ಬೆಂಗಳೂರು: ಬಿಎಂಟಿಸಿ ನಷ್ಟದಲ್ಲಿದೆ ಎಂದು ಸಾರಿಗೆ ಸಚಿವರು ಬಸ್ ಪ್ರಯಾಣ ದರ ಹೆಚ್ಚಳದ ಕುರಿತು ಹೇಳುತ್ತಾರೆ. ಅದು ಹೇಗೆ ಬಿಎಂಟಿಸಿ ನಷ್ಟ ಆಗುತ್ತಿದೆ ಎಂಬುವುದು ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಲ್ಲಿ ಬಯಲಾಗಿದೆ. ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ನಿಲ್ಲಿಸಿದ್ರೆ ನಷ್ಟದ ಪ್ರಮಾಣವನ್ನು ಕಡಿಮೆ ಮಾಡುವ ಸಾಧ್ಯತೆಗಳಿವೆ.

ಪ್ರಯಾಣಿಕರ ಭದ್ರತಾ ದೃಷ್ಟಿಯಿಂದ ಬಸ್ ಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಈ ಸಂಬಂಧ ಒಂದು ಸಿಸಿಟಿವಿ ಕ್ಯಾಮೆರಾಗೆ 66 ಸಾವಿರ ರೂ. ಖರ್ಚು ಎಂದು ಬಿಎಂಟಿಸಿ ಸಿಬ್ಬಂದಿ ಲೆಕ್ಕ ತೋರಿಸಿದ್ದಾರೆ. ಒಟ್ಟು 500 ಬಸ್‍ಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಈ ಕ್ಯಾಮೆರಾಗಳಿಗೆ ಬರೋಬ್ಬರಿ 3 ಕೋಟಿ ರೂ. ಖರ್ಚು ಮಾಡಲಾಗಿದೆ. ಒಂದು ಕ್ಯಾಮೆರಾಗೆ ಇಷ್ಟು ಬೆಲೆ ನೀಡಿದ್ರೂ ಕೆಲ ಬಸ್ ಗಳಲ್ಲಿ ಡಬ್ಬಗಳಾಗಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

66 ಸಾವಿರ ಬೆಲೆಯ ಕ್ಯಾಮೆರಾ ನೋಡಲು ಹೋದ್ರೆ ಅಲ್ಲಿ ಮೆಡಿಕಲ್ ಕಿಟ್ ಸಹ ಕಾಣುವುದಿಲ್ಲ. ಹೊಸ ಬಸ್‍ಗಳಿಗೆ ಮಾತ್ರ ಸಿಸಿ ಕ್ಯಾಮೆರಾ ಅಳವಡಿಸಿದ್ರೆ, ಬಹುತೇಕ ಬಸ್‍ಗಳಲ್ಲಿ ಕಾಣುವುದಿಲ್ಲ. ಕ್ಯಾಮೆರಾಗಳು ಬಂದು ಸುಮಾರು 6ರಿಂದ 8 ತಿಂಗಳು ಆಯ್ತು. ಆದ್ರೆ ನಮ್ಮ ಬಸ್ ಗಳಿಗೆ ಅಳವಡಿಸಿಲ್ಲ. ಮುಂದಿನ ದಿನಗಳಲ್ಲಿ ಅಳವಡಿಸುತ್ತಾರೆ ಎಂದು ಚಾಲಕರೊಬ್ಬರು ಹೇಳಿದ್ದಾರೆ. ಮತ್ತೆ ಕೆಲ ಬಸ್ ಗಳಲ್ಲಿ ನಾಮಾಕಾವಸ್ಥೆ ಅಂತಾ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು, ಕಾರ್ಯ ನಿರ್ವಹಿಸಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply