ಬಿಎಂಟಿಸಿ ಬಸ್ ಹರಿದು ಇಬ್ಬರು ವ್ಯಕ್ತಿಗಳ ಸಾವು – ಚಾಲಕ, ನಿರ್ವಾಹಕ ಎಸ್ಕೇಪ್

ಬೆಂಗಳೂರು: ಬಿಎಂಟಿಸಿ (BMTC) ಬಸ್ ಹರಿದು ಇಬ್ಬರು ವ್ಯಕ್ತಿಗಳು ಸಾವಿಗೀಡಾಗಿರುವ ಘಟನೆ ನಗರದ ಹಳೇ ವಿಮಾನ ನಿಲ್ದಾಣದ (Old Airport) ಮುರುಗೇಶಪಾಳ್ಯ ಸಿಗ್ನಲ್ ಬಳಿ ನಡೆದಿದೆ.

ಪಾದಚಾರಿ ಹಾಗೂ ಬೈಕ್ ಸವಾರ ಸಾವನ್ನಪ್ಪಿದ್ದು, ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.ಇದನ್ನೂ ಓದಿ: ಹೋಟೆಲ್‌ಗಳಿಗೆ ಬರೆ – ತಿಂಗಳಿಗೆ 30 ಸಾವಿರ ಕಸದ ಸೆಸ್!

ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಹಳೇ ವಿಮಾನ ನಿಲ್ದಾಣದ ಮುರುಗೇಶಪಾಳ್ಯ ಸಿಗ್ನಲ್‌ನಲ್ಲಿ ಇ-ಕಾಮರ್ಸ್ (E-Commerce) ಬೈಕ್ ಸವಾರ ಯೂಟರ್ನ್ ತೆಗೆದುಕೊಂಡಿದ್ದ. ಅದೇ ರಸ್ತೆಯಲ್ಲಿ ಜಿಮ್ ಮುಗಿಸಿ ಬರುತ್ತಿದ್ದ ಪಾದಚಾರಿಯೊಬ್ಬರು ಡಿವೈಡರ್ ಕ್ರಾಸ್ ಮಾಡಿ, ರಸ್ತೆ ದಾಟುತ್ತಿದ್ದರು. ಈ ವೇಳೆ KA51 AJ6167 ನಂಬರಿನ ಬಸ್ ಇಬ್ಬರಿಗೂ ಡಿಕ್ಕಿ ಹೊಡೆದಿದ್ದು, ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಚಾಲಕ ಹಾಗೂ ನಿರ್ವಾಹಕ ಪರಾರಿಯಾಗಿದ್ದಾರೆ.

ಜೀವನ್ ಭೀಮಾನಗರ (Jeevan BheemaNagar) ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ಮೃತರ ಗುರುತು ಪತ್ತೆಹಚ್ಚಲು ಮುಂದಾಗಿದ್ದಾರೆ.ಇದನ್ನೂ ಓದಿ: ತೆಲಂಗಾಣ | ನಿರ್ಮಾಣ ಹಂತದಲ್ಲಿದ್ದ 6 ಅಂತಸ್ತಿನ ಕಟ್ಟಡ ಕುಸಿತ – ಇಬ್ಬರು ಸಿಲುಕಿರುವ ಶಂಕೆ