ಬೆಂಗಳೂರು: 2018ಗೆ ಟಾಟಾ ಹೇಳಿ ಹೊಸ ವರ್ಷ 2019 ಅನ್ನು ರಾಜ್ಯದ ಜನ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಸಾವಿರಾರು ಯುವಕ-ಯುವತಿಯರು ರಸ್ತೆಗೆ ಇಳಿದು ನೃತ್ಯ ಮಾಡಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಆದರೆ ಅಂಧ ಕ್ರಿಕೆಟಿಗರೊಬ್ಬರು ರಸ್ತೆ ಬದಿ ಅನಾಥರಿಗೆ ಊಟ, ಬಟ್ಟೆ, ಬೆಡ್ ಶೀಟ್ ನೀಡುವ ಮೂಲಕ ಹೊಸ ವರ್ಷಾಚರಣೆಯನ್ನು ವಿಭಿನ್ನವಾಗಿ ಆಚರಿಸಿದ್ದಾರೆ.
ಬೆಂಗಳೂರಿನ ಸಿಟಿ ಮಾರ್ಕೆಟ್ ಸುತ್ತಮುತ್ತಲಿನ ಏರಿಯಾಗಳಲ್ಲಿ ಊಟ, ಬಟ್ಟೆ ನೀಡಲಾಯಿತು. ಅಂತರಾಷ್ಟ್ರೀಯ ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ್ ಕುಟುಂಬ ಸಮೇತರಾಗಿ ಬಂದು ಬಡವರಿಗೆ ಬಟ್ಟೆ, ಫುಡ್ ವಿತರಿಸಿ ವಿಭಿನ್ನವಾಗಿ ಆಚರಿಸಿದರು.

ಕಳೆದ ಹೊಸ ವರ್ಷದಲ್ಲೂ ಶೇಖರ್ ನಾಯ್ಕ್ ಸಿಲಿಕಾನ್ ಸಿಟಿಯ ಸೆಂಟರ್‍ನ ಕೆ.ಆರ್ ಮಾರ್ಕೆಟ್‍ನಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಮತ್ತು ಅರ್ಥಪೂರ್ಣವಾಗಿ ಆಚರಿಸಿದ್ದರು. ಶೇಖರ್ ನಾಯ್ಕ್ ಯುವ ಜನತೆಗೆ ಮಾದರಿಯಾಗುವ ರೀತಿಯಲ್ಲಿ ಹೊಸ ವರ್ಷವನ್ನು ಆಚರಿಸಿದ್ದರು. ಕೆ.ಆರ್ ಮಾರ್ಕೆಟ್, ವಿವಿ ಪುರ, ಜೆಪಿ ನಗರದಲ್ಲಿ ನಿರಾಶ್ರಿತರಿಗೆ ತಿಂಡಿ ಹಾಗೂ ಹೊದಿಕೆಯನ್ನು ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದರು. ಚಳಿಯಲ್ಲಿ ಬೀದಿಯಲ್ಲೇ ಮಲಗಿರುವವರಿಗೆ ಹೊದಿಕೆ, ತಿಂಡಿ ನೀಡಿ ಹೊಸ ವರ್ಷಾಚರಣೆಯಲ್ಲೂ ಮಾನವೀಯತೆ ಮೆರೆದಿದ್ದರು.

2019 ಹೊಸ ವರ್ಷದ ಹಿನ್ನೆಲೆಯಲ್ಲಿ ಸೋಮವಾರ ಸಂಜೆಯಿಂದಲೇ ಬೆಂಗಳೂರಿನ ಪಬ್, ಬಾರ್ ಅಂಡ್ ರೆಸ್ಟೋರೆಂಟ್, ಹೋಟೆಲ್, ಕ್ಲಬ್‍ಗಳಲ್ಲಿ ಪಾರ್ಟಿಗಳು ಜೋರಾಗಿತ್ತು. ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸಿತ್ತು. ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರವಹಿಸಿತ್ತು. ಮಂಗಳವಾರ ಬೆಳಗ್ಗೆ 6 ಗಂಟೆವರೆಗೆ ವಿಮಾನ ನಿಲ್ದಾಣ ರಸ್ತೆ, ತುಮಕೂರು ರೋಡ್‍ನ ಫ್ಲೈಓವರ್ ಹೊರತುಪಡಿಸಿ ಬೆಂಗಳೂರಿನ ಎಲ್ಲಾ ಫ್ಲೈಓವರ್‍ಗಳಲ್ಲಿ ಸಂಚಾರವನ್ನು ರದ್ದು ಮಾಡಲಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply