ಹಿಂದೂಗಳ ನರಮೇಧದಲ್ಲೂ ಪೋಸ್ಟರ್ ವಾರ್; ಕಾಂಗ್ರೆಸ್‌ನಿಂದ ಮೋದಿ ʻಗಾಯಬ್ʼ ಗೇಲಿ – ನೀವು ಪಾಕ್ ಏಜೆಂಟ್‌ಗಳು ಅಂತ ಬಿಜೆಪಿ ತಿರುಗೇಟು

ನವದೆಹಲಿ: ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ವಿರುದ್ಧ ಕಾಂಗ್ರೆಸ್ ಹಾಕಿದ ಪೋಸ್ಟರ್ ವಿವಾದಕ್ಕೆ (Poster War) ಕಾರಣವಾಗಿದೆ.

`ಬಂಧ್‌ಗಲಾ ಕುರ್ತಾ, ಚೂಡಿದಾರ್ ಪೈಜಾಮಾ ಮತ್ತು ಕಪ್ಪು ಪಾದರಕ್ಷೆಯ ಮೇಲೆ ʻಗಾಯಾಬ್ʼ (ಕಾಣೆಯಾಗಿದ್ದಾರೆ) ಎಂದು ಬರೆದಿರುವ ಪೋಸ್ಟರ್ ಹಾಕಿ ಕಾಂಗ್ರೆಸ್ (congress) ಅಧಿಕೃತವಾಗಿ ಟ್ವೀಟ್ ಮಾಡಿದೆ. ಈ ಪೋಸ್ಟರ್‌ನಲ್ಲಿ ಯಾರ ಮುಖವೂ ಇಲ್ಲ. ಆದರೆ, ಫೋಟೋ ಶೈಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹೋಲುವಂತಿದೆ.

ಪಹಲ್ಗಾಮ್ ದಾಳಿ ಬಳಿಕ ನಡೆದ ಸರ್ವಪಕ್ಷ ಸಭೆಗೆ ಗೈರಾಗಿದ್ದ ಹಿನ್ನೆಲೆ ಪ್ರಧಾನಿ ಮೋದಿಯನ್ನು ಟೀಕಿಸಿ, ಜವಾಬ್ದಾರಿ ಸಮಯದಲ್ಲಿ ನಾಪತ್ತೆ ಅಂತ ಕ್ಯಾಪ್ಶನ್ ಕೊಟ್ಟಿದೆ. ಇದನ್ನೂ ಓದಿ: 4 ದಿನದ ಮೊದಲೇ ಪಹಲ್ಗಾಮ್‌ನಿಂದ 7 ಕಿ.ಮೀ ದೂರದ ಜಾಗಕ್ಕೆ ಬಂದಿದ್ದ ಉಗ್ರರು

ಇನ್ನೂ ಕಾಂಗ್ರೆಸ್ ಮಾಡಿರುವ ಈ ಪೋಸ್ಟನ್ನು ಪಾಕಿಸ್ತಾನದ (Pakistan) ಮಾಜಿ ಸಚಿವ ಫವಾದ್ ಅಹ್ಮದ್ ಹುಸೇನ್ ಚೌಧರಿ ಶೇರ್ ಮಾಡಿದ್ದು, ʻಕತ್ತೆಯ ತಲೆಯಿಂದ ಕೊಂಬುಗಳು ಕಾಣೆಯಾಗಿವೆ, ಆದರೆ ಇಲ್ಲಿ ಮೋದಿ ಕಾಣೆಯಾಗಿದ್ದಾರೆʼ ಅಂತ ಅಣಕಿಸಿದ್ದಾನೆ. ಅಲ್ಲದೇ, ಹ್ಯಾಷ್ ಟ್ಯಾಗ್‌ನಲ್ಲಿ ʻನಾಟಿ ಕಾಂಗ್ರೆಸ್ʼ ಎಂದು ಪೋಸ್ಟ್ ಮಾಡಿದ್ದಾನೆ. ಈ ಬೆಳವಣಿಗೆ ಬಿಜೆಪಿ ಹಾಗೂ ಜನರನ್ನು ಸಿಟ್ಟಿಗೇಳುವಂತೆ ಮಾಡಿದೆ. ಇದನ್ನೂ ಓದಿ: Pegasus Case | ದೇಶ ಸ್ಪೈವೇರ್‌ ಹೊಂದಿರುವುದರಲ್ಲಿ ಯಾವುದೇ ತಪ್ಪಿಲ್ಲ: ಸುಪ್ರೀಂ ಕೋರ್ಟ್‌

ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಕಿಡಿಕಾರಿ, ಕಾಂಗ್ರೆಸ್‌ಗೆ ʻಲಷ್ಕರ್ ಇ ಪಾಕಿಸ್ತಾನ್‌ ಕಾಂಗ್ರೆಸ್ʼ ಅಂದಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲ ನಾಯಕರನ್ನು ಒಟ್ಟಿಗೆ ಸೇರಿಸಿ, ʻಕಾಂಗ್ರೆಸ್ ಕೇ ಹಾತ್, ಪಾಕಿಸ್ತಾನ್ ಕೆ ಸಾಥ್ʼ (ಕಾಂಗ್ರೆಸ್ ಕೈ ಪಾಕಿಸ್ತಾನದ ಜೊತೆಗೆ) ಎಂದು ಪೋಸ್ಟ್ ಮಾಡಿ ಬಿಜೆಪಿ ತಿರುಗೇಟು ನೀಡಿದೆ. ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಮತ್ತು ಪದ್ಧತಿಗಳು ಇಸ್ಲಾಮಾಬಾದ್‌ನಂತೆಯೇ ಇವೆ ಎಂದು ಟೀಕಿಸಿದೆ. ಇತ್ತ, ರಾಜ್ಯ ನಾಯಕರಾದ ಆರ್‌. ಅಶೋಕ್, ಸಿ.ಟಿ ರವಿ ಕೂಡ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ಅಕ್ರಮ ವಲಸಿಗರ ವಿರುದ್ಧ ಬೃಹತ್‌ ಕಾರ್ಯಾಚರಣೆ – 74 ಬುಲ್ಡೋಜರ್, 200 ಟ್ರಕ್, 1800 ಕಾರ್ಮಿಕರು, 3000 ಪೊಲೀಸರ ಬಳಕೆ