ಬೆಂಗಳೂರಿನಲ್ಲಿ ಟಿಕಾಯತ್‌ ಮುಖಕ್ಕೆ ಮಸಿ – ವ್ಯಕ್ತಿಗೆ ಥಳಿತ

ಬೆಂಗಳೂರು: ರಾಷ್ಟ್ರೀಯ ‌ಕಿಸಾನ್ ಮೋರ್ಚಾ ಅಧ್ಯಕ್ಷ ರಾಕೇಶ್ ಸಿಂಗ್ ಟಿಕಾಯತ್ ಮುಖಕ್ಕೆ ಮಸಿ ಬಳಿದು ಹಲ್ಲೆಗೆ ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ.

ಕೋಡಿಹಳ್ಳಿ‌ ಚಂದ್ರಶೇಖರ್‌ ಅವರ ಮೇಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ಗಾಂಧಿ ಭವನದಲ್ಲಿ ಸಭೆ ಕರೆಯಲಾಗಿತ್ತು. ರಾಷ್ಟ್ರೀಯ ಕಿಸಾನ್ ಮೊರ್ಚಾ ಅಧ್ಯಕ್ಷ ರಾಕೇಶ್ ಸಿಂಗ್ ಟಿಕಾಯತ್, ಯುದ್ದವೀರ ಸಿಂಗ್ , ಪ್ರೊಫೆಸರ್ ರವಿ ವರ್ಮಕುಮಾರ್, ಚುಕ್ಕಿ ನಂಜುಂಡಸ್ವಾಮಿ ಅವರು ವೇದಿಕೆಯಲ್ಲಿದ್ದರು.

ಈ ವೇಳೆ ಏಕಾಏಕಿ ನುಗ್ಗಿದ ಯುವಕ ಟಿಕಾಯತ್ ಮುಖಕ್ಕೆ ಮಸಿ ಬಳಿದು ಮೋದಿ ಮೋದಿ, ನಕಲಿ ಹೋರಾಟಗಾರರಿಗೆ ಧಿಕ್ಕಾರ ಎಂದು‌ ಘೋಷಣೆ ಕೂಗಿದ್ದಾನೆ. ಏಕಾಏಕಿ ವೇದಿಕೆಗೆ ನುಗ್ಗಿದ ಯುವಕ ಟಿವಿ ಚಾನಲ್ ಮೈಕ್ ಕಿತ್ತುಕೊಂಡು‌ ರಾಕೇಶ್ ಸಿಂಗ್ ಟಿಕಾಯತ್ ಮೇಲೆ ಹಲ್ಲೆ ನಡೆಸಿ ಮುಖಕ್ಕೆ ಮಸಿ ಎರಚಿದ್ದಾನೆ.  ಇದನ್ನೂ ಓದಿ: ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಹಂಪ ನಾಗರಾಜಯ್ಯ ರಾಜೀನಾಮೆ

ಈ ಸಂದರ್ಭದಲ್ಲಿ ಅಲ್ಲಿ ಮಾರಾಮಾರಿ ನಡೆದಿದ್ದು ಅಲ್ಲಿದ್ದ ವ್ಯಕ್ತಿಗಳು ಯುವಕನನ್ನು ಹಿಡಿದು ಥಳಿಸಿದ್ದಾರೆ. ಈ ವೇಳೆ ಕುರ್ಚಿಗಳನ್ನು ಹಿಡಿದು ತೂರಿದ ವೀಡಿಯೋ ಲಭ್ಯವಾಗಿದೆ.

ಭಾರತ್‌ ರಕ್ಷಣಾ ವೇದಿಕೆ ಸದಸ್ಯರು ಎನ್ನಲಾದ ಭರತ್ ಶೆಟ್ಟಿ, ದಿಲೀಪ್ ಹಾಗೂ ಶಿವಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೈತ ಮುಖಂಡರು ನೀಡುವ ದೂರು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ‌ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *