ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದ ಬ್ರದರ್ಸ್‍ಗಳ ಬ್ರದರ್‌ರಿಂದ ಕುಕ್ಕರ್ ಹಂಚಿಕೆ – ಡಿಕೆಸುಗೆ ತಿವಿದ ಬಿಜೆಪಿ

ಬೆಂಗಳೂರು: ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದ ಬ್ರದರ್ಸ್‍ಗಳ ಬ್ರದರ್‌ರಿಂದ ಮತದಾರರಿಗೆ ಕುಕ್ಕರ್ ಹಂಚಿಕೆ ಮಾಡಲಾಗುತ್ತಿದೆ ಎಂದು ಸಂಸದ ಡಿ.ಕೆ ಸುರೇಶ್ (D.K Suresh) ಅವರ ವಿರುದ್ಧ ಬಿಜೆಪಿ (BJP) ಆರೋಪಿಸಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಡಿಕೆಸು ವಿರುದ್ಧ ಚುನಾವಣಾ ಆಯೋಗ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ದೇಶದ ವಿಭಜನೆ ಮಾಡುವ ಸಂಚು ರೂಪಿಸಿದ್ದ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್ ಅವರಿಗೆ ಚುನಾವಣೆ (Lok Sabha Election 2024) ಘೋಷಣೆ ಮುನ್ನವೇ ಸೋಲಿನ ಭೀತಿ ಶುರುವಾಗಿದೆ. ಗೂಂಡಾಗಿರಿ ಮಾಡುವ ಜೊತೆಗೆ ಸ್ವಲ್ಪ ಅಭಿವೃದ್ಧಿಯನ್ನು ಮಾಡಿದ್ದರೆ, ಈಗ ಊರಿಗಿಂತ ಮುಂಚೆ ಮತದಾರರಿಗೆ ಕುಕ್ಕರ್ ಹಂಚುವ ಪ್ರಮೇಯ ಬರುತ್ತಿರಲಿಲ್ಲಾ ಮಾನ್ಯ ಡಿ.ಕೆ ಸುರೇಶ್ ಅವರೇ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಇದನ್ನೂ ಓದಿ: ಏನಿಲ್ಲಾ ಏನಿಲ್ಲಾ, ದಲಿತ ಯೋಜನೆಗಳ‌ ಮಾಲೀಕ ನೀನಲ್ಲಾ – ಸಿಎಂ ವಿರುದ್ಧ ಬಿಜೆಪಿ ಪ್ರತಿಭಟನೆ

ಕನಕಪುರದಲ್ಲಿ ನೀವು ಪ್ರತಿ ಬಾರಿ ಗೆಲ್ಲುವುದು ಗೂಂಡಾಗಿರಿಯಿಂದ ಎಂದು ತಿಳಿದಿತ್ತು. ನಿಮ್ಮ ಗೂಂಡಾ ಮನಸ್ಸಿನೊಳಗೆ ವಾಮಮಾರ್ಗದ ಕುಕ್ಕರ್ ವಿಶಲ್ ಸಹ ಇದೆ ಎಂಬುದು ಇಂದು ಜಗಜ್ಜಾಹೀರಾಗಿದೆ. ಮತದಾರರಿಗೆ ಕುಕ್ಕರ್ ಆಮಿಷ ಒಡ್ಡುತ್ತಿರುವ ಡಿ.ಕೆ ಸುರೇಶ್ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ಆಗ್ರಹಿಸಿದೆ. ಇದನ್ನೂ ಓದಿ: ಸಂಚಾರ ನಿಯಮ ಉಲ್ಲಂಘನೆ; 50,000 ರೂ.ಗಿಂತ ಹೆಚ್ಚಿದ್ದ ದಂಡ ವಸೂಲಿ ಮಾಡಿದ ಪೊಲೀಸರು