ಸಂಸತ್‌ ಸ್ಮೋಕ್‌ ಬಾಂಬ್‌ ಕೇಸ್‌ – ಟಿಎಂಸಿ ಶಾಸಕನ ಜೊತೆ ಆರೋಪಿ – ಫೋಟೋ ಹರಿಬಿಟ್ಟ ಬಿಜೆಪಿ

ನವದೆಹಲಿ: ಲೋಕಸಭಾ ಭದ್ರತಾ ಉಲ್ಲಂಘನೆಯ ಮಾಸ್ಟರ್‌ಮೈಂಡ್‌ ಲಲಿತ್‌ ಝಾ, ಟಿಎಂಸಿ ನಾಯಕರ ಜೊತೆಗಿರುವ ಫೋಟೋಗಳನ್ನು ಬಿಜೆಪಿ ಬಿಡುಗಡೆ ಮಾಡಿದ್ದು ಪರಸ್ಪರರ ವಾಕ್ಸಮರಕ್ಕೆ ಕಾರಣವಾಗಿದೆ.

ಸಂಸತ್‌ಗೆ ದುಷ್ಕರ್ಮಿಗಳು ನುಗ್ಗಿದ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಇಡೀ ಭಾರತ ಬಣ ಭಾಗಿಯಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿಯ ಮೈಸೂರು ಸಂಸದ ಈ ಇಬ್ಬರು ಅತಿಕ್ರಮಣದಾರರಿಗೆ ಪಾಸ್ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಟಿಎಂಸಿ ತಿರುಗೇಟು ನೀಡಿದೆ. ಇದನ್ನೂ ಓದಿ: ಸಂಸತ್‌ನಲ್ಲಿ ಸ್ಮೋಕ್‌ ಬಾಂಬ್‌ ಪ್ರಕರಣ – ಮಾಸ್ಟರ್‌ಮೈಂಡ್‌ ಲಲಿತ್‌ ಬಂಧನ

ಬಂಗಾಳದ ಬಿಜೆಪಿ ಮುಖ್ಯಸ್ಥ ಸುಕಾಂತೋ ಮಜುಂದಾರ್, ಹಿರಿಯ ತೃಣಮೂಲ ಕಾಂಗ್ರೆಸ್ ನಾಯಕ ತಪಸ್ ರಾಯ್ ಅವರೊಂದಿಗೆ ಲಲಿತ್ ಝಾ ಇರುವ ಫೋಟೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯ ದೇಗುಲದ ಮೇಲಿನ ದಾಳಿಯ ಮಾಸ್ಟರ್‌ಮೈಂಡ್ ಲಲಿತ್ ಝಾ, ಟಿಎಂಸಿಯ ತಪಸ್ ರಾಯ್ ಅವರೊಂದಿಗೆ ಬಹಳ ಹಿಂದಿನಿಂದಲೂ ನಿಕಟ ಒಡನಾಟ ಹೊಂದಿದ್ದರು. ನಾಯಕನ ಕುತಂತ್ರದ ತನಿಖೆಗೆ ಈ ಪುರಾವೆ ಸಾಕಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಸಂಸತ್ತಿನ ಸಂದರ್ಶಕರ ಗ್ಯಾಲರಿಗೆ ಸ್ಮೋಕ್‌ ಬಾಂಬ್‌ ಸಾಗಿಸಿದ್ದ ಸಾಗರ್ ಶರ್ಮಾ ಮತ್ತು ಮನೋರಂಜನ್‌ಗೆ ಪಾಸ್‌ ನೀಡಿದ್ದರಿಂದ ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧವೂ ವಿಪಕ್ಷಗಳು ಟೀಕಾಪ್ರಹಾರ ನಡೆಸಿವೆ. ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿವೆ. ಇದನ್ನೂ ಓದಿ: ಸಂಸತ್‌ಗೆ ನುಗ್ಗಿದ ದುಷ್ಕರ್ಮಿಗಳು: ಇದು ಕಾಂಗ್ರೆಸ್ ಕುತಂತ್ರ ಇರಬಹುದು ಎಂದ ಮುತಾಲಿಕ್

ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿರುವ ಟಿಎಂಸಿ, ಬಿಜೆಪಿಯ ಆಂತರಿಕ ವೈಫಲ್ಯಗಳು ಸಂಸತ್ತಿನ ಭದ್ರತೆಯ ಈ ಅಭೂತಪೂರ್ವ ಉಲ್ಲಂಘನೆಗೆ ಕಾರಣವಾಯಿತು ಎಂದು ವಾಗ್ದಾಳಿ ನಡೆಸಿದೆ.