ನಿಮ್ಮ ಮಾಹಿತಿ ಸುರಕ್ಷಿತವಾಗಿರಲ್ಲ: ಜಾತಿಗಣತಿ ಬಹಿಷ್ಕಾರಕ್ಕೆ ತೇಜಸ್ವಿ ಸೂರ್ಯ ಕರೆ

– ನನಗೆ ಸರ್ಕಾರದ ಮೇಲೆ ನಂಬಿಕೆ ಇಲ್ಲ, ನಾನು ಕೂಡ ಜಾತಿಗಣತಿಯಲ್ಲಿ ಪಾಲ್ಗೊಳ್ಳಲ್ಲ: ಬಿಜೆಪಿ ಸಂಸದ

ಬೆಂಗಳೂರು: ನಿಮ್ಮ ಮಾಹಿತಿ ಸುರಕ್ಷಿತವಾಗಿರಲ್ಲ. ಹಾಗಾಗಿ, ಜಾತಿಗಣತಿ ಬಹಿಷ್ಕರಿಸಿ ಎಂದು ಜನತೆಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಕರೆ ಕೊಟ್ಟಿದ್ದಾರೆ.

ಜಾತಿಗಣತಿ (Caste Census) ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಜಾತಿಗಣತಿಯಲ್ಲಿ ಪಾಲ್ಗೊಳ್ಳಲ್ಲ. ನಂಗೆ ನನ್ನ ಮಾಹಿತಿ ಸುರಕ್ಷಿತವಾಗಿರುತ್ತೆ ಅನ್ನೋ ನಂಬಿಕೆ ಇಲ್ಲ. ಹೀಗಾಗಿ, ಸರ್ಕಾರದ ಮೇಲೆ ನಂಬಿಕೆ ಇರದೇ ಇರೋದ್ರಿಂದ ಇದರಲ್ಲಿ ಪಾಲ್ಗೊಳ್ಳಲ್ಲ. ನಿಮ್ಮ ಮಾಹಿತಿ ಸುರಕ್ಷಿತವಾಗಿರಲ್ಲ. ಜಾತಿ ಜಾತಿ ಮಧ್ಯೆ ಗಲಾಟೆ ತರಲು ಮಾತ್ರ ಇದನ್ನು ಮಾಡುತ್ತಿದ್ದಾರೆ. ದಯವಿಟ್ಟು ನೀವು ಇದರಲ್ಲಿ ಪಾಲ್ಗೊಳ್ಳಬೇಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಮೀಕ್ಷೆಗೆ ಸಿದ್ಧತೆ ಸರಿಯಾಗಿ ಮಾಡದೇ ಸರ್ಕಾರದಿಂದ ಗೊಂದಲ: ನಿಖಿಲ್

ಬೆಂಗಳೂರು ರಸ್ತೆ ಗುಂಡಿ ವಿಚಾರವಾಗಿ ಮಾತನಾಡಿ, ದೆಹಲಿಯಲ್ಲಿ ಗುಂಡಿ ಇದ್ಯೋ ಇಲ್ವೋ ಯಾಕೆ ಬೇಕು? ಬೆಂಗಳೂರು ಸರಿ ಮಾಡ್ಸಿ ಮೊದಲು. ದೆಹಲಿಯಲ್ಲಿ ಅದ್ಭುತ ಮೆಟ್ರೋ ಕನೆಕ್ಟಿವಿಟಿ ಇದೆ. ಬೆಂಗಳೂರಿನಲ್ಲಿ ಯಾಕಿಲ್ಲ? ಹೋಲಿಕೆ ಮಾಡೋದು ಯಾಕೆ? ಏಳು ಕಿಮೀ ನಡೆದುಕೊಂಡು ಹೋಗಿದ್ದೀನಿ. 100 ಮೀಟರ್‌ಗೊಂದು ರಾಶಿ ರಾಶಿ ಗುಂಡಿಗಳು ಇವೆ. ಅಧಿಕಾರಿಗಳು ನಮ್ ಮಾತು ಕೇಳೋದಾ? ಸಿಎಂ ಡಿಸಿಎಂ ಮಾತು ಕೇಳ್ತಾರಾ ಎಂದು ಪ್ರಶ್ನಿಸಿದ್ದಾರೆ.

ರಸ್ತೆ ಗುಂಡಿ ಮುಚ್ಚಿಸೋದು ದೊಡ್ಡ ದುಡ್ಡು ಕೊಡೋ ಕಾಮಧೇನು. ಈ ವಿಚಾರದಲ್ಲಿ ದೊಡ್ಡ ಸ್ಕ್ಯಾಮ್ ಇದೆ. ಎರಡು ಮೂರು ಮಳೆ ಬಂದ್ರೆ ರಸ್ತೆ ಕಿತ್ತೋಗುತ್ತೆ. ಜಿಬಿಐ ಹಳೆ ವೈನ್ ಹೊಸ ಬಾಟಲ್ ನಲ್ಲಿ ಹಾಕಿದ್ದಾರೆ. ಕಾಂಟ್ರ್ಯಾಕ್ಟರ್, ಅಧಿಕಾರಿಗಳು, ರಾಜಕೀಯ ನಾಯಕರು ಇವರೆಲ್ಲರೂ ಈ ಸ್ಕ್ಯಾಮ್‌ನಲ್ಲಿ ಭಾಗಿದಾರರು. ಕೆಟ್ಟದನ್ನು ಮಾತ್ರ ಹೋಲಿಕೆ ಮಾಡೋದು ಅಧಿಕಾರನಾ? 100 ಕಿಮೀ ಫ್ಲೈಓವರ್ ಅಂತಾರೆ. ಮೊದಲು 100 ಮೀಟರ್ ಗುಂಡಿಯಿಲ್ಲದ ರಸ್ತೆ ಕೊಡಿ ಸ್ವಾಮಿ. ರಸ್ತೆ ಹಾಕಿದ್ರೆ ಬೇರೆ ಕಡೆ ಎಂಟತ್ತು ವರ್ಷ ಬಾಳಿಕೆ ಬರುತ್ತೆ. ನಮ್ಮಲ್ಲಿ ಯಾಕೆ ತಿಂಗಳು ಬಾಳಿಕೆ ಬರುತ್ತೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾನು ಬಸವ ಧರ್ಮದ ಪರ ಇರೋನು, ಧರ್ಮದ ಕಾಲಮ್‌ನಲ್ಲಿ ಲಿಂಗಾಯತ ಧರ್ಮ ಅಂತನೇ ಬರೆಸ್ತೀನಿ: ಎಂ.ಬಿ ಪಾಟೀಲ್‌

ಬೆಂಗಳೂರು-ಮುಂಬೈ ಪ್ರಮುಖ ವ್ಯಾಪಾರದ ಹಬ್ ಆಗಲಿದೆ. ಇದುವರೆಗೆ ಒಂದು ಟ್ರೈನ್ ಇತ್ತು. ಬಹಳ ದೀರ್ಘಕಾಲದ ಪ್ರಯಾಣ. ಹೀಗಾಗಿ, ಸೂಪರ್ ಫಾಸ್ಟ್ ಟ್ರೈನ್‌ಗೆ ನಾಲ್ಕು ವರ್ಷದಿಂದ ಶ್ರಮ ಪಡುತ್ತಿದ್ದೆ. ಮೂರು ನಾಲ್ಕು ವಾರಗಳಲ್ಲಿ ಸೂಪರ್ ಫಾಸ್ಟ್ ಟ್ರೈನ್ ಓಡಾಡಲಿದೆ. ಟೈಂಟೇಬಲ್ ಫಿಕ್ಸ್ ಆಗಲಿದೆ. ಜರ್ನಿ ಅವರ್‌ನ್ನು ಸಂಪೂರ್ಣ ಕಡಿತ ಮಾಡುವ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.