ಸರ್ಕಾರದ ಜಿಪುಣತನಕ್ಕೆ ತಿರುಗೇಟು ಕೊಟ್ಟ KSRTC, BMTC ಸಿಬ್ಬಂದಿ

ಬೆಂಗಳೂರು: ಆಯುಧ ಪೂಜೆ ಬಂತು ಅಂದ್ರೆ ಜನರಿಗೆ ಎಲ್ಲಿಲ್ಲದ ಖುಷಿ. ಅದರಲ್ಲಿಯೂ ಸವಾರರು ತಮ್ಮ ಪ್ರೀತಿಯ ವಾಹನಗಳನ್ನು ಅಲಂಕರಿಸಿ ಪೂಜೆ ಮಾಡುತ್ತಾರೆ. ಅಂತೆಯೇ ನಾಡಿನ ಜನರ ಜೀವನಾಡಿಗಳಾದ ಸಾರಿಗೆ ಸಂಸ್ಥೆಯ ಚಾಲಕರು ತಾವು ಪ್ರತಿನಿತ್ಯ ಚಲಾಯಿಸುವ ಬಸ್ ಗಳಿಗೆ ಪೂಜೆ ಸಲ್ಲಿಸುತ್ತಾರೆ. ಆದ್ರೆ ಪ್ರತಿ ದಿನ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ರಾಜ್ಯ ಸಾರಿಗೆ ಸಂಸ್ಥೆ ಆಯುಧ ಪೂಜೆಗೆ ವಾಹನಗಳ ಅಲಂಕಾರಕ್ಕಾಗಿ ಕೇವಲ 10 ರೂ. ದಿಂದ 100 ರೂ. ಬಿಡುಗಡೆ ಮಾಡುವ ಮೂಲಕ ಜಿಪುಣತನವನ್ನು ಪ್ರದರ್ಶನ ಮಾಡಿದೆ.

ಒಂದು ಹೂವಿನ ಹಾರಕ್ಕೆ ಮಾರುಕಟ್ಟೆಯಲ್ಲಿ 10 ರೂ. ಇದೆ. ಪ್ರತಿನಿತ್ಯ ತಾವು ಓಡಿಸುವ ಬಸ್ ಗಳ ಅಲಂಕಾರಕ್ಕೆ ಪೈಪೋಟಿಗೆ ಇಳಿಯುವ ಚಾಲಕ, ನಿರ್ವಾಹಕರು ಸರ್ಕಾರಕ್ಕೆ ಸೆಡ್ಡು ಹೊಡೆದು ತಮ್ಮ ಸ್ವಂತ ಖರ್ಚಿನಲ್ಲಿಯೇ ಹೂ ಖರೀದಿ ಮಾಡಿದ್ದಾರೆ. ಈಗಾಗಲೇ ಬಿಎಂಟಿಸಿ ಮತ್ತು ಕೆಎಸ್‍ಆರ್ ಟಿಸಿ ಮತ್ತು ಬಿಎಂಟಿಸಿ ಸಿಬ್ಬಂದಿ ತಮ್ಮ ಸಂಬಳದಲ್ಲಿಯೇ 4 ರಿಂದ 5 ಸಾವಿರ ರೂ.ವರೆಗೂ ಖರ್ಚು ಮಾಡಿದ್ದಾರೆ.

ತಮ್ಮ ಸ್ವಂತ ಹಣದಿಂದಲೇ ತಮ್ಮ ಸಾರಥಿಗಳಿಗೆ ಅಲಂಕರಿಸಿ, ಪೂಜೆ ಮಾಡಿದ್ದಾರೆ. ಸಾಮಾನ್ಯವಾಗಿ ಚಾಲಕರು ಬಸ್ ಗಳ ಅಲಂಕಾರಕ್ಕಾಗಿ ತಮ್ಮ ತಮ್ಮಲ್ಲೇ ಪೈಪೋಟಿಗೆ ಇಳಿಯುತ್ತಾರೆ. ವರ್ಷಪೂರ್ತಿ ತಮ್ಮನ್ನು ಕಾಪಾಡುವ ವಾಹನಗಳನ್ನು ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸುತ್ತಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *