ಕೃಷ್ಣ ಮೃಗ ಬೇಟೆ ಪ್ರಕರಣ-ಸಲ್ಮಾನ್ ದೋಷಿ, ಉಳಿದ ಆರು ಮಂದಿಗೆ ಬಿಗ್ ರಿಲೀಫ್!

ನವದೆಹಲಿ: ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ದೋಷಿ ಎಂದು ಜೋಧಪುರ ಸಿಜೆಎಂ ಕೋರ್ಟ್ ತೀರ್ಪು ನೀಡಿದೆ.

ಪ್ರಕರಣದ ಇತರೆ ಆರೋಪಿಗಳಾದ ಸೈಫ್ ಅಲಿಖಾನ್, ಟಬು, ನೀಲಂ, ಸೋನಾಲಿ ಅವರನ್ನು ನಿರ್ದೋಷಿಗಳೆಂದು ಮುಖ್ಯ ನ್ಯಾಯಮೂರ್ತಿ ದೇವ್ ಕುಮಾರ್ ಖತ್ರ ತೀರ್ಪು ಪ್ರಕಟಿಸಿದ್ದಾರೆ. ಸದ್ಯ ಶಿಕ್ಷೆ ಪ್ರಮಾಣದ ಬಗ್ಗೆ ವಾದ-ಪ್ರತಿವಾದ ನಡೀತಿದ್ದು, ಸನ್ನಡತೆ ಆಧಾರದ ಮೇಲೆ ಶಿಕ್ಷೆ ಕಡಿಮೆಗೊಳಿಸುವಂತೆ ಸಲ್ಮಾನ್ ಪರ ವಕೀಲ ಮನವಿ ಮಾಡಿದ್ದಾರೆ.

1998ರ ಸೆಪ್ಟೆಂಬರ್ 26 ರಾಜಸ್ಥಾನದ ಕಂಕಾನಿ ಗ್ರಾಮದಲ್ಲಿ ‘ಹಮ್ ಸಾಥ್ ಸಾಥ್ ಹೈ’ ಸಿನಿಮಾದ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಕೃಷ್ಣ ಮೃಗದ ಬೇಟೆ ಆಡಿದ್ದರು. ಸಲ್ಮಾನ್ ಬೇಟೆ ಆಡುವ ವೇಳೆ ಸೈಫ್ ಅಲಿ ಖಾನ್, ತಬು, ಸೊನಾಲಿ ಬೇಂದ್ರೆ, ನೀಲಮ್ ಸಹ ಹಾಜರಿದ್ದರು. ಅಳಿವಿನಂಚಿನಲ್ಲಿರುವ ಕೃಷ್ಣ ಮೃಗ ಬೇಟೆಗೆ ನಟರು ಜಿಪ್ಸಿ ಬಳಸಿದ್ದರು. ಅಕ್ರಮ ಶಸ್ತ್ರಾಸ್ತ್ರ, ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿ ಸಲ್ಮಾನ್ ಸೇರಿ ಎಲ್ಲರ ಮೇಲೆ ನಾಲ್ಕು ಕೇಸ್ ದಾಖಲಾಗಿತ್ತು.

ಬೇಟೆಯಾಡುವ ವೇಳೆ ಪ್ರವಾಸಿ ಗೈಡ್ ಗಳಾದ ದುಶ್ಯಂತ್ ಸಿಂಗ್ ಮತ್ತು ಸಲ್ಮಾನ್ ಸಹಾಯಕ ದಿನೇಶ್ ಗೌರೆ ಸಹ ಸಲ್ಮಾನ್ ಜೊತೆಯಲ್ಲಿದ್ದರು. ಅಂದು ಸಲ್ಮಾನ್ ಜೊತೆಯಲ್ಲಿದ್ದ ಸಹಾಯಯ ಇಲ್ಲಿಯವರೆಗೆ ಎಲ್ಲಿದ್ದಾನೆ ಎನ್ನುವುದು ಪತ್ತೆಯಾಗಿಲ್ಲ.

Comments

Leave a Reply

Your email address will not be published. Required fields are marked *