ಹಿಂದುತ್ವ ಸಿದ್ಧಾಂತವು ದೇಶವನ್ನೇ ವಿಭಜಿಸುತ್ತಿದೆ – ಶಶಿ ತರೂರ್ ಟ್ವೀಟ್‍ಗೆ ಬಿಜೆಪಿ ಗರಂ

ನವದೆಹಲಿ: ಹಿಂದುತ್ವ ಸಿದ್ಧಾಂತವು ದೇಶವನ್ನೇ ವಿಭಜಿಸುತ್ತಿದೆ ಎಂದು ಟ್ವೀಟ್ ಮಾಡಿದ್ದ ಕಾಂಗ್ರೆಸ್ ಮುಖಂಡ ಶಶಿ ತರೂರ್ ವಿರುದ್ಧ ಬಿಜೆಪಿ ಹಾಗೂ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದಿ ಮಾತನಾಡಲು ಬರಲಿಲ್ಲವೆಂದು ಮುಂಬೈ ವಿಮಾನ ನಿಲ್ದಾಣದ ಇಮೆಗ್ರೇಶನ್ ಕೌಂಟರ್ ಅಧಿಕಾರಿಯೊಬ್ಬ ತಮಿಳುನಾಡು ವಿದ್ಯಾರ್ಥಿಗೆ ಅವಮಾನ ಮಾಡಿದ್ದ. ಈ ಸುದ್ದಿಯನ್ನು ಮುಖ್ಯವಾಗಿಟ್ಟುಕೊಂಡು ಶಶಿ ತರೂರ್ ಅವರು ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?:
‘ಹಿಂದಿ, ಹಿಂದೂ, ಹಿಂದುತ್ವದ ಸಿದ್ಧಾಂತವು ದೇಶವನ್ನೇ ವಿಭಸುತ್ತಿದೆ. ನಮಗೆ ಏಕತೆ ಬೇಕೇ ಹೊರತು ಏಕರೂಪವಲ್ಲ’ ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

ಶಶಿ ತರೂರ್ ಅವರ ಟ್ವೀಟ್ ನೋಡಿದ ನೆಟ್ಟಿಗರು ತಿರುಗೇಟು ನೀಡಿದ್ದಾರೆ. ‘ಹಿಂದುತ್ವ ದೇಶವನ್ನು ಒಗ್ಗೂಡಿಸಲು ಶ್ರಮಿಸುತ್ತಿದೆ. ಆದರೆ ಕಾಂಗ್ರೆಸ್ ನಾಯಕರು ಹಿಂದುತ್ವವನ್ನು ವಿರೋಧಿಸುತ್ತಿದ್ದಾರೆ. ಇದಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರೇರಣೆ ನೀಡುತ್ತಿದ್ದಾರೆ ಎಂದು ಬಿಜೆಪಿ ನಾಯಕ ಸಂಬಿತ್ ಪಾತ್ರಾ ಟಾಂಗ್ ಕೊಟ್ಟಿದ್ದಾರೆ.

ಹಿಂದಿ ಒಂದು ಭಾಷೆ. ಅದು ಹಿಂದುತ್ವ ಹಾಗೂ ಹಿಂದೂ ಸಿದ್ಧಾಂತದ ಜೊತೆಗೆ ಹೊಂದಿಕೊಂಡಿಲ್ಲ. ಹಾಗಾದರೆ ಹಿಂದಿ ಮಾತನಾಡದ ಜನರ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ನಿಮಗೆ ಇಸ್ಲಾಂ ಹಾಗೂ ಇಸ್ಲಾಮಿಸಂ ಅಂಥ ಟ್ವೀಟ್ ಮಾಡಲು ಆಗುತ್ತದೆಯೇ ಎಂದು ಸೀಮಾ ಚೌಧರಿ ಎಂಬವರು ಟ್ವೀಟ್ ಮಾಡಿದ್ದಾರೆ.

 

Comments

Leave a Reply

Your email address will not be published. Required fields are marked *