ಆರೋಪಿ ಪರ ಬ್ಯಾಟಿಂಗ್ ಮಾಡಿದ ಪಿಎಸ್ಐಗೆ ಕ್ಲಾಸ್- ಬಿಜೆಪಿ ಶಾಸಕನ ವಿಡಿಯೋ ವೈರಲ್

ಕಲಬುರಗಿ: ಬಿಜೆಪಿ ಕಾರ್ಯತರ್ಕನ ಮೇಲೆ ಹಲ್ಲೆ ನಡೆಸಿದ್ದ ಜೆಡಿಎಸ್ ಮುಖಂಡನನ್ನು ಬಿಡುಗಡೆಗೊಳಿಸಿದ್ದಕ್ಕೆ ಬಿಜೆಪಿ ಗ್ರಾಮೀಣ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಠಾಣೆಯಲ್ಲೇ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾನುವಾರ ಬಿಜೆಪಿ ಕಾರ್ಯಕರ್ತ ಅಮರನಾಥ ಸಾಹು ಎಂಬವರ ಮೇಲೆ ಜೆಡಿಎಸ್ ಮುಖಂಡ ಶರಣಬಸಪ್ಪ ಸಾವಳಗಿ ಹಲ್ಲೆ ಮಾಡಿದ್ದರು. ಘಟನೆ ಸಂಬಂಧ ಆಳಂದ ತಾಲೂಕಿನ ನರೋಣಾ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಲಾಗಿತ್ತು. ಆದರೆ ಪಿಎಸ್ ಐ ಗಜಾನನರವರು ಆರೋಪಿಯನ್ನು ನೆಪ ಮಾತ್ರಕ್ಕೆ ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ವಿಷಯ ತಿಳಿದ ಬಿಜೆಪಿ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶರಣು ಸಲಗರ್ ನರೋಣಾ ಪೊಲೀಸ್ ಠಾಣೆಗೆ ತೆರಳಿ ಪಿಎಸ್ ಐ ಗಜಾನನ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಜೆಪಿ ಅಧ್ಯಕ್ಷ ಪೊಲೀಸರನ್ನು ತರಾಟೆಗೆ ತೆಗೆದುಕೊಳ್ಳುವ ದೃಶ್ಯವನ್ನು ಅಲ್ಲೇ ಇದ್ದ ಕಾರ್ಯಕರ್ತರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಅಲ್ಲದೇ ಬಳಿಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಇದೀಗ ವೈರಲ್ ಆಗಿದೆ.

https://www.youtube.com/watch?v=0KhCIqdxOEs

Comments

Leave a Reply

Your email address will not be published. Required fields are marked *