ಸಾರ್ವಜನಿಕ ಜೀವನ ಪರಿಗಣಿಸಿ ಬಿಜೆಪಿ ಟಿಕೆಟ್?- ರೆಡ್ಡಿ, ರಾಮುಲು ಆಪ್ತರಿಗೂ ಟಿಕೆಟ್ ಡೌಟ್

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಅಂತ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಟಿಕೆಟ್ ಹಂಚಿಕೆ ವೇಳೆ ಅಭ್ಯರ್ಥಿಗಳ ಸಾರ್ವಜನಿಕ ಜೀವನವನ್ನು ಪರಿಗಣಿಸೋದಾಗಿ ಹೇಳಿದ್ದಾರೆ.

ಈ ವಿಚಾರ ರೆಡ್ಡಿ, ರಾಮುಲು ಬಣವನ್ನ ತಲ್ಲಣಗೊಳಿಸಿದೆ. ಯಾಕಂದ್ರೆ ಸಾರ್ವಜನಿಕ ಜೀವನ ಪರಿಗಣಿಸಿ ಟಿಕೆಟ್ ನೀಡಿದ್ರೆ, ರೆಡ್ಡಿ ಸಹೋದರ ಹಾಗೂ ಶ್ರೀರಾಮುಲು ಸಹೋದರ, ಸಹೋದರಿ ಹಾಗೂ ಸೋದರಳಿಯನಿಗೆ ಟಿಕೆಟ್ ಸಿಗೋದು ಅನುಮಾನ. ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಬೇಲ್‍ಡೀಲ್ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಸಂಸದ ಶ್ರೀರಾಮುಲು ಸೋದರಳಿಯ ಹಾಗೂ ಕಂಪ್ಲಿ ಶಾಸಕ ಸುರೇಶ್‍ಬಾಬು ಸಹ ಬೇಲ್ ಡೀಲ್ ಮತ್ತು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿದ್ದಾರೆ. ಇದನ್ನೂ ಓದಿ: ಜನಾರ್ದನ ರೆಡ್ಡಿ ರಾಜಕೀಯ ಜೀವನ ಅಂತ್ಯವಾಯ್ತಾ?- ಅಮಿತ್ ಶಾ ಮಾತಿನ ಹಿಂದಿನ ಮರ್ಮವೇನು?

ಶ್ರೀರಾಮುಲು ಸಹೋದರ ಹಾಗೂ ಮಾಜಿ ಸಂಸದ ಸಣ್ಣಫಕ್ಕೀರಪ್ಪ ವಿರುದ್ಧವೂ ಕೆಲ ಪ್ರಕರಣಗಳಿವೆ. ಸಹೋದರಿ ಜೆ.ಶಾಂತಾ ಈ ಹಿಂದೆ ಬಿಜೆಪಿ ತೊರೆದು ಬಿಎಸ್‍ಆರ್ ಕಾಂಗ್ರೆಸ್ ಸೇರ್ಪಡೆ ವೇಳೆ ಬಿಜೆಪಿ ನಾಯಕರ ಬಗ್ಗೆ ಹರಿಹಾಯ್ದಿದ್ದನ್ನು ಬಿಜೆಪಿಗರು ಇನ್ನೂ ಮರೆತಿಲ್ಲ. ಜನಾರ್ದನ ರೆಡ್ಡಿ, ರಾಮುಲು ಸಹೋದರರ ಸಂಪರ್ಕದಿಂದ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ದೂರವುಳಿದಿದ್ದಾರೆ. ಜೊತೆಗೆ ಬಳ್ಳಾರಿ ನಗರ ಕ್ಷೇತ್ರದಿಂದ ಸೋಮಶೇಖರ್ ರೆಡ್ಡಿ ಬದಲಾಗಿ ಸುಷ್ಮಾ ಸ್ವರಾಜ್ ಕುಟುಂಬದ ಪರಮಾಪ್ತ, ವೈದ್ಯ ಬಿಕೆ ಸುಂದರ್ ಗೆ  ಟಿಕೆಟ್ ನೀಡಬೇಕು ಅನ್ನೋ ಒತ್ತಾಯ ಕೂಡಾ ಕೇಳಿಬಂದಿದೆ. ಇದನ್ನೂ ಓದಿ: ಅಮಿತ್ ಶಾ – ಹೆಚ್.ಆರ್.ರಂಗನಾಥ್ ಫೇಸ್ 2 ಫೇಸ್

Comments

Leave a Reply

Your email address will not be published. Required fields are marked *