ದೋಣಿ ದುರಂತ- ಮಕ್ಕಳು ಸೇರಿ 6 ಜನ ನೀರುಪಾಲು

ಲಕ್ನೋ: ದೋಣಿ ಮುಗುಚಿ ಮಕ್ಕಳು ಸೇರಿದಂತೆ ಆರು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಹ್ರಾಯ್ಚ್‍ನಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬಹ್ರಾಯ್ಚ್ ಸಮೀಪವಿರುವ ಸರಯು ನದಿಯಲ್ಲಿ ಇಂದು ಬೆಳಗ್ಗೆ ಈ ದುರಂತ ಸಂಭವಿಸಿದೆ. ಮೃತರನ್ನು ರಾಜೇಶ್ (25), ಬ್ರಿಜೇಶ್ (20), ಮಗನ್ (17), ವಿಜಯ್ (16), ತಿರಿತ್ (12) ಮತ್ತು ಶಕಿಲ್(12) ಎಂದು ಗುರುತಿಸಲಾಗಿದೆ.

ಮೃತ ದುರ್ದೈವಿಗಳು ಬಹ್ರಾಯ್ಚ್ ಹತ್ತಿರದ ಗೋಪಾಲ್‍ಪುರ್ ಮತ್ತು ಬೆಹ್ತಾ ಗ್ರಾಮದವರೆಂದು ತಿಳಿದುಬಂದಿದೆ. ಪಕ್ಕದ ರಾಮ್ಗೊನ್ ಹಳ್ಳಿಯಲ್ಲಿ ಜಾತ್ರೆ ಕಾರ್ಯಕ್ರಮ ಮುಗಿಸಿ ಹಿಂದಿರುಗುತ್ತಿದ್ದರು.

ದೋಣಿಯಲ್ಲಿ ಒಟ್ಟು ಒಂಬತ್ತು ಜನರಿದ್ದರು. ಅದರಲ್ಲಿ ಮೂವರು ಈಜಿಕೊಂಡು ದಡ ಸೇರಿದ್ದಾರೆ. ಮೃತದೇಹಗಳನ್ನ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಬಹ್ರಾಯ್ಚ್ ಪೊಲೀಸ್ ಅಧಿಕಾರಿ ಅಜಯ್ ದೀಪ್ ಸಿಂಗ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *