ರಾಜ್ಯಸಭೆಯಲ್ಲಿ 3 ಸ್ಥಾನ ಗೆದ್ದ ಬಿಜೆಪಿ – ಕಾಂಗ್ರೆಸ್ ಗುದ್ದು, ಭಿನ್ನರಿಂದ ದಳಪತಿಗೆ ಶಾಕ್

ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ರೆ, ಕಾಂಗ್ರೆಸ್ ಒಂದು ಸ್ಥಾನಕ್ಕೆ ತೃಪ್ತಿಪಟ್ಟಿದೆ. ಜೆಡಿಎಸ್ ಶೂನ್ಯ ಸಂಪಾದಿಸಿ ಮುಜುಗರ ಅನುಭವಿಸಿದೆ.

ಬಿಜೆಪಿಯ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸತತ ಎರಡನೇ ಬಾರಿ ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ. ಇವರೊಂದಿಗೆ ನಟ ಜಗ್ಗೇಶ್, ಕಾಂಗ್ರೆಸ್‍ನ ಜೈರಾಮ್ ರಮೇಶ್ ಮೊದಲ ಪ್ರಾಶಸ್ತ್ಯದ ಮತಗಳಿಂದ, ಬಿಜೆಪಿ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಮೊದಲ ಮತ್ತು ಎರಡನೇ ಪ್ರಾಶಸ್ತ್ಯದ ಮತಗಳಿಂದ ಗೆದ್ದಿದ್ದಾರೆ. ಲೆಹರ್ ಸಿಂಗ್ ಗೆಲುವಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಗುದ್ದಾಟ ಪರೋಕ್ಷವಾಗಿ ನೆರವಾಗಿದೆ. ಇದನ್ನೂ ಓದಿ: ಸೋತು ಗೆದ್ದ ಸಿದ್ದರಾಮಯ್ಯ – ಬಿಜೆಪಿ 3, ಕಾಂಗ್ರೆಸ್‍ಗೆ 1 ಸ್ಥಾನ

ಜೆಡಿಎಸ್ ಮಣಿಸುವ ಹಠಕ್ಕೆ ಬಿದ್ದು ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮನ್ಸೂರ್ ಖಾನ್ ಮತ್ತು ಜೆಡಿಎಸ್‍ನಿಂದ ಸ್ಫರ್ಧಿಸಿದ್ದ ಕುಪೇಂದ್ರ ರೆಡ್ಡಿ ಪರಾಭವಗೊಂಡಿದ್ದಾರೆ. ಈ ಮೂಲಕ ಬಿಜೆಪಿ ಪ್ರಾಬಲ್ಯ ಮೆರೆದರೆ, ಕಾಂಗ್ರೆಸ್ ಪ್ರತಿಷ್ಠೆ ಉಳಿಸಿಕೊಂಡಿದೆ. ಇತ್ತ ದಳಪತಿಗೆ ನಿರಾಸೆಯಾಗಿದೆ.

ಯಾರ್ಯಾರಿಗೆ ಎಷ್ಟು ಮತ:
ನಿರ್ಮಲಾ ಸೀತಾರಾಮನ್ – ಬಿಜೆಪಿ- ಗೆಲುವು – ಪಡೆದ ಮತ 46 (ಪ್ರಥಮ ಪ್ರಾಶಸ್ತ್ಯದ ಮತ), ಜಗ್ಗೇಶ್- ಬಿಜೆಪಿ – ಗೆಲುವು – ಪಡೆದ ಮತ 44 (ಪ್ರಥಮ ಪ್ರಾಶಸ್ತ್ಯದ ಮತ), ಲೆಹರ್ ಸಿಂಗ್ – ಬಿಜೆಪಿ – ಗೆಲುವು – ಪಡೆದ ಮತ 33 (ಪ್ರಥಮ) + 90 (ದ್ವಿತೀಯ ಪ್ರಾಶಸ್ತ್ಯದ ಮತ), ಜೈರಾಮ್ ರಮೇಶ್ – ಕಾಂಗ್ರೆಸ್ – ಗೆಲುವು – ಪಡೆದ ಮತ 46 (ಪ್ರಥಮ ಪ್ರಾಶಸ್ತ್ಯದ ಮತ), ಮನ್ಸೂರ್ ಆಲಿ ಖಾನ್ – ಕಾಂಗ್ರೆಸ್ – ಸೋಲು – ಪಡೆದ ಮತ 25 (ಪ್ರಥಮ ಪ್ರಾಶಸ್ತ್ಯದ ಮತ), ಕುಪೇಂದ್ರ ರೆಡ್ಡಿ – ಜೆಡಿಎಸ್ – ಸೋಲು – ಪಡೆದ ಮತ 30 (ಪ್ರಥಮ ಪ್ರಾಶಸ್ತ್ಯದ ಮತ). ಇದನ್ನೂ ಓದಿ: ಕೋವಿಡ್‌-19 ಹೊಸ ಮಾರ್ಗಸೂಚಿ ಪ್ರಕಟ – ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ

Comments

Leave a Reply

Your email address will not be published. Required fields are marked *