ಕಾಂಗ್ರೆಸ್ಸಿನವರನ್ನು ಕೆಟ್ಟವರನ್ನಾಗಿ ಬಿಂಬಿಸಿ ಸಿಂಪತಿಗಿಟ್ಟಿಸಲು ಅಪ್ಪ-ಮಗ ಕಣ್ಣೀರು: ಆಯನೂರು ಮಂಜುನಾಥ್

ಶಿವಮೊಗ್ಗ: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅವರ ಪಕ್ಷದ ಸಭೆಯಲ್ಲಿ ಕಣ್ಣೀರು ಹಾಕುತ್ತಾರೆ. ಬಯಸಿದ ಕೂಡಲೇ ಕಣ್ಣೀರು ಹಾಕುವವರು ದೇವೇಗೌಡರು ಹಾಗೂ ಕುಮಾರಸ್ವಾಮಿ ಅಂತ ವಿಧಾನ ಪರಿಷತ್ ಸದಸ್ಯ ಅಯನೂರು ಮಂಜುನಾಥ್ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್ ನಲ್ಲಿ ಕುಮಾರಸ್ವಾಮಿಯವರು ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳನ್ನ ಮುಂದುವರಿಸುತ್ತೆನೆ ಎಂದು ಹೇಳಿದ್ದರು. ದಿನಬೆಳಗಾದರೆ ಹಿಂದಿನ ಸರ್ಕಾರದ ಯೋಜನೆ ಬಗ್ಗೆ ಏನೆಲ್ಲಾ ಆಗುತ್ತಿದೆ ಅನ್ನೋದನ ನೋಡಲಾಗುತ್ತಿದೆ. ಕುಮಾರಸ್ವಾಮಿ ಆಡಳಿತದಲ್ಲಿ ವಿಫಲಗೊಂಡರೆ ತಮ್ಮ ವಿಫಲತೆಗೆ ಕಾಂಗ್ರೆಸ್ ಪಕ್ಷ ಕಾರಣ ಅಂತ ಹೇಳಬಹುದು ಅಂದ್ರು.  ಇದನ್ನೂ ಓದಿ: ಕುಮಾರಸ್ವಾಮಿಗೆ ಕಾಂಗ್ರೆಸ್ ವಿಷ ಕೊಟ್ಟಿಲ್ಲ, ಅಮೃತವನ್ನೇ ಕೊಟ್ಟಿದೆ: ಕೈ ಶಾಸಕ

ಪಾಲುದಾರ ರಾಜಕಿಯ ಪಕ್ಷದ ನಾಯಕರ ವಿರುದ್ಧ ದೇವೇಗೌಡರು ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿಯವರು ನೂತನ ಬಜೆಟ್ ಮಂಡಿಸುವುದರ ಬದಲಿಗೆ ಪೂರಕ ಬಂಜೆಟ್ ಮಂಡಿಸಿದ್ದಾರೆ. ಅವರ ಸಹೋದರ ಎಚ್.ಡಿ ರೇವಣ್ಣನವರ ಖಾತೆಗೆ ಬಜೆಟ್ ನಲ್ಲಿ ಹೊಸ ಯೋಜನೆಗಳಿಗೆ ಕೋಟಿಗಟ್ಟಲೆ ಹಣವನ್ನ ನೀಡಲಾಗಿದೆ. ಈ ಬಾರಿ ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ನಲ್ಲಿ ಹೊಸತನ ಇಲ್ಲ, ಇದು ಅಣ್ಣ- ತಮ್ಮರ ಬಜೆಟ್ ಅಂತ ಟಾಂಗ್ ನೀಡಿದ್ರು.  ಇದನ್ನೂ ಓದಿ: ನಾನು ವಿಷಕಂಠ ಎಂಬ ಸಿಎಂ ಮಾತಿಗೆ ಮಾಜಿ ಸಚಿವ ಎ.ಮಂಜು ತಿರುಗೇಟು

ಕಾಂಗ್ರೆಸ್ ಹೆಗಲ ಮೇಲೆ ಬಂದೂಕು ಇಟ್ಟುಕೊಂಡು ಕುಮಾರಸ್ವಾಮಿ, ದೇವೇಗೌಡರು ಜನರಿಗೆ ಹೊಡೆಯುತ್ತಿದ್ದಾರೆ. ಅಪ್ಪ-ಮಕ್ಕಳು ಕಣ್ಣೀರು ಹಾಕಿ ಜನರ ಮನಸ್ಸಿನಲ್ಲಿ ಕಾಂಗ್ರೆಸ್ ನವರನ್ನು ಕೆಟ್ಟವರನ್ನಾಗಿ ಮಾಡಿ ಸಿಂಪತಿ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿಯವರ ಪ್ರತಿಷ್ಠೆಗೆ ಈ ಬಜೆಟ್ ಮಂಡನೆಯಾಗಿದೆ. ರಾಜ್ಯದಲ್ಲಿ ಅತಿವೃಷ್ಠಿಯಾಗಿದೆ, ಅದಕ್ಕೆ ಯಾವುದೇ ಯೋಜನೆ ಕೈಗೊಂಡಿಲ್ಲ. ಮೊದಲನೇ ಅಧಿವೇಶನ ವ್ಯರ್ಥವಾಗಿದೆ. ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದ ಹಾಗೇ ಕುಮಾರಸ್ವಾಮಿ ತಾವು ಕೊಟ್ಟ ಭರವಸೆಯನ್ನ ಈಡೇರಿಸಿಲ್ಲ. ಸ್ತ್ರೀ ಶಕ್ತಿ ಸಂಘ, ನೇಕಾರರು, ಮೀನುಗಾರ ಹಾಗೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿಲ್ಲ ಅಂತ ಅವರು ಹೇಳಿದ್ರು. ಇದನ್ನೂ ಓದಿ: ಸಿಎಂ ನಟ ಭಯಂಕರ, ತಮ್ಮ ನಟನೆಯಿಂದ ಜನರನ್ನು ಮೂರ್ಖರನ್ನಾಗಿಸ್ತಿದ್ದಾರೆ: ಬಿಜೆಪಿ

Comments

Leave a Reply

Your email address will not be published. Required fields are marked *