ಬಿಎಸ್‍ವೈ ಜೈಲಿಗೆ ಹೋಗಲು ಬಿಜೆಪಿಯವರೆ ಕಾರಣ: ಎಸ್‍ಆರ್ ಪಾಟೀಲ್

ಬಾಗಲಕೋಟೆ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಜೈಲಿಗೆ ಹೋಗಲು ಬಿಜೆಪಿಯವರೆ ಕಾರಣ. ಅವರ ಪಕ್ಷದಲ್ಲೇ ಅವರಿಗೆ ಸಾಕಷ್ಟು ವಿರೋಧಿಗಳಿದ್ದಾರೆ. ಬಿಜೆಪಿ ಇಂದು ಒಡೆದ ಮನೆಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‍ಆರ್ ಪಾಟೀಲ್ ಹೇಳಿದ್ದಾರೆ.

ಮನೆ ಮನೆಗೆ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪಾಟೀಲ್, ನಾವು ಜೈಲಿಗೆ ಕಳುಹಿಸುವವರಲ್ಲ, ಲೋಕಾಯುಕ್ತ ವರದಿಯ ಆಧಾರದ ಮೇಲೆ ಬಿಎಸ್‍ವೈ ಭ್ರಷ್ಟಾಚಾರ ಆರೋಪದಲ್ಲಿ ಜೈಲಿಗೆ ಹೋಗಿದ್ದರು. ಅವರ ಪಕ್ಷದಲ್ಲಿ ಗುಂಪುಗಾರಿಕೆ ಇದೆ, ಒಬ್ಬರನ್ನ ಮತ್ತೊಬ್ಬರು ಜೈಲಿಗೆ ಕಳುಹಿಸಲು ಅವರಲ್ಲಿಯೇ ಪೈಪೋಟಿ ಇದೆ. ನಮ್ಮದು ಭ್ರಷ್ಟಾಚಾರ ರಹಿತ ಸರ್ಕಾರ ಎಂದು ಸಮರ್ಥಿಸಿಕೊಂಡರು.

ಬಿಜೆಪಿ ಇಂದು ಒಡೆದ ಮನೆಯಾಗಿದೆ, ಈ ಹಿಂದೆ ರಾಯಣ್ಣ ಬ್ರಿಗೇಡ್ ವಿಚಾರದಲ್ಲಿ ಬಿಎಸ್‍ವೈ ಹಾಗೂ ಈಶ್ವರಪ್ಪ ಮಧ್ಯೆ ದೊಡ್ಡ ಯುದ್ಧವೇ ಆಯಿತು ಎಂದು ಲೇವಡಿ ಮಾಡಿದರು.

ಬಿಎಸ್‍ವೈ ವಿರುದ್ಧ ಎಸಿಬಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಪಾಟೀಲ್, ಬಿಎಸ್‍ವೈಗೆ ತಾತ್ಕಾಲಿಕ ತಡೆಯಾಜ್ಞೆ ಸಿಕ್ಕಿದೆ. ನ್ಯಾಯಾಲಯದ ಆದೇಶವನ್ನ ನಾವು ಗೌರವಿಸುತ್ತೇವೆ ಎಂದರು.

Comments

Leave a Reply

Your email address will not be published. Required fields are marked *