ಬಾಡಿಬಿಲ್ಡರ್ ಸ್ಪರ್ಧೆಯಲ್ಲಿ ಗಿನ್ನೆಸ್ ರೆಕಾರ್ಡ್ ಪಡೆದ ಕುಬ್ಜ ವ್ಯಕ್ತಿ

Pratik Vitthal Mohite

ಮುಂಬೈ: ಭಾರತದ ಕುಬ್ಜ ವ್ಯಕ್ತಿಯೊಬ್ಬರು ವಿಶ್ವದ ಅತೀ ಕಡಿಮೆ ಎತ್ತರದ ಬಾಡಿ ಬಿಲ್ಡರ್ ಸ್ಪರ್ಧಾತ್ಮಕ ಪಂದ್ಯದಲ್ಲಿ ಗೆದ್ದು, ಗಿನ್ನೆಸ್ ರೆಕಾರ್ಡ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

3 ಅಡಿ 4 ಇಂಚು ಎತ್ತರವಿರುವ ಪ್ರತೀಕ್ ವಿಠ್ಠಲ್ ಮೋಹಿತೆ ಪ್ರಶಸ್ತಿಯನ್ನು ಪಡೆದವರಾಗಿದ್ದಾತರ. ಸ್ನೇಹಿತನ ಸಲಹೆ ಮೇರೆಗೆ ಪ್ರತೀಕ್ ವಿಶ್ವ ದಾಖಲೆಗಾಗಿ ಅರ್ಜಿ ಸಲ್ಲಿಸಿದ್ದರು. ಇದೀಗ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಲೇಹ್‍ನಿಂದ ಮನಾಲಿಗೆ ಸೈಕ್ಲಿಂಗ್ ಮಾಡಿ ಭಾರತೀಯ ಸೇನಾಧಿಕಾರಿ ಗಿನ್ನೆಸ್ ದಾಖಲೆ

Pratik Vitthal Mohite

ಈ ಕುರಿತಂತೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಎಂಬ ಯೂಟ್ಯೂಬ್ ಖಾತೆಯಲ್ಲಿ ವೀಡಿಯೋವೊಂದನ್ನು ಶೇರ್ ಮಾಡಿದ್ದು, ಪ್ರತೀಕ್ ತನ್ನ ದಿನಚರಿ ಮತ್ತು ಗೆಲುವು ಸಾಧಿಸಿದ ಬಗ್ಗೆ ಹೇಳಿಕೊಂಡಿದ್ದಾರೆ. ಗಿನ್ನೆಸ್ ಪಟ್ಟ ಪಡೆಯಬೇಕೆಂಬುವುದು ನನ್ನ ಕನಸಾಗಿತ್ತು ಮತ್ತು ಅದರಿಂದ ಗೌರವ ಸಿಗುತ್ತದೆ. ಸದ್ಯ ಈಗ ನನಗೆ ಬಹಳ ಸಂತೋಷವಾಗುತ್ತಿದೆ ಮತ್ತು ಇದು ನನ್ನ ಜೀವನದ ದೊಡ್ಡ ಸಾಧನೆಯಾಗಿದೆ ಎಂದು ಹೇಳಿದ್ದಾರೆ.

ಪ್ರತೀಕ್ ಕೆಲವು ಆರೋಗ್ಯಕರವಾದ ತಿಂಡಿ ಹಾಗೂ ಡಯೆಟ್ ಫುಡ್‍ಗಳನ್ನು ಸೇವಿಸುತ್ತಿದ್ದು, ಪ್ರತಿ ದಿನ ಮಧ್ಯಾಹ್ನ ಎರಡು ಗಂಟೆಗಳ ಕಾಲ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿರುವ ಬಗ್ಗೆ ಹೇಲಿಕೊಂಡಿದ್ದಾರೆ ಮತ್ತು ಪ್ರತಿ ನಿತ್ಯ 30 ನಿಮಿಷಗಳ ಕಾಲ ಓಡುವುದಾಗಿ ತಿಳಿಸಿದ್ದಾರೆ. ಅದನ್ನು ಹೊರತುಪಡಿಸಿ ಪ್ರತೀಕ್ ತನ್ನ ಸ್ನೇಹಿತರೊಂದಿಗೆ ಹೆಚ್ಚಾಗಿ ಕ್ರಿಕೆಟ್ ಆಡುಲು ಇಷ್ಟಪಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸ್ಪೇನ್‍ನಲ್ಲಿರುವ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ

ಪ್ರತೀಕ್ ಅವರು ತಮ್ಮದೇ ಆದ ಜಿಮ್‍ನನ್ನು ತೆರೆಯುವ ಆಸೆಯನ್ನು ವ್ಯಕ್ತಪಡಿಸಿದ್ದು, ಈ ವಿಶ್ವದಾಖಲೆ ತಮ್ಮ ಗುರಿ ತಲುಪಲು ಒಂದು ಮೈಲಿಗಲ್ಲಾಗಿದೆ ಎನ್ನಬಹುದು.

Comments

Leave a Reply

Your email address will not be published. Required fields are marked *