ಕಾಂಗ್ರೆಸ್‍ನ PayCM ಅಸ್ತ್ರಕ್ಕೆ ಬಿಜೆಪಿಯಿಂದ KaiPe ಪ್ರತ್ಯಸ್ತ್ರ

ಬೆಂಗಳೂರು: ಕಾಂಗ್ರೆಸ್‍ನ ಪೇಸಿಎಂ (PayCM) ಅಸ್ತ್ರಕ್ಕೆ ಪ್ರತಿಯಾಗಿ ಬಿಜೆಪಿ ಪ್ರತ್ಯಸ್ತ್ರ ಹೂಡಿದೆ. ಫೋನ್‍ಪೇ (PhonePay) ಮಾದರಿಯಲ್ಲಿ `ಕೈ’ಪೇ (KaiPe) ಕ್ಯೂ ಆರ್ ಕೋಡ್ ಪೋಸ್ಟರ್ ರಿಲೀಸ್ ಮಾಡಿದೆ.

ನಕಲಿ ಗಾಂಧಿ ಕುಟುಂಬಕ್ಕೆ ಗಾಂಧಿ ಹೆಸರು ಬಂದಿದ್ದು ಹೇಗೆ.? ಅಸಲಿ ಸತ್ಯ ತಿಳಿಯಲು ಇಲ್ಲಿ ಸ್ಕ್ಯಾನ್ ಮಾಡಿ ಅಂತ ಪೋಸ್ಟರ್ ನಲ್ಲಿ ಬರೆದಿದೆ. ಅಷ್ಟೇ ಅಲ್ಲ ಪೇಸಿಎಂ ಅಂದ್ರೆ ಪೇ ಟು ಕಾಂಗ್ರೆಸ್ ಮೇಡಂ.. ಕೆಸಿಸಿ ಅಂದ್ರೆ ಕಂಗಾಲ್ ಕಾಂಗ್ರೆಸ್ ಕಂಪನಿ ಅಂತ ಪೋಸ್ಟರ್ ರಿಲೀಸ್ ಮಾಡಿದೆ. ಇದರಲ್ಲಿ ಸಿದ್ದರಾಮಯ್ಯ, ಡಿಕೆಶಿ, ಪ್ರಿಯಾಂಕ್ ಖರ್ಗೆ, ಕೆಜೆ ಜಾರ್ಜ್, ಎಂಬಿ ಪಾಟೀಲ್ ಹಾಗೂ ರಾಮಲಿಂಗಾರೆಡ್ಡಿ ಹೆಸರುಗಳನ್ನು ಉಲ್ಲೇಖಿಸಿದೆ. ಆದರೆ ಇದಕ್ಕೆಲ್ಲಾ ಡೋಂಟ್‍ಕೇರ್ ಎನ್ನುತ್ತಾ ಕಾಂಗ್ರೆಸ್ (Congress), ಪೇಸಿಎಂ ಕ್ಯಾಂಪೇನ್ ಮುಂದುವರಿದ ಭಾಗವಾಗಿ ಇವತ್ತು ಗ್ರಾಫಿಕ್ Graphic) ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.

ಅಷ್ಟೇ ಅಲ್ಲ ಕಾಂಗ್ರೆಸ್ ನಾಯಕರು, ರೇಸ್‍ಕೋರ್ಸ್ ರಸ್ತೆಯಲ್ಲಿ ಗೋಡೆ, ಪೊಲೀಸ್ ಬ್ಯಾರಿಕೇಡ್, ಬಿಎಂಟಿಸಿ, ಟೋಯಿಂಗ್ ವಾಹನ. ಹೀಗೆ ಎದುರಿಗೆ ಏನು ಕಾಣುತ್ತೋ ಅದರ ಮೇಲೆಲ್ಲಾ ಪೇಸಿಎಂ ಪೋಸ್ಟರ್ ಅಂಟಿಸಲು ಪ್ರಯತ್ನ ನಡೆಸಿದ್ರು. ಖುದ್ದು ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್ (DK Shivakumar) ಇದರ ನೇತೃತ್ವ ವಹಿಸಿದ್ರು. ಕೈ ನಾಯಕರು ಪೋಸ್ಟರ್ ಅಂಟಿಸಿದಂತೆಲ್ಲಾ ಪೊಲೀಸರು ಹರಿಯುತ್ತಿದ್ರು. ಈ ವೇಳೆ ಬಿ.ಕೆ. ಹರಿಪ್ರಸಾದ್ (B.K Hariprasad) ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ರು. ಇದನ್ನೂ ಓದಿ: ಕೆಲಸ ಮಾಡದೇ ಬಿಲ್ ಮಾಡಿಕೊಂಡಿರುವ 100% ಅಕ್ರಮ ಪಕ್ಷ ಕಾಂಗ್ರೆಸ್: ಲಕ್ಷ್ಮಣ ಸವದಿ

ಕುಣಿಗಲ್ ಶಾಸಕ ರಂಗನಾಥ್ (Ranganath) ಪೊಲೀಸರ ಮೇಲೆ ಹಲ್ಲೆಗೂ ಮುಂದಾದ್ರು. ಇಬ್ಬರು ಪೊಲೀಸರು ಕೆಳಕ್ಕೆ ಬಿದ್ದ ಘಟನೆಯೂ ನಡೀತು. ಕೊನೆಗೆ ಎಲ್ಲರನ್ನು ಪೊಲೀಸರು ವಶಕ್ಕೆ ಪಡೆದುಬಿಟ್ರು. ಈ ಹೈಡ್ರಾಮಾ ಪರಿಣಾಮ ರೇಸ್‍ಕೋರ್ಸ್ ರಸ್ತೆಲಿ ಟ್ರಾಫಿಕ್ ಜಾಮ್ (Traffic Jam) ಆಗಿ ವಾಹನ ಸವಾರರು ಪರದಾಡಿದ್ರು. ಮತ್ತೊಂದ್ಕಡೆ ಮುಖ್ಯಮಂತ್ರಿ ಟಾರ್ಗೆಟ್ ಮಾಡಿ ಕಾಂಗ್ರೆಸ್ ಸರಣಿ ಟ್ವೀಟ್ (Tweet) ಮಾಡಿದೆ. ಪೇಸಿಎಂ ಎಂದಾಕ್ಷಣ ಸಿಎಂ ಬೊಮ್ಮಾಯಿ ಹೆಗಲು ಮುಟ್ಟಿಕೊಳ್ಳೋದೇಕೆ? ಕಳ್ಳನ ಮನಸ್ಸು ಹುಳ್ಳುಳ್ಳಗೆ ಎಂಬ ಮಾತು ನಿಜವೇ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ವಕ್ಫ್ ಆಸ್ತಿ ವರದಿ, 40% ಸರ್ಕಾರ ಹಗರಣ ಗಲಾಟೆ ನಡುವೆ ಮಳೆಗಾಲದ ಅಧಿವೇಶನ ಬಲಿ

ಪಿಎಸ್‍ಐ ಹಗರಣ ನಿರಾಕರಿಸಿದ್ರಿ. ದಡೆಸುಗೂರ್, ಅಶ್ವಥ್‍ನಾರಾಯಣ್ (Ashwath Narayan) ವಿಚಾರಣೆಗೆ ಒಪ್ಪಲಿಲ್ಲ. ಪೇಮೆಂಟ್ ಪಾಲು ನಿಮಗೂ ತಲುಪಿದೆಯೇ ಎಂದು ಕೇಳಿದೆ. ಕಾಂಗ್ರೆಸ್ ಪೋಸ್ಟರ್ ರಾಜಕೀಯ ಖಂಡಿಸಿ ಬಿಜೆಪಿಗರು ವಿಧಾನಸೌಧ (VidhanaSoudha) ದ ಗಾಂಧಿ ಪ್ರತಿಮೆ ಮುಂದೆ ಬಿಜೆಪಿಗರು ಪ್ರತಿಭಟನೆ ನಡೆಸಿದ್ರು. ತಲೆಮಾರುಗಳಿಂದ ಭ್ರಷ್ಟಾಚಾರ ಮಾಡೋ ಪಕ್ಷ ಕಾಂಗ್ರೆಸ್ ಎಂದು ಧಿಕ್ಕಾರ ಕೂಗಿದ್ರು. ಮಜವಾದಿ ಸಿದ್ದರಾಮಯ್ಯ, ಚೀಟಿ ನುಂಗಿದ ಡಿಕೆಶಿ ಎಂದು ವ್ಯಂಗ್ಯ ಮಾಡಿದ್ರು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *