ಬಿಜೆಪಿಗೆ ಬೇರೆ ಪಕ್ಷಗಳಿಂದ ಕದಿಯೋ ರುಚಿ ಹಿಡಿದಿದೆ: ವೀರಪ್ಪ ಮೊಯ್ಲಿ ಲೇವಡಿ

ರಾಯಚೂರು: ಬಿಜೆಪಿಗೆ (BJP) ಬೇರೆ ಪಕ್ಷಗಳಿಂದ ಕದಿಯುವ ರುಚಿ ಹಿಡಿದಿದೆ. ಬಿಜೆಪಿಗೆ ಇತಿಹಾಸವೂ ಇಲ್ಲ, ನಾಯಕತ್ವವೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ (Veerappa Moily) ವ್ಯಂಗ್ಯವಾಡಿದ್ದಾರೆ.

ರಾಯಚೂರಿನಲ್ಲಿ (Raichur) ಮಾತನಾಡಿದ ವೀರಪ್ಪ ಮೊಯ್ಲಿ, ಕಳೆದ 8 ವರ್ಷಗಳಲ್ಲಿ ಬಿಜೆಪಿ ಮಣಿಪುರ, ಮಹಾರಾಷ್ಟ್ರ, ಮಧ್ಯಪ್ರದೇಶ, ಗೋವಾ, ಕರ್ನಾಟಕದಲ್ಲೂ ಇರುವ ಸರ್ಕಾರಗಳನ್ನು ಕಸಿದುಕೊಂಡು ಅಧಿಕಾರ ನಡೆಸಿದೆ. ಪಶ್ಚಿಮ ಬಂಗಾಳದಲ್ಲಿ ಪ್ರಯತ್ನ ಮಾಡಿದರೂ ಯಶಸ್ವಿಯಾಗಲಿಲ್ಲ. ಇದು ಇಲ್ಲಿಗೇ ನಿಲ್ಲುತ್ತದೆ, ಇನ್ಮುಂದೆ ಯಶಸ್ವಿಯಾಗುವುದಿಲ್ಲ. ಜನರಿಗೆ ಬಿಜೆಪಿಯಿಂದ ಸಾಮಾಜಿಕ, ಆರ್ಥಿಕ, ರಾಜಕೀಯ ಲಾಭ ಸಿಗುತ್ತಿಲ್ಲ, ಇದು ಜನರಿಗೂ ಅರ್ಥವಾಗಿದೆ ಎಂದರು. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಜೊಲ್ಲು ಸುರಿಸೋದ್ರಲ್ಲಿ ನಿಸ್ಸೀಮ – ಬಿಸಿ ಪಾಟೀಲ್ ಲೇವಡಿ

ಬಿಹಾರದಲ್ಲಿ ನಿತೀಶ್ ಕುಮಾರ್, ಬಿಜೆಪಿ ಸಹವಾಸ ಬಿಟ್ಟಿದ್ದಾರೆ. 50 ಸೀಟ್‌ಗೆ ಇಳಿಸುತ್ತೇವೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. ಬಿಜೆಪಿಗೆ ಯಾವ ಪರಂಪರೆಯೂ ಇಲ್ಲ. ಜಾತೀಯತೆ, ಮತೀಯತೆಯಷ್ಟೇ ಬಿಜೆಪಿಗೆ ಇರುವುದು. ಅದಕ್ಕೆ ಬೇರೆ ಬೇರೆ ಸ್ವಾತಂತ್ರ‍್ಯ ಹೋರಾಟಗಾರರ ಹೆಸರನ್ನು ಬಳಸುತ್ತಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಕ್ಲೇಮ್ ಮಾಡಿದ್ರು. ಕಲ್ಯಾಣ ಕರ್ನಾಟಕ ನಮ್ಮಿಂದಾಯಿತು ಅಂತ ಮಾತನಾಡುತ್ತಿದ್ದಾರೆ. ಈಗ ಸುಭಾಷ್ ಚಂದ್ರಬೋಸ್ ತಂದಿದ್ದಾರೆ ಅಂತ ಕಿಡಿಕಾರಿದರು. ಇದನ್ನೂ ಓದಿ: ಭಾರತ್‌ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಾಲಕಿ ಕಾಲಿಗೆ ಚಪ್ಪಲಿ ತೊಡಿಸಿದ ರಾಹುಲ್‌ ಗಾಂಧಿ – ಸರಳಜೀವಿ ಎಂದ ನೆಟ್ಟಿಗರು

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *