ಯಡಿಯೂರಪ್ಪರಿಗೆ ಅಮಿತ್ ಶಾ ಖಡಕ್ ಸೂಚನೆ

ನವದೆಹಲಿ: ಎಚ್ ಡಿ ಕುಮಾರಸ್ವಾಮಿ ಸರ್ಕಾರ’ ಬೀಳಿಸಲು ಬಿಜೆಪಿಯಿಂದ ಮತ್ತೊಂದು ಪ್ಲಾನ್ ಮಾಡ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಕರೆ ಮಾಡಿ ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಬಿಎಸ್‍ವೈ ಅವರಿಗೆ ದೂರವಾಣಿ ಕರೆಮಾಡಿರುವ ಶಾ, ಆಪರೇಷನ್ ಕಮಲದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಕುಮಾರಸ್ವಾಮಿ ಸರ್ಕಾರ ಬೀಳಿಸಲು ಶಾಸಕರನ್ನು ಸೆಳೆಯೋ ಬಗ್ಗೆ ನಾಲ್ಕೂವರೆ ನಿಮಿಷ ಚರ್ಚೆ ಮಾಡಿದ್ದಾರೆ. `ಆಪರೇಷನ್ ಕಮಲ’ ಬಗ್ಗೆ ಯಾವ ಬಿಜೆಪಿ ಮುಖಂಡರೂ ಬಹಿರಂಗ ಹೇಳಿಕೆ ಕೊಡಬಾರದು. ಏನೇ ತಂತ್ರಗಾರಿಕೆ ಇದ್ದರೂ ಎಲ್ಲವೂ ಒಳಗೊಳಗೇ ನಡೆಯಬೇಕು ಅಂತ ಅಮಿತ್ ಶಾ ಅವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನಾಲ್ಕು ಹಂತಗಳಲ್ಲಿ ನಡೆಯಲಿದೆ ಆಪರೇಷನ್ ಕಮಲ..?

`ಆಪರೇಷನ್ ಕಮಲ’ವನ್ನು ನಾನು, ರಾಮುಲು ಇಬ್ಬರೂ ಸೇರಿ ಆಪರೇಟ್ ಮಾಡುತ್ತಿದ್ದೇವೆ. ಆದ್ರೆ ಆಪರೇಷನ್ ಕಮಲ ಮಾಡ್ತಿಲ್ಲ ಅಂತ ಬಹಿರಂಗವಾಗಿ ಬಿಂಬಿಸಿಕೊಳ್ತಿದ್ದೇವೆ. ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶ ಪ್ರವಾಸದಿಂದ ವಾಪಸ್ ಬರಲಿ. ಪ್ರವಾಸದಿಂದ ಸಿದ್ದರಾಮಯ್ಯ ವಾಪಸ್ ಆದ ಬಳಿಕ ಸೋಮವಾರದಷ್ಟೊತ್ತಿಗೆ ಎಲ್ಲವೂ ಸ್ಪಷ್ಟ ಆಗುತ್ತದೆ. `ಆಪರೇಷನ್ ಕಮಲ’ದ ಪ್ರತಿ ಮಾಹಿತಿಯನ್ನು ನಾವು ನಿಮಗೆ ಕೊಡ್ತಾ ಇರುತ್ತೇವೆ ಅಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶಾಗೆ ಮಾಜಿ ಸಿಎಂ ಯಡಿಯೂರಪ್ಪ ಉತ್ತರಿಸಿದ್ದಾರೆ ಅಂತ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ. ಇದನ್ನು ಓದಿ: ಆಪರೇಷನ್ ಕಮಲಕ್ಕೆ ಗಣಿ ಧನಿ ರೆಡ್ಡಿಯಿಂದ 300 ಕೋಟಿ ಬಂಡವಾಳ-ಹೈಕಮಾಂಡ್ ಮುಂದಿಟ್ರು ಒಂದು ಷರತ್ತು!!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *