ಬಿಜೆಪಿಯ ಆಸೆಗೆ, ಜೆಡಿಎಸ್ ಗೇಟ್ ಹಾಕಿದೆ: ಶರವಣ

ಬೆಂಗಳೂರು: ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನ ಗೆದ್ದು ಹೆಬ್ಬಾಗಿಲು ಮಾಡಿಕೊಳ್ಳುವ ಬಿಜೆಪಿಯವರ ಆಸೆ ಈಡೇರಿಲ್ಲ. ಬಿಜೆಪಿಯವರ ಹೆಬ್ಬಾಗಿಲ ಆಸೆಗೆ ಜೆಡಿಎಸ್ ಗೇಟ್ ಹಾಕಿದೆ. 2018 ರಲ್ಲಿ ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂದು 3 ತಿಂಗಳ ಹಿಂದೆಯೇ ನುಡಿದ ಭವಿಷ್ಯ ನಿಜವಾಗುತ್ತಿದೆ, ಹೀಗಾಗಿ ಈ ಬಾರಿ ಕಪ್ ನಮ್ದೇ ಎಂದು ಮುಂಚಿತವಾಗಿ ಸಿಹಿ ಹಂಚಿಕೆ ಮಾಡಿದ್ದೇವೆ ಎಂದು ಜೆಡಿಎಸ್ ವಿಧಾನಪರಿಷತ್ ಸದಸ್ಯ ಶರವಣ ಹೇಳಿದ್ದಾರೆ.

ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿರುವ ದೇವನಹಳ್ಳಿಯ ರೆಸಾರ್ಟ್ ಗೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮೊದಲ ಉದ್ದೇಶ ಕುಮಾರಸ್ವಾಮಿ ಸಿಎಂ ಆಗುವುದು, ಹೀಗಾಗಿ ನಾನು ಸಾಕಷ್ಟು ಪ್ರವಾಸ ಮಾಡಿದ್ದೇನೆ, ಶ್ರಮ ಪಟ್ಟಿದ್ದೇನೆ. ನಾನು ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಅದರಲ್ಲಿ ಎರಡನೇ ಮಾತಿಲ್ಲ ಎಂದರು.

ನಾನು ನನ್ನ ಸಮುದಾಯದ ಏಕೈಕ ಶಾಸಕ. ನನ್ನ ಸಮುದಾಯದ ಪರವಾಗಿ ಕೆಲಸ ಮಾಡಲು ನನಗೆ ಸಚಿವ ಸ್ಥಾನ ಕೊಟ್ಟು ಅವಕಾಶ ಮಾಡಿಕೊಡಬೇಕಾಗಿ ಎಂದು ವರಿಷ್ಠರಲ್ಲಿ ಮನವಿ ಮಾಡಿದ್ದೇನೆ. ಬಂದ್ ಮಾಡಿದೆ ಎಂದರು.

ಇದೇ ವೇಳೆ ಕುಮಾರಸ್ವಾಮಿ ಅವರು 5 ವರ್ಷಗಳ ಕಾಲ ಸುಭದ್ರ ಸರ್ಕಾರ ನೀಡುತ್ತಾರೆ. ಇದು ಎಚ್‍ಡಿಕೆ ಅವರ ಆಡಳಿತ ಬಿಜೆಪಿಗೆ ಎಚ್ಚರಿಕೆಯ ನೀಡಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *