ಕಬ್ಬನ್ ಪಾರ್ಕ್‌ನಲ್ಲಿ ನಡೆಯಬೇಕಿದ್ದ ಬ್ಲೈಂಡ್ ಡೇಟಿಂಗ್ ಶೋ ಕ್ಯಾನ್ಸಲ್

ಸಾಂದರ್ಭಿಕ ಚಿತ್ರ

ಬೆಂಗಳೂರು: ಕಬ್ಬನ್ ಪಾರ್ಕ್‌ನಲ್ಲಿ (Cubbon Park) ನಾಳೆಯಿಂದ (ಆ.2) ಆರಂಭವಾಗಬೇಕಿದ್ದ ಬ್ಲೈಂಡ್ ಡೇಟಿಂಗ್ ಕಾರ್ಯಕ್ರಮವೊಂದು ಆರಂಭ ಮಾಡುವುದಕ್ಕೂ ಮುನ್ನವೇ ಕ್ಯಾನ್ಸಲ್ ಆಗಿದೆ.

ಬುಕ್ ಮೈ ಶೋ ಬ್ಲೈಂಡ್ ಡೇಟಿಂಗ್ (Blind Dating) ಕಾರ್ಯಕ್ರಮದ ಬಗ್ಗೆ ಜಾಹೀರಾತು ಪ್ರಕಟಿಸಿತ್ತು. 199 ರೂ.ಗೆ ಡೇಟಿಂಗ್ ಟಿಕೆಟ್ ನೀಡುವುದಾಗಿ ಹೇಳಿಕೊಂಡಿದ್ದರು. ಅಪರಿಚಿತ ವ್ಯಕ್ತಿಗಳೊಂದಿಗೆ ಡೇಟಿಂಗ್ ಮಾಡಲು ಅವಕಾಶ ಕಲ್ಪಿಸುವ ಶೋ ಇದಾಗಿತ್ತು. ಇದನ್ನೂ ಓದಿ: ಚೀನಾ ಉದ್ಯಮಿಯಿಂದ 100 ಕೋಟಿ ರೂ. ಬಂಡವಾಳ ಹೂಡಿಕೆ

18 ವರ್ಷ ತುಂಬಿರುವ ಯುವಕ-ಯುವತಿಯರಿಗೆ ಅಹ್ವಾನ ನೀಡಲಾಗಿತ್ತು. ಆಗಸ್ಟ್ 2 ರಿಂದ 31 ರವರೆಗೆ ಈ ಬ್ಲೈಂಡ್ ಡೇಟ್ ಈವೆಂಟ್ ನಡೆಯಲಿದೆ ಎಂದು ಆಯೋಜಕರು ಹೇಳಿಕೊಂಡಿದ್ದರು. ಇದನ್ನೂ ಓದಿ: ರಕ್ಷಕ್‌ ಬುಲೆಟ್‌ ಎಡವಟ್ಟಿನಿಂದ ಯುವಕನ ಕಾಲು ಮುರಿತ

ಕಾರ್ಯಕ್ರಮದ ಬಗ್ಗೆ ತೋಟಗಾರಿಕೆ ಇಲಾಖೆ ನಿರಾಕರಿಸಿ ಆಯೋಜಕರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಕಬ್ಬನ್ ಪಾರ್ಕ್ ಪೊಲೀಸರು ಆಯೋಜಕ ವಿನಿತ್‌ನನ್ನ ಕರೆಸಿ ವಿಚಾರಣೆ ಮಾಡಿದ್ದಾರೆ. ಇದನ್ನೂ ಓದಿ: ಕೂಡಲೇ ಒಳಮೀಸಲಾತಿ ಜಾರಿ ಮಾಡದಿದ್ರೆ ಸರ್ಕಾರದ ವಿರುದ್ಧ ಅಸಹಕಾರ ಚಳವಳಿ: ಎ.ನಾರಾಯಣಸ್ವಾಮಿ

ಈ ವೇಳೆ ಆಯೋಜಕ ವಿನಿತ್, ಕಾನೂನಿನ ಅರಿವು ಇಲ್ಲದೆ ಕಾರ್ಯಕ್ರಮ ಆಯೋಜನೆ ಮಾಹಿತಿ ಹಂಚಿಕೊಂಡಿದ್ದೆ. ನನ್ನಿಂದ ತಪ್ಪಾಗಿದೆ. ಇಲ್ಲಿಯವರೆಗೆ ನಾಲ್ವರಷ್ಟೇ ನೋಂದಣಿ ಮಾಡಿಕೊಂಡಿದ್ದಾರೆ. ಕಾರ್ಯಕ್ರಮ ರದ್ದಾಗಿರುವ ಬಗ್ಗೆ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದಾಗಿ ಹೇಳಿ ಪೊಲೀಸರ ಮುಂದೆ ಕ್ಷಮೆ ಕೇಳಿಕೊಂಡಿದ್ದರಿಂದ ಕ್ಷಮಾಪಣೆ ಪತ್ರ ಬರೆಸಿ ಕಳುಹಿಸಿದ್ದಾರೆ.