ಬಿಜೆಪಿಯಿಂದ ಟಿಕೆಟ್‌ ಸಿಗ್ಲಿಲ್ಲ ಅಂತಾ ಬೆಂಬಲಿಗರ ಸಭೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಟಿಕೆಟ್‌ ವಂಚಿತೆ ನಾಗಶ್ರೀ

ʻಸೋಮಣ್ಣಗೆ ವರುಣಾ ಸಾಕು, ಚಾಮರಾಜನಗರಕ್ಕೆ ನಾಗಶ್ರೀ ಬೇಕುʼ ಬೆಂಬಲಿಗರ ಒತ್ತಾಯ

ಚಾಮರಾಜನಗರ: ಬಿಜೆಪಿಯಿಂದ (BJP) ಚಾಮರಾಜನಗರದ (Chamarajanagar) ಟಿಕೆಟ್‌ ಆಕಾಂಕ್ಷಿಯಾಗಿದ್ದ ನಾಗಶ್ರೀ ಬೆಂಬಲಿಗರು ಹಾಗೂ ಹಿತೈಷಿಗಳು ಗುರುವಾರ ಸಭೆ ನಡೆಸಿದ್ದು, ಸಚಿವ ವಿ. ಸೋಮಣ್ಣಗೆ (V Somanna) ಟೆನ್ಷನ್ ಹೆಚ್ಚಿಸಿದೆ.

ಬಿಜೆಪಿಯಿಂದ ಟಿಕೆಟ್‌ (BJP Ticket) ಸಿಗಲಿಲ್ಲವೆಂದು ನಾಗಶ್ರೀ ಪ್ರತಾಪ್ (Nagashree Pratap) ಸಭೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತಿದ್ದು, ಈ ವೇಳೆ ಬೆಂಬಲಿಗರು ಧೈರ್ಯ ತುಂಬಿದ್ದಾರೆ. ಜೊತೆಗೆ ಪಕ್ಷೇತರವಾಗಿ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ. ಹಾಲಿ ಸಚಿವ ವಿ.ಸೋಮಣ್ಣಗೆ ʻವರುಣಾ ಕ್ಷೇತ್ರ ಸಾಕು, ಚಾಮರಾಜನಗರಕ್ಕೆ ನಾಗಶ್ರೀ ಬೇಕುʼ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಚಾಮರಾಜನಗರದಲ್ಲೇ ಸೋಮಣ್ಣ ಕಟ್ಟಿ ಹಾಕಲು ʼಕೈʼ ರಣವ್ಯೂಹ! – ಬಿಜೆಪಿ ಬಂಡಾಯವನ್ನೇ ಬಂಡವಾಳ ಮಾಡಿಕೊಳ್ಳಲು‌ ಪ್ಲಾನ್

ಈ ಬಗ್ಗೆ ಯಾವುದೇ ತೀರ್ಮಾನ ಪ್ರಕಟಿಸದ ನಾಗಶ್ರೀ ಪ್ರತಾಪ್, ಚಾಮರಾಜನಗಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸೋಮಣ್ಣ ಅವರನ್ನ ಆಯ್ಕೆ ಮಾಡಿರುವುದು ಪಕ್ಷದ ಹೈಕಮಾಂಡ್‌ ತೀರ್ಮಾನವಾಗಿದೆ. ಹಾಗಾಗಿ ಯಾರನ್ನೂ ದೂಷಿಸುವ ಪ್ರಶ್ನೆಯೇ ಇಲ್ಲ. ಯಾರೂ ಸಹ ದುಡುಕಿ ವ್ಯಕ್ತಿ ವಿರುದ್ಧವಾಗಲಿ, ಪಕ್ಷದ ವಿರುದ್ಧವಾಗಲಿ ಮಾತನಾಡಬೇಡಿ, ಯಾರೊಬ್ಬರು ಭಾವೋದ್ವೇಗಕ್ಕೆ ಒಳಗಾಗಬೇಡಿ. ಮುಂದಿನ ನಿರ್ಧಾರ ಕೈಗೊಳ್ಳಲು ಇನ್ನೆರಡು ದಿನ ಕಾಲಾವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ನ್ಯಾಯಾಲಯಗಳಲ್ಲಿ ನಂಬಿಕೆ ಇಲ್ಲ, ಇದು ನಕಲಿ ಎನ್‌ಕೌಂಟರ್‌ : ಅಖಿಲೇಶ್‌ ಯಾದವ್‌