ನಶೆಯಲ್ಲಿ ಪ್ರಿಯಕರನ ದೇಹ ತುಂಡರಿಸಿದಳು- ಛಿದ್ರವಾದ ದೇಹದ ಜೊತೆಗೆ ನಿದ್ರೆಗೆ ಜಾರಿದಳು

ಇಸ್ಲಾಮಾಬಾದ್: ಹಣದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಮಹಿಳೆ ಗೆಳೆಯನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ಅಲ್ಲೇ ಮಲಗಿ ಗಾಢ ನಿದ್ರೆಗೆ ಜಾರಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಸದ್ದಾರ್ ಪ್ರದೇಶದಲ್ಲಿರುವ ಹಳೆಯ ಅಪಾರ್ಟ್‍ಮೆಂಟ್‍ನ ಫ್ಲ್ಯಾಟ್ ಒಂದರಲ್ಲಿ 70 ವರ್ಷದ ಪುರುಷನ ಛಿದ್ರಗೊಂಡ ದೇಹದ ಭಾಗಗಳು ದೊರಕಿದ್ದು, ಅದೇ ಸ್ಥಳದಲ್ಲಿ 45 ವರ್ಷದ ಮಹಿಳೆಗಾಢ ನಿದ್ದೆಯಲ್ಲಿದ್ದಳು. ಈಕೆಯನ್ನು ಕೊಲೆ ಆರೋಪಿಯಾಗಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ:  ಮತಾಂತರ ನಿಷೇಧ ಕಾಯ್ದೆ ಜಾರಿ ಸರಿಯಿದೆ: ಬಿವೈ ರಾಘವೇಂದ್ರ

ಈ ಘಟನೆಯ ಕುರಿತಾಗಿ ಮಾತನಾಡಿರುವ ಪೊಲೀಸ್ ಅಧಿಕಾರಿ ಜುಬೇರ್ ನಜೀರ್ ಶೇಖ್, ಸದ್ದಾರ್ ಪ್ರದೇಶದಲ್ಲಿರುವ ಹಳೆಯ ಅಪಾರ್ಟ್‍ಮೆಂಟ್‍ನ ಫ್ಲ್ಯಾಟ್ ಬಳಿ ಮನುಷ್ಯನ ಕೈಯ ಭಾಗಗಳು ಬಿದ್ದಿರುವುದು ಕಂಡುಬಂದಿದೆ ಎಂದು ನಮಗೆ ಕರೆಬಂದಿತು. ನಮ್ಮ ತಂಡವು ಸ್ಥಳಕ್ಕೆ ತೆರಳಿ ಫ್ಲ್ಯಾಟ್‍ನ ಕದ ತೆರೆಯಿತು. ಅಲ್ಲಿ ಮನೆಯ ತುಂಬಾ ದೇಹವೊಂದರ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮನೆಯಲ್ಲಿದ್ದ ಮಹಿಳೆ ಗಾಢ ನಿದ್ದೆಗೆ ಜಾರಿದ್ದಳು. ಮಹಿಳೆಯನ್ನು ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ. ವಾರದ ಹಿಂದೆಯೇ ಕೊಲೆ ನಡೆದಿರುವ ಸಾಧ್ಯತೆಯಿದ್ದರೂ ಕೊಲೆಯ ದಿನಾಂಕ ಇನ್ನೂ ಖಚಿತವಾಗಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸುದೀಪ್ ಕುಟುಂಬ ಸಮೇತರಾಗಿ ಭೇಟಿ

ರಕ್ತ ಮೆತ್ತಿದ್ದ ಬಟ್ಟೆಗಳು ಮತ್ತು ದೇಹವನ್ನು ತುಂಡರಿಸಲು ಬಳಸಿದ ಉಪಕರಣಗಳು ಸೇರಿದಂತೆ ಸ್ಥಳದಲ್ಲಿ ಹಲವು ಪ್ರೂಫ್ ಸಿಕ್ಕಿವೆ. ಆ ಹಿನ್ನೆಲೆಯಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಮಹಿಳೆಯು ನಶೆಯಲ್ಲಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಡ್ರಗ್ಸ್ ಸೇವಿಸಿದ್ದಳೆಂದು ಶಂಕಿಸಲಾಗಿದೆ. ಅವರಿಬ್ಬರು ಮದುವೆ ಆಗಿಲ್ಲವೆಂದು ಆರೋಪಿ ತಿಳಿಸಿದ್ದಾಳೆ. ಅವರಿಬ್ಬರು  ಸಂಬಂಧದಲ್ಲಿದ್ದರು. ದುಡ್ಡಿನ ವಿಚಾರದಲ್ಲಿ ಅವರಿಬ್ಬರ ನಡುವೆ ಜಗಳವಾಗುತ್ತಿತ್ತು ಎಂಬುದಾಗಿ ನೆರೆಯವರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ:   ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಂಡರೆ 25,000 ಬಹುಮಾನ: ಎಎಪಿ

Comments

Leave a Reply

Your email address will not be published. Required fields are marked *