ಬಾನಂಗಳದಲ್ಲಿ ರಕ್ತ ಚಂದ್ರಗ್ರಹಣ ಗೋಚರ – ವಿಸ್ಮಯ ಕಣ್ತುಂಬಿಕೊಂಡ ಜನ

– ಕೇರಳದಲ್ಲಿ ರಕ್ತಚಂದ್ರನ ದರ್ಶನ, ಯುಎಇನಲ್ಲೂ ಅತಿ ಉದ್ದದ ಚಂದ್ರಗ್ರಹಣ
– ಬೆಂಗಳೂರಿನಲ್ಲಿ ಮೋಡದ ಮರೆಯಲ್ಲಿ ಚಂದಿರನಾಟ

ಬೆಂಗಳೂರು/ನವದೆಹಲಿ: ಸೂರ್ಯ, ಭೂಮಿ ಮತ್ತು ಚಂದ್ರರು ಒಂದೇ ಸಾಲಿನಲ್ಲಿ ನಿಂತಾಗ ಚಂದ್ರನ (Lunar Eclipse) ಮೇಲೆ ಭೂಮಿಯ ಬೆಳಕು ಬೀಳುವುದೇ ಚಂದ್ರಗ್ರಹಣ (Chandra Grahan). ಇಂದು (ಭಾನುವಾರ) ಸಂಭವಿಸಿದ ಅಪರೂಪದ ರಕ್ತಚಂದ್ರಗ್ರಹಣ ಆಗಸದಲ್ಲಿ ವಿಸ್ಮಯ ಮೂಡಿಸಿದೆ. ನಭೋಮಂಡಲದಲ್ಲಿ ಸಂಭವಿಸಿದ ಈ ವಿಸ್ಮಯವನ್ನ ದೇಶದ ಜನ ಮಾತ್ರವಲ್ಲದೇ ವಿಶ್ವದ ವಿವಿಧ ಭಾಗದ ಜನ ಕಣ್ತುಂಬಿಕೊಂಡು ಖುಷಿಪಟ್ಟರು.

ಎಲ್ಲೆಲ್ಲಿ ರಕ್ತಚಂದ್ರನ ದರ್ಶನ?
ನೆರೆಯ ಕೇರಳದ ತಿರುನಂತಪುರದಲ್ಲಿ ಭಾಗಶಃ ಹಂತದಿಂದ ಪೂರ್ಣ ಗ್ರಹಣ ಪ್ರಕ್ರಿಯೆ ನಡೆಯುತ್ತಿದೆ. ಚಂದ್ರನು ಸಂಪೂರ್ಣ ಕೆಂಪು ಬಣ್ಣಕ್ಕೆ ತಿರುಗುತ್ತಿದ್ದಾನೆ. ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲೂ ಚಂದ್ರ ಕೆಂಪು ವರ್ಣಕ್ಕೆ ತಿರುಗುತ್ತಿದ್ದಾನೆ. ಕಾಶ್ಮೀರದ ಶ್ರೀನಗರದಲ್ಲಿ ಪೂರ್ಣ ಚಂದ್ರನ ದರ್ಶನವಾಗಿದ್ದು, ಗ್ರಹಣ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಿದೆ. ಇನ್ನೂ ರಾಷ್ಟ್ರ ರಾಜಧಾನಿಯಲ್ಲಿ ಕೆಂಪುಚಂದ್ರನ ದರ್ಶನವಾಗುತ್ತಿದೆ. ಇದನ್ನೂ ಓದಿ: ಸೂರ್ಯ-ಭೂಮಿ-ಚಂದ್ರನ ನಡುವೆ ನೆರಳಿನಾಟ ಶುರು

ಇನ್ನೂ ಭಾರತದಿಂದಾಚೆಗೆ ನೋಡುವುದಾದ್ರೆ ಯುಎಇನಲ್ಲಿ ದಶಕಗಳ ಬಳಿಕ ಅತಿ ಉದ್ದದ ಚಂದ್ರಗ್ರಹಣ ದರ್ಶನವಾಗಿದೆ. ಬುರ್ಜ್‌ ಖಲಿಫಾದ ಹಿಂದೆಯೂ ಚಂದ್ರಗ್ರಹಣ ಕಾಣಿಸಿಕೊಂಡಿದೆ. ಜೊತೆಗೆ ನಮೀಬಿಯಾ, ಇಸ್ರೇಲ್‌ನಲ್ಲೂ ರಕ್ತಚಂದ್ರನ ದರ್ಶನವಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮೋಡಗಳ ಮರೆಯಲ್ಲಿ ಮರೆಯಾಗಿರೋ ಚಂದ್ರ – ‌ನೆಲಮಂಗಲದಲ್ಲಿ ಹುಣ್ಣಿಮೆ ಚಂದ್ರನ ದರ್ಶನ