ಫಾಸ್ಟ್ ಟ್ಯಾಗ್‌ನಲ್ಲಿ ಹಣವಿಲ್ಲದೇ ಟೋಲ್ ಬಳಿಯೇ ನಿಂತ‌ ಇವಿ ಬಸ್‌ಗಳು

ಬೆಂಗಳೂರು: ದೇಶದಲ್ಲೇ ಅತ್ಯುತ್ತಮ ಸಾರ್ವಜನಿಕ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪ್ರಶಂಸೆಗೆ ಬಿಎಂಟಿಸಿ (BMTC) ಹೆಸರುವಾಸಿಯಾಗಿತ್ತು.‌ ಆದರೆ ಬಿಎಂಟಿಸಿ ಸಂಸ್ಥೆ ಇತ್ತೀಚಿನ ಕೆಲ ವರ್ಷಗಳಿಂದ ನಷ್ಟದಲ್ಲಿದ್ದು, ನಷ್ಟವನ್ನು ಕಡಿತಗೊಳಿಸಲು ಅನೇಕ ರೀತಿಯಲ್ಲಿ ಸರ್ಕಸ್ ಮಾಡ್ತಿದೆ.‌ ಈಗ ಬಿಎಂಟಿಸಿಯ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.

ಖಾಸಗಿಯವರ ಸಹಭಾಗತ್ವದಲ್ಲಿ ರಸ್ತೆಗೆ ಇಳಿದಿರುವ ಪರಿಸರ ಸ್ನೇಹಿ ಎಲೆಕ್ರ್ಟಿಕ್ ಬಸ್‌ಗಳು (EV Bus) ಮಂಗಳವಾರ ಸಂಜೆ ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ (Bengaluru) ಬರುವಾಗ ಸಿಗುವ ಮಾರಸಂದ್ರ ಟೋಲ್ ಬಳಿಯೇ ನಿಂತುಹೋಗಿದೆ. ಬಸ್ ಬ್ಯಾಟರಿ ಚಾರ್ಜ್ ಸರಿಯಾಗಿಯೇ ಇತ್ತು, ಆದರೇ ಫಾಸ್ಟ್ ಟ್ಯಾಗ್‌ನ ಚಾರ್ಜ್ ಖಾಲಿಯಾಗಿತ್ತು. 15ಕ್ಕೂ ಹೆಚ್ಚು ಬಸ್‌ಗಳು ಟೋಲ್ ಪಾಸ್ ಆಗಲು ಫಾಸ್ಟ್ ಟ್ಯಾಗ್‌ನಲ್ಲಿ ಬ್ಯಾಲೆನ್ಸ್ ಇಲ್ಲದೇ ಟೋಲ್ ಕ್ರಾಸ್ ಆಗದೇ ಅಲ್ಲೇ ನಿಂತುಕೊಳ್ಳುವಂತಹ ಪರಿಸ್ಥಿತಿ ಹೋಗಿತ್ತು.

ಬಸ್ ಹೀಗೆ ಟೋಲ್ ಬಳಿ ನಿಂತುಕೊಳ್ಳುತ್ತಿದ್ದಂತೆ ಪ್ರಯಾಣಿಕರು ವಿಧಿಯಿಲ್ಲದೇ ಅಲ್ಲೇ ಇಳಿದು ಬೇರೆ ಬಸ್‌ಗೆ ಹತ್ತಿಕೊಂಡು ಬರಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿ ಬಿಎಂಟಿಸಿ ಮಾಡಿರುವ ಎಡವಟ್ಟಿಗೆ ಪ್ರಯಾಣಿಕರು ಹಿಡಿಶಾಪ ಹಾಕಿದ್ದಾರೆ. ಇದನ್ನೂ ಓದಿ: ಅಬಕಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ- 3,905 ಲೀಟರ್ ಮದ್ಯ ವಶ

ಖಾಸಗಿಯವರು ಈ ಇವಿ ಬಸ್‌ಗಳ ನಿರ್ವಹಣೆ ಮಾಡುತ್ತಿರುವುದೇ ಟೋಲ್ ಕಟ್ಟದೇ ಇರೋದಕ್ಕೆ ಪ್ರಮುಖ ಕಾರಣ ಅನ್ನೋದು ಮುನ್ನೋಟಕ್ಕೆ ಕಂಡುಬಂದಿದೆ. ಬಿಎಂಟಿಸಿಯೊಂದಿಗೆ ಕರಾರು ಮಾಡಿಕೊಂಡಿರುವ ಖಾಸಗಿ ಅವ್ರು ಇನ್ಮುಂದೆ ಈ ರೀತಿ ಆಗದಂತೆ ಕ್ರಮವಹಿಸುವಂತೆ ಬಿಎಂಟಿಸಿ ಹಿರಿಯ ಅಧಿಕಾರಿಗಳು ನೋಡಿಕೊಳ್ಳದೇ ಹೋದರೆ ಇವಿ ಬಸ್‌ಗಳಲ್ಲಿ ಪ್ರಯಾಣ ಮಾಡಲು ಪ್ರಯಾಣಿಕರು ಹಿಂದೇಟು ಹಾಕಬಹುದು. ಇದನ್ನೂ ಓದಿ: ಬೆಂಗ್ಳೂರು ಮಹಿಳೆಯರಿಗೆ ಗುಡ್‍ನ್ಯೂಸ್- ಇಂದು ದಿನಪೂರ್ತಿ ಬಿಎಂಟಿಸಿನಲ್ಲಿ ಸುತ್ತಾಡ್ಬೋದು

Comments

Leave a Reply

Your email address will not be published. Required fields are marked *