ಮಹಾರಾಷ್ಟ್ರದಲ್ಲಿ ಶಾಸಕರುಗಳೇ ಹತಾಶರಾಗಿ ಸರ್ಕಾರ ತೊಲಗಿ ಎಂದು ಬಯಸಿದ್ದಾರೆ: ಸಿ.ಟಿ ರವಿ

ಚಿಕ್ಕಮಗಳೂರು: ಜನ ಮಾತ್ರವಲ್ಲ, ಮಹಾರಾಷ್ಟ್ರ ಸರ್ಕಾರದ ಬಗ್ಗೆ 3 ಪಕ್ಷದ ಶಾಸಕರು ಭ್ರಮನಿರಸರಾಗಿದ್ದಾರೆ. ಹೀಗಾಗಿ ಶಾಸಕರುಗಳೇ ಹತಾಶರಾಗಿ ಸರ್ಕಾರ ತೊಲಗಿ ಎಂದು ಬಯಸಿದ್ದಾರೆ ಅಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಯಾವ ತಾಳಮೇಳವೂ ಇಲ್ಲದ ಅಪವಿತ್ರ ಮೈತ್ರಿ ಸರ್ಕಾರ. ಸೈದ್ಧಾಂತಿಕವಾಗಿಯೂ ಮಿಸ್ ಮ್ಯಾಚ್ ಡಿಎನ್‍ಎ ಸರ್ಕಾರ. ಬಿಜೆಪಿ ಗೆಲುವಿಗೆ ಸಹಕರಿಸಿದ ಎಲ್ಲಾ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಇದನ್ನೂ ಓದಿ: ಕ್ಯಾಂಪಿಂಗ್ ಮಾಡುತ್ತಿರುವಾಗ ನನ್ನ ಪತಿ ಕಾಣೆಯಾಗಿದ್ದಾರೆ – ದೂರು ಕೊಟ್ಟ ಶಿವಸೇನಾ MLA ಪತ್ನಿ

ಫಡ್ನವೀಸ್ ನೇತೃತ್ವದ ಬಿಜೆಪಿ ಸರ್ಕಾರ ಬರಬೇಕೆಂದು ಚುನಾವಣೆ ಸಂದರ್ಭದಲ್ಲೇ ಅಪೇಕ್ಷೆ ಇತ್ತು. 2019ರಲ್ಲಿ ಜನ ಮತ ಹಾಕಿದ್ದು ಮೋದಿ, ಫಡ್ನವಿಸ್ ನೇತೃತ್ವದ ಸರ್ಕಾರಕ್ಕೆ. ಮಹಾರಾಷ್ಟ್ರ ಸರ್ಕಾರ ತತ್ವಹೀನ ಸರ್ಕಾರ. ಸಿದ್ಧಾಂತ, ಅಭಿವೃದ್ಧಿ ಯೋಜನೆಗಳು ಇಲ್ಲವೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಈ ಸರ್ಕಾರ ಬೀಳಲಿ ಅಂತ ಜನ, ಶಾಸಕರು ಬಯಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಮಹಾರಾಷ್ಟ್ರದ ಪ್ರಭಾರಿಯಾಗಿ ನಮ್ಮ ಪಕ್ಷದ ನಾಯಕರ ಜೊತೆ ಸಂಪರ್ಕದಲ್ಲಿದ್ದೇನೆ. ಜನ ಮತ ನೀಡಿದ್ದೇ ಬಿಜೆಪಿ ಮೈತ್ರಿಕೂಟದ ಸರ್ಕಾರಕ್ಕೆ, ಮೋದಿ, ಫಡ್ನವೀಸ್ ನೇತೃತ್ವಕ್ಕೆ ಎಂದು ಹೇಳಿದರು.

Live Tv

Comments

Leave a Reply

Your email address will not be published. Required fields are marked *