ಹಲವು ಪಾಕಿಸ್ತಾನಗಳನ್ನು ಹುಟ್ಟುಹಾಕಲು ಬಿಜೆಪಿ ಬಯಸುತ್ತಿದೆ: ಮೆಹಬೂಬಾ ಮುಫ್ತಿ

ಶ್ರೀನಗರ: ಬಿಜೆಪಿಯವರು ಹಲವು ಪಾಕಿಸ್ತಾನಗಳನ್ನು ಹುಟ್ಟುಹಾಕಲು ಬಯಸುತ್ತಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರಿ ಪಂಡಿತರ ಹತ್ಯೆ ಕುರಿತು ಮಾತನಾಡುವಾಗ ಮುಫ್ತಿ ಅವರು, ನನ್ನ ತಂದೆಯ ಚಿಕ್ಕಪ್ಪಂದಿರು ಸಹ ಕೊಲ್ಲಲ್ಪಟ್ಟರು. ಪಾಕಿಸ್ತಾನದೊಂದಿಗೆ ಹೋರಾಡಿ ಮೇಲುಗೈ ಸಾಧಿಸಬೇಕೆಂಬುದೇ ಬಿಜೆಪಿಯವರ ಬಯಕೆ. ಅವರು ಹಿಂದೂ/ಮುಸ್ಲಿಂ, ಜಿನ್ನಾ, ಬಾಬರ್‌, ಔರಂಗಜೇಬ್‌ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಬಿಜೆಪಿ ಸರ್ಕಾರ ರಚಿಸುವಾಗ ಸಿದ್ಧಾಂತ ಎಲ್ಲಿ ಹೋಗಿತ್ತು?: ಸಂಜಯ್ ರಾವತ್

ದೇಶವನ್ನು ಕಾಂಗ್ರೆಸ್‌ ಸುರಕ್ಷಿತವಾಗಿರಿಸಿತ್ತು. ಆದರೆ ಬಿಜೆಪಿವರು ಹಲವು ಪಾಕಿಸ್ತಾನಗಳನ್ನು ಹುಟ್ಟುಹಾಕಲು ಬಯಸುತ್ತಿದೆ ಎಂದು ಕುಟುಕಿದ್ದಾರೆ.

ಹಿಂದೆ ಜಿನ್ನಾ ಭಾರತವನ್ನು ಇಬ್ಭಾಗ ಮಾಡಿದರು. ಆದರೆ ಈಗ ಕೋಮುವಾದದ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಬಿಜೆಪಿಯವರು ಮತ್ತೊಂದು ವಿಭಜನೆಯನ್ನು ಬಯಸುತ್ತಿದ್ದಾರೆ ಎಂದು ನಿನ್ನೆಯೂ ಸಹ ಮುಫ್ತಿ ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಸಂಸದ ಸ್ಥಾನಕ್ಕೆ ಅಖಿಲೇಶ್ ಯಾದವ್ ರಾಜೀನಾಮೆ

ಜವಾಹರಲಾಲ್‌ ನೆಹರೂ ಅವರ ದೂರದೃಷ್ಟಿಯು ಭಾರತವನ್ನು ಅಭಿವೃದ್ಧಿ ಮತ್ತು ಸಮೃದ್ಧಿಯ ಹಾದಿಯತ್ತ ಮುನ್ನಡೆಸಿತ್ತು. ಈಗಿನ ಆಡಳಿತವು ಒಂದೇ ಅಜೆಂಡಾವನ್ನು ಹೊಂದಿದೆ. ವಿಭಜನೆಗಳನ್ನು ಸೃಷ್ಟಿಸುವ ಮೂಲಕ ಆಳ್ವಿಕೆ ನಡೆಸುವ ಅಜೆಂಡಾವಾಗಿದೆ ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *