ಕಾರವಾರ: ಆಕಸ್ಮಿಕವಾಗಿ ಅರಬಿ ಸಮುದ್ರದಲ್ಲಿದ್ದ ಬೋಟ್‍ಗೆ ಬೆಂಕಿ ತಗುಲಿ ಬೋಟ್ ಹೊತ್ತಿ ಉರಿದಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದೀಪುರದಲ್ಲಿ ಘಟನೆ ನಡೆದಿದೆ.

ಖಾದರ್ ಸಾಬ್ ಅಬ್ದುಲ್ ರಜಾಕ್ ಎಂಬವರಿಗೆ ಸೇರಿದ ಬೋಟ್ ಇದಾಗಿದ್ದು, ಅಡುಗೆ ತಯಾರಿಸುವ ವೇಳೆ ಬೋಟ್‍ನ ಡಿಸೇಲ್ ಟ್ಯಾಂಕ್‍ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಇದರಿಂದಾಗಿ ಬೋಟ್‍ನಲ್ಲಿ ದೊಡ್ಡ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಕಂಡ ಈ ಬೋಟ್‍ನಿಂದ ಅನತಿ ದೂರದಲ್ಲಿದ್ದ ಮತ್ತೊಂದು ಬೋಟ್‍ನಲ್ಲಿದ್ದವರು ಬೆಂಕಿಗಾಹುತಿಯಾಗುತ್ತಿದ್ದ ಬೋಟ್‍ನತ್ತ ಧಾವಿಸಿದ್ದಾರೆ. ಈ ವೇಳೆ ಬೋಟ್‍ನಲ್ಲಿದ್ದ ಇಬ್ಬರನ್ನ ರಕ್ಷಿಸಲಾಗಿದೆ.

ಅಲ್ಲದೆ ಇನ್ನೊಂದು ಬೋಟ್‍ನ ಸಹಾಯದಿಂದ ಬೆಂಕಿಯನ್ನು ನಂದಿಸುವ ಕಾರ್ಯವನ್ನೂ ಮಾಡಿದ್ದಾರೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://www.youtube.com/watch?v=vY4lPJ-cl38&feature=youtu.be

Leave a Reply