯ್ ದೇವಗನ್ ತಮಾಷೆ ಮಾಡಿದ್ದಾರೆ.

`ನಾಟು ನಾಟು’ ಹಾಡು ಆಸ್ಕರ್ ಗೆಲ್ಲೋಕೆ ಹಲವು ವಿಚಾರ ಕಾರಣ ಆಗಿದೆ. ಚಿತ್ರದ ಸಂಗೀತವೂ ಕಮಾಲ್ ಮಾಡಿದೆ. ಒಟ್ಟಾರೆ ಹಾಡಿನಲ್ಲಿರುವ ಪ್ರತಿ ವಿಚಾರವೂ ಆಸ್ಕರ್ ಗೆಲ್ಲೋಕೆ ಸಹಕಾರಿ ಆಗಿದೆ. ಈಗ ಅಜಯ್ ದೇವಗನ್ ಈ ವಿಚಾರದಲ್ಲಿ ಜೋಕ್ ಮಾಡಿದ್ದಾರೆ. ನಾಟು ನಾಟು’ ಆಸ್ಕರ್ ಗೆಲ್ಲೋಕೆ ನಾನೇ ಕಾರಣ, ಏಕೆಂದರೆ ನಾನು ಆ ಹಾಡಿನಲ್ಲಿ ಡ್ಯಾನ್ಸ್ ಮಾಡಿಲ್ಲವಲ್ಲ ಎಂದಿದ್ದಾರೆ. ಈ ಮೂಲಕ ತಮಗೆ ಡ್ಯಾನ್ಸ್ ಮಾಡೋಕೆ ಬರಲ್ಲ ಎಂದಿದ್ದಾರೆ.

ಇದೀಗ ಅಜಯ್ ದೇವಗನ್ ಅವರ ಜೋಕ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಮೊದಲ ಬಾರಿಗೆ ಅವರು ನಗೋದನ್ನ ನೋಡಿದೆವು ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *