ಅಂಬೇಡ್ಕರ್ ಮರಣಹೊಂದಿದಾಗಲೂ ಕಾಂಗ್ರೆಸ್ 6*3 ಅಡಿ ಜಾಗ ಕೊಟ್ಟಿರಲಿಲ್ಲ – ಸಿ.ಟಿ ರವಿ ಕಿಡಿ

ಚಿಕ್ಕೋಡಿ: ಅಂಬೇಡ್ಕರ್ ಮರಣ ಹೊಂದಿದಾಗ ಅವರಿಗೆ 6*3 ಅಡಿ ಜಾಗವನ್ನೂ ಕಾಂಗ್ರೆಸ್ ಕೊಟ್ಟಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಕಿಡಿ ಕಾರಿದ್ದಾರೆ.

ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ನಡೆದ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಬಿಜೆಪಿ (BJP) ಅಂಬೇಡ್ಕರ್ ವಿರೋಧಿ ಅಂತಾ ಹೇಳ್ತಾರೆ. ಆದ್ರೆ ಅಂಬೇಡ್ಕರ್‌ಗೆ (Ambedkar) ನಿಜವಾಗಿಯೂ ಅವಮಾನ ಮಾಡಿದ್ದು ಕಾಂಗ್ರೆಸ್ (Congress) ಪಕ್ಷ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೆಚ್‌ಐವಿ ಸೋಂಕು – ಮನನೊಂದು ರೋಗಿ ಆತ್ಮಹತ್ಯೆ

ಅಂಬೇಡ್ಕರ್ ಅವರು ಬದುಕಿದ್ದಾಗಲು, ಸತ್ತ ಮೇಲೆಯೂ ಅಪಮಾನ ಮಾಡಿದ್ದು ಕಾಂಗ್ರೆಸ್. ಅಂಬೇಡ್ಕರ್ ಮರಣ ಹೊಂದಿದಾಗ ಅವರಿಗೆ 6*3 ಅಡಿ ಜಾಗವನ್ನೂ ಕಾಂಗ್ರೆಸ್ ಕೊಟ್ಟಿಲ್ಲ ಎಂದು ಎಂದಿದ್ದಾರೆ. ಇದನ್ನೂ ಓದಿ: ಬೇಹುಗಾರಿಕೆ ಭೀತಿ – 11 ಚೀನಾ ಬ್ರ್ಯಾಂಡ್ ಮೂಬೈಲ್ ಬಳಸದಂತೆ ಸೈನಿಕರಿಗೆ ಸಲಹೆ

ದೇಶದಲ್ಲೇ ರೈತರಿಗೆ 10 ಸಾವಿರ ರೂ. ಕೊಡ್ತಾ ಇರೋದು ನಮ್ಮ ಡಬ್ಬಲ್ ಎಂಜಿನ್ ಸರ್ಕಾರ. ಕೇಂದ್ರ ಸರ್ಕಾರ ಕೊಡ್ತಿರೋ 6 ಸಾವಿರಕ್ಕೆ ರಾಜ್ಯ ಸರ್ಕಾರದಿಂದ 4 ಸಾವಿರ ಸೇರಿಸಿ 10 ಸಾವಿರ ರೂ. ನೀಡ್ತಿರೋದು ನಮ್ಮ ಡಬಲ್ ಎಂಜಿನ್ ಸರ್ಕಾರ. ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ, ಮೀಸಲಾತಿ ವಿರೋಧಿ ಅಂತಾ ಹೇಳ್ತಾರೆ. ಆದ್ರೆ ಮೀಸಲಾತಿ (Reservation) ಬೆಂಬಲಿಸಿದ್ದು ಬಿಜೆಪಿ. ನಮಗೆ ರಾಣಿ ಚೆನ್ನಮ್ಮ ಹಾಗೂ ಶಿವಾಜಿ ಮಹಾರಾಜರು ಒಂದೇ. ಅವರೆಂದೂ ಬಿಜೆಪಿಗೆ ಬೇರೆ-ಬೇರೆಯಾಗಿ ಕಾಣೋದಿಲ್ಲ. ಕಾಂಗ್ರೆಸ್‌ನವರಿಗೆ ಈ ಬಾರಿ ಸೋಲು ಗ್ಯಾರಂಟಿ ಅದಕ್ಕಾಗಿ ಸುಳ್ಳಿನ ಕಾರ್ಡ್ ವಿತರಣೆ ಮಾಡ್ತಿದ್ದಾರೆ ಎಂದು ಹರಿಹಾಯ್ದರು.

Comments

Leave a Reply

Your email address will not be published. Required fields are marked *