ಪಂಜಾಬ್‌ನಲ್ಲಿ ಪೊಲೀಸ್ ಗುಪ್ತಚರ ಪ್ರಧಾನ ಕಚೇರಿ ಮೇಲೆಯೇ ಗ್ರೆನೇಡ್ ದಾಳಿ

ಚಂಡೀಗಢ: ಪೊಲೀಸ್‍ನ ಗುಪ್ತಚರ ಪ್ರಧಾನ ಕಚೇರಿ ಮೇಲೆಯೇ ರಾಕೆಟ್ ಲಾಂಚರ್ ಬಳಸಿ ಗ್ರೆನೇಡ್ ದಾಳಿ ನಡೆಸಿದ ಘಟನೆ ಪಂಜಾಬ್‍ನ ಮೊಹಾಲಿಯಲ್ಲಿ ನಡೆದಿದೆ.

ಎಸ್‍ಎಎಸ್ ನಗರದದಲ್ಲಿರುವ ಪೊಲೀಸ್ ಇಂಟಲಿಜೆನ್ಸ್ ಹೆಡ್ ಕ್ವಾರ್ಟರ್ಸ್‍ನಲ್ಲಿ ಸಣ್ಣ ಸ್ಫೋಟ ಸಂಭವಿಸಿದೆ. ಗ್ರೆನೇಟ್ ಸ್ಫೋಟವು ಚಿಕ್ಕ ಪ್ರಮಾಣದಲ್ಲಿ ಆಗಿದ್ದು, ಸಂಪೂರ್ಣವಾಗಿ ಕಚೇರಿಯ ಗಾಜುಗಳು ಒಡೆದು ಹೋಗಿದೆ. ಘಟನೆಯಲ್ಲಿ ಯಾವುದೇ ಭಯೋತ್ಪಾದಕ ಕೃತ್ಯಗಳು ನಡೆದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಇದನ್ನು ಆರ್‌ಪಿಜಿ ದಾಳಿ ಶಂಕಿಸಿದ್ದಾರೆ.

ಸ್ಫೋಟದಿಂದಾಗಿ ಯಾವುದೇ ಹಾನಿ ಆಗಿಲಿಲ್ಲ. ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು, ತನಿಖೆ ನಡೆಸುತ್ತಿದ್ದಾರೆ. ಫೋರೆನ್ಸಿಕ್ ತಂಡಗಳನ್ನು ಕರೆಸಲಾಗಿದೆ ಘಟನೆ ನಡೆದ ಪ್ರದೇಶದಲ್ಲಿ ಪೊಲೀಸರು ಸುತ್ತುವರಿದಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಸ್ಥಳದಲ್ಲಿದೆ. ಎಂದು ಮೊಹಾಲಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಗೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ

ಈ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಟ್ವೀಟ್ ಮಾಡಿದ್ದು, ಮೊಹಾಲಿಯಲ್ಲಿರುವ ಪಂಜಾಬ್ ಪೆÇಲೀಸ್‍ನ ಇಂಟೆಲಿಜೆನ್ಸ್ ವಿಂಗ್ ಪ್ರಧಾನ ಕಚೇರಿಯಲ್ಲಿ ಸ್ಫೋಟ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ತನಿಖೆಯನ್ನು ಪ್ರಾರಂಭಿಸಲಾಗಿದೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಪಂಜಾಬ್‍ನ ವಾತಾವರಣವನ್ನು ಹಾಳುಮಾಡಲು ಪ್ರಯತ್ನಿಸಿದವರನ್ನು ಬಿಡಲಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಪ್ರಯಾಣಿಕರು ರಾತ್ರಿ ಮೊಬೈಲ್‍ನಲ್ಲಿ ಗಟ್ಟಿಯಾಗಿ ಮಾತನಾಡುವಂತಿಲ್ಲ: ಭಾರತೀಯ ರೈಲ್ವೆ

Comments

Leave a Reply

Your email address will not be published. Required fields are marked *