ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವೂ ಜೆಡಿಎಸ್ ಪಕ್ಷದಿಂದಲೇ 30 ಸ್ಥಾನಗಳನ್ನು ಹೆಚ್ಚಾಗಿ ಗಳಿಸಿದೆ ಎಂದು ಲೋಕೋಪಯೋಗಿ ಸಚಿವ ಎಚ್‍ಡಿ ರೇವಣ್ಣ ಹೇಳಿದ್ದಾರೆ.
104 ಶಾಸಕರಿಗೂ ದೇವರ ಆಶೀರ್ವಾದವಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ವಿಧಾನಸೌಧಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯ 104 ಮಂದಿ ಶಾಸಕರಿಗೆ ದೇವರ ಆಶೀರ್ವಾದ ಇದೆ ಎಂದು ಅವರ ಮುಂಖಡರು ಹೇಳುತ್ತಾರೆ. ಆದರೆ ಅವರೇ ಏಕೆ ಸರ್ಕಾರ ರಚೆನ ಮಾಡಲು ಆಗಲಿಲ್ಲ. ದೇವರ ಆಶೀರ್ವಾದ ಇದ್ದಿದ್ದರೆ ಅವರೇ ಅಧಿಕಾರ ಪಡೆಯಬಹುದಿತ್ತು ಎಂದು ಕಿಡಿಕಾರಿದರು.

ಇದೇ ವೇಳೆ ಬಿಜೆಪಿ 104 ಸ್ಥಾನ ಗೆಲ್ಲಲು ಜೆಡಿಎಸ್ ಕಾರಣ ಎಂದ ರೇವಣ್ಣ ಬಿಜೆಪಿ ರಾಜ್ಯದಲ್ಲಿ ಜೆಡಿಎಸ್ ಹೆಸರು ಹೇಳಿಕೊಂಡು ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಿಸಿದೆ. ನಮ್ಮಿಂದಲೇ 30 ಸೀಟು ಹೆಚ್ಚಾಗಿ ಲಭಿಸಿದೆ. ಜೆಡಿಎಸ್ ಇಲ್ಲದಿದ್ದರೆ ಆ ಸ್ಥಾನಗಳು ಕೂಡ ಬರುತ್ತಿರಲಿಲ್ಲ. ರಾಜ್ಯದಲ್ಲಿ ಇದಕ್ಕೂ ಮುನ್ನ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಏನು ಸಾಧನೆ ಮಾಡಿದ್ದಾರೆ ತಿಳಿದಿದೆ. ಈ ಕುರಿತು ನಾನು ಹೆಚ್ಚಿನ ಪ್ರತಿಕ್ರಿಯೆ ನೀಡಲ್ಲ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply