ಹೋಳಿ ಹಬ್ಬಕ್ಕೆ ಉಚಿತ ಸಿಲಿಂಡರ್ ನೀಡದ ಬಿಜೆಪಿ: ಜುಮ್ಲಾ ಪಾರ್ಟಿ ಎಂದು ಕುಟುಕಿದ ಆಪ್

ನವದೆಹಲಿ: ಅಂತರಾಷ್ಟ್ರೀಯ ಮಹಿಳಾ ದಿನದಂದು ಮಹಿಳೆಯರ ಖಾತೆಗೆ 2500 ರೂ. ಹಾಗೂ ಹೋಳಿಯಂದು ಉಚಿತ ಸಿಲಿಂಡರ್ ನೀಡುವ ಭರವಸೆ ನೀಡಿದ್ದ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಮಾತು ಮರೆತಿದ್ದು ಮಹಿಳೆಯರ ಖಾತೆಗೆ ಹಣವೂ ಹಾಕಿಲ್ಲ. ಇತ್ತ ಹೋಳಿ ಹಬ್ಬಕ್ಕೆ ಉಚಿತ ಸಿಲಿಂಡರ್ ಕೂಡಾ ನೀಡಿಲ್ಲ. ಬಿಜೆಪಿಯು ಜುಮ್ಲಾ ಪಾರ್ಟಿ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

ಉಚಿತ ಸಿಲಿಂಡರ್ ನೀಡದ ವಿಚಾರವನ್ನು ಮುಂದಿಟ್ಟುಕೊಂಡು ದೆಹಲಿಯ 40ಕ್ಕೂ ಅಧಿಕ ಸ್ಥಳಗಳಲ್ಲಿ ಆಪ್ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಐಟಿಒದಲ್ಲಿ ಬ್ಯಾನರ್‌ಗಳನ್ನು ಹಾಕಿ, ಪ್ರತಿಭಟಿಸಿದರು. ಸಂಚಾರಕ್ಕೆ ಸಮಸ್ಯೆಯಾದ ಹಿನ್ನೆಲೆ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಇದನ್ನೂ ಓದಿ: ನನ್ನ ಹತ್ರ ಇಂಟೆಲಿಜೆನ್ಸ್ ಇಲ್ಲ, ಗೃಹ ಸಚಿವರು, ಸಿಎಂ ಸಾಹೇಬ್ರಿಗೆ ಗೊತ್ತು – ಲಕ್ಷ್ಮೀ ಹೆಬ್ಬಾಳ್ಕರ್

ಹೋಳಿಯಂದು ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ನೀಡುವ ಭರವಸೆಯನ್ನು ಈಡೇರಿಸದ ಬಿಜೆಪಿ ನೇತೃತ್ವದ ದೆಹಲಿ ಸರ್ಕಾರವನ್ನು ಎಎಪಿ ನಾಯಕ ಪ್ರವೀಣ್ ಕುಮಾರ್ ತರಾಟೆಗೆ ತೆಗೆದುಕೊಂಡರು. ಬಿಜೆಪಿಯ ಪ್ರತಿಯೊಂದು ಭರವಸೆಯನ್ನು ಜುಮ್ಲಾವಾಗಿದೆ. ಬಿಜೆಪಿಗೆ ಮತ ಹಾಕಿದ ಮಹಿಳೆಯರು ಉಚಿತ ಸಿಲಿಂಡರ್‌ಗಳು ಸಿಗುತ್ತವೆ. ಆದರೆ ಇನ್ನೂ ಸಿಲಿಂಡರ್‌ಗಳು ಸಿಕ್ಕಿಲ್ಲ ಎಂಬುದು ತುಂಬಾ ದುಃಖಕರ ಎಂದು ಹೇಳಿದರು. ಇದನ್ನೂ ಓದಿ: ರನ್ಯಾರಾವ್ ಕೇಸ್; ಸಿಬಿಐ ತನಿಖೆ ಮುಗಿಯುವ ತನಕ ಬಿಜೆಪಿಯವರು ಕಾಯಬೇಕು: ಸತೀಶ್ ಜಾರಕಿಹೊಳಿ

ಗುರುವಾರ ಹೋಳಿ ಹಬ್ಬವಾಗಿದೆ ಆದರೆ ಜನರಿಗೆ ಇನ್ನೂ ಉಚಿತ ಸಿಲಿಂಡರ್‌ಗಳು ಸಿಕ್ಕಿಲ್ಲ. ಅವರು ಇನ್ನೂ 1000 ರೂ. ಪಾವತಿಸಬೇಕಾಗಿದೆ. ಬಿಜೆಪಿಯ ಪ್ರತಿಯೊಂದು ಭರವಸೆಯೂ ಮಹಿಳೆಯರಿಗೆ 2500 ರೂ. ನೀಡುವುದಾಗಲಿ ಅಥವಾ ಉಚಿತ ಸಿಲಿಂಡರ್‌ಗಳನ್ನು ನೀಡುವುದಾಗಲಿ `ಜುಮ್ಲಾ’ ಆಗಿ ಬದಲಾಗುತ್ತಿದೆ. ಈ ಎರಡೂ ಭರವಸೆಗಳು `ಜುಮ್ಲಾ’ ಆಗಿ ಮಾರ್ಪಟ್ಟಿವೆ ಎಂದು ಹೇಳಿದರು. ಇದನ್ನೂ ಓದಿ: ಡೆಲ್ಲಿ ಅಂಗಳ ತಲುಪಿದ ನಟಿ ರನ್ಯಾ ರಾವ್ ಕೇಸ್: ಇಬ್ಬರು ಸಚಿವರು ಸೇಫ್

ವಿರೋಧ ಪಕ್ಷದ ನಾಯಕಿ ಅತಿಶಿ ಮಾತನಾಡಿ, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಚುನಾವಣೆಗೆ ಮುನ್ನ ದೆಹಲಿಯ ಮಹಿಳೆಯರಿಗೆ ಹಲವು ಭರವಸೆಗಳನ್ನು ನೀಡಿದ್ದರು. ಮಾ. 8ರೊಳಗೆ ಮಹಿಳೆಯರಿಗೆ 2500 ರೂ. ನೀಡುವ ಭರವಸೆ ಕೇವಲ ಘೋಷಣೆ ಹಾಗೂ ವಂಚನೆಯಾಗಿ ಉಳಿದಿದೆ. ಹೋಳಿ, ದೀಪಾವಳಿಯಂದು ಪ್ರತಿ ಮಹಿಳೆಗೆ ಉಚಿತ ಸಿಲಿಂಡರ್ ನೀಡುವುದಾಗಿ ಮತ್ತೊಂದು ಭರವಸೆ ನೀಡಲಾಗಿತ್ತು. ದೆಹಲಿಯ ಮಹಿಳೆಯರು ಉಚಿತ ಸಿಲಿಂಡರ್‌ಗಳಿಗಾಗಿ ಕಾಯುತ್ತಿದ್ದಾರೆ ಎಂದರು. ಇದನ್ನೂ ಓದಿ: ‘ಟಾಕ್ಸಿಕ್’ ಅದ್ಭುತವಾಗಿದೆ: ಯಶ್ ಕುರಿತು ಹಾಲಿವುಡ್ ಸ್ಟಂಟ್ ಮಾಸ್ಟರ್ ಗುಣಗಾನ

ರಾಜ್ಯ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಪ್ರತಿಕ್ರಿಯಿಸಿ, ಆಪ್ ಪತನದತ್ತ ಸಾಗುತ್ತಿದೆ. ಮುಂದೆ ಅದು ವಿರೋಧ ಪಕ್ಷದ ಸ್ಥಾನಮಾನವನ್ನೂ ಕಳೆದುಕೊಳ್ಳುವ ದಿನ ದೂರವಿಲ್ಲ. ಮಹಿಳಾ ಸಮೃದ್ಧಿ ಯೋಜನೆಯ ಬಗ್ಗೆ ಅವರು ದೆಹಲಿಯ ಜನರ ದಾರಿ ತಪ್ಪಿಸುತ್ತಿದ್ದಾರೆ. ಮಾ. 8ರಂದು ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಈ ಯೋಜನೆಯ ಕುರಿತು ಬಜೆಟ್ ಮತ್ತು ಕಾಲಮಿತಿಯ ಘೋಷಣೆ ಮಾಡಿದ್ದರು ಎಂದು ಆಮ್ ಆದ್ಮಿ ಹೋರಾಟಕ್ಕೆ ತಿರುಗೇಟು ನೀಡಿದರು. ಇದನ್ನೂ ಓದಿ: ಉಪಗ್ರಹಗಳ ಅನ್‌ಡಾಕ್ ಕಾರ್ಯ ಯಶಸ್ವಿ – ಇಸ್ರೋ ಮತ್ತೊಂದು ಸಾಧನೆ; ಚಂದ್ರಯಾನ-4ಕ್ಕೆ ದಾರಿ

ಇದರ ಬಳಿಕ ಈಗ ಹೋಳಿಯಂದು ಗ್ಯಾಸ್ ಸಿಲಿಂಡರ್‌ಗಳ ಬಗ್ಗೆ ದಾರಿತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಉಚಿತ ಅನಿಲ ಸಿಲಿಂಡರ್‌ನಂತಹ ದೊಡ್ಡ ಯೋಜನೆಯನ್ನು ಪ್ರಾರಂಭಿಸಲು ಆಡಳಿತಾತ್ಮಕ ಅನುಮೋದನೆಗಳು ಮತ್ತು ನಿಯಮಗಳನ್ನು ರೂಪಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಬಿಜೆಪಿ ಆಡಳಿತವಿರುವ ಇತರೇ ರಾಜ್ಯಗಳಲ್ಲಿ ನಿಯಮಿತವಾಗಿ ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡಲಾಗುತ್ತಿದ್ದು, ಶೀಘ್ರದಲ್ಲೇ ದೆಹಲಿಯಲ್ಲೂ ನೀಡಲಾಗುವುದು ಎಂದರು.