ಭಿನ್ನಮತ ಗಲಾಟೆಯಲ್ಲೂ ಬಿಎಸ್‍ವೈ ರಾಜ್ಯ ಪ್ರವಾಸ- ಎಲೆಕ್ಷನ್ ಮುಗಿಯೋವರೆಗೆ ಹೆಲಿಕಾಪ್ಟರ್ ನಲ್ಲೇ ಸಂಚಾರ

ಬೆಂಗಳೂರು: 2018ರ ಕರ್ನಾಟಕ ಚುನಾವಣೆಗೆ ಬಿಜೆಪಿಯಿಂದ ಬಿಡುಗಡೆಯಾಗಿದ್ದ ಫಸ್ಟ್ ಲಿಸ್ಟ್ ನಿಂದ ಭುಗಿಲೆದ್ದಿರೋ ಭಿನ್ನಮತದ ನಡುವೆಯೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ರಾಜ್ಯಪ್ರವಾಸ ಮಾಡಲಿದ್ದಾರೆ.

ಇಂದಿನಿಂದ ಹೆಲಿಕಾಪ್ಟರ್ ಮೂಲಕ ರಾಜ್ಯ ಸುತ್ತಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಕೊಪ್ಪಳದ ಗಂಗಾವತಿಯಲ್ಲಿ ಭತ್ತ ಬೆಳೆಗಾರರ ಜೊತೆ ಸಂವಾದ ನಡೆಸಲಿದ್ದು, ಮಧ್ಯಾಹ್ನ 2 ಗಂಟೆ ಶಿರಹಟ್ಟಿ, ಬಿದರೇಹಳ್ಳಿಯ ಲಂಬಾಣಿ ತಾಂಡಗಳಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬಿಜೆಪಿಯ 72 ಮಂದಿ ಅಧಿಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್: ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?

ಮತ್ತೊಂದು ಹಂತದಲ್ಲಿ 224 ಕ್ಷೇತ್ರಗಳಲ್ಲೂ ಬಿಎಸ್‍ವೈ ಪ್ರಚಾರ ಮಾಡಲಿದ್ದಾರೆ. ಚುನಾವಣೆ ಬಹಿರಂಗ ಸಭೆ ಮುಕ್ತಾಯದವರೆಗೂ ರಾಜ್ಯ ಪ್ರವಾಸಕ್ಕೆ ಹೈಕಮಾಂಡ್ ಸೂಚನೆ ನೀಡಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಬಹುತೇಕ ಹಾಲಿ ಶಾಸಕರ ಟಿಕೆಟ್‍ಗೆ ಗ್ರೀನ್‍ಸಿಗ್ನಲ್

ದೆಹಲಿಯಲ್ಲಿ ಭಾನುವಾರ ರಾತ್ರಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ದೀರ್ಘ ಚರ್ಚೆ ನಡೆದು ಬಳಿಕ ಮೊದಲ ಲಿಸ್ಟ್ ನಲ್ಲಿ 72 ಜನರ ಹೆಸರು ಪ್ರಕಟ ಮಾಡಲಾಗಿತ್ತು. ಈ ಪಟ್ಟಿಯಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿ- ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳನ್ನು ಕೈಬಿಟಲಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಭಿನ್ನಮತ ಬುಗಿಲೆದ್ದಿದೆ.

Comments

Leave a Reply

Your email address will not be published. Required fields are marked *