2018ರ ನ್ಯಾ.ಸಿಕ್ರಿ ಆದೇಶ ಉದಾಹರಿಸಿ ಕೋರ್ಟಿಗೆ ಬಿಜೆಪಿ ಮೊರೆ

ಬೆಂಗಳೂರು: ಮೈತ್ರಿ ಸರ್ಕಾರದ ವಿಶ್ವಾಸ ಮತಸಾಬೀತಿಗೆ ಆಗ್ರಹಿಸಿ ಸದನದಲ್ಲಿ ಬಿಜೆಪಿ ಆಹೋರಾತ್ರಿ ಧರಣಿಗೆ ಮುಂದಾಗಿದೆ. ಇದೇ ಸಮಯದಲ್ಲಿ 2018 ರಲ್ಲಿ ನ್ಯಾ.ಸಿಕ್ರಿ ಆದೇಶದಂತೆ 24 ಗಂಟೆಯೊಳಗೆ ಬಹುಮತ ಸಾಬೀತಿಗೆ ಸೂಚನೆ ನೀಡುವಂತೆ ಕೋರಿ ಬಿಜೆಪಿಯಿಂದ ನ್ಯಾಯಾಲಯದ ಮೆಟ್ಟಿಲೇರಲಿದೆ.

ವಿಪ್ ವಿಚಾರದಲ್ಲಿ ಮತ್ತು ರಾಜೀನಾಮೆ ಅಂಗೀಕಾರ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಈಗಾಗಲೇ ನ್ಯಾಯಾಲಯ ನಿರ್ದೇಶನ ನೀಡಿರುವುದರಿಂದ ಇದರ ಗೊಂದಲ ನಿವಾರಣೆ ಆಗಿದೆ ಎಂಬುವುದು ಬಿಜೆಪಿಯ ವಾದವಾಗಿದ್ದು, ಪರಿಣಾಮ ಸ್ಪಷ್ಟ ನಿರ್ದೇಶನ ನೀಡುವಂತೆ ಬಿಜೆಪಿ ನ್ಯಾಯಾಲದಲ್ಲಿ ಮನವಿ ಸಲ್ಲಿಸಲಿದೆ.

ಈ ಮನವಿಯೊಂದಿಗೆ ಸದನದ ಪಕ್ಷಗಳು ಜಾರಿ ಮಾಡಿರುವ ವಿಪ್ ರಾಜೀನಾಮೆ ನೀಡಿದ ಶಾಸಕರಿಗೆ ಅನ್ವಯ ಆಗುತ್ತಾ ಇಲ್ವಾ ಎಂಬ ಬಗ್ಗೆ ನಿರ್ದೇಶನ ನೀಡಿ. ಈ ಸಂಬಂಧ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನು ಪಾರ್ಟಿ ಮಾಡಿ ಎಂದು ಮನವಿಯಲ್ಲಿ ಕೋರಿದೆ.

2018ರ ವಿಧಾನಸಭಾ ಚುನಾವಣೆಯ ಬಳಿಕ 104 ಸ್ಥಾನಗಳನ್ನು ಪಡೆದಿದ್ದ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಪಕ್ಷ ಸರ್ಕಾರ ರಚನೆ ಮಾಡಿತ್ತು. ಆದರೆ ಅಂದು ರಾಜ್ಯಪಾಲರು ಬಿಎಸ್ ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತು ಪಡಿಸಲು 15 ದಿನಗಳ ಸಮಯಾವಕಾಶವನ್ನು ನೀಡಿದ್ದರು. ಇದನ್ನು ಪ್ರಶ್ನೆ ಮಾಡಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದವು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ 15 ದಿನಗಳ ಸಮಯಾವಕಾಶವನ್ನು ರದ್ದು ಪಡಿಸಿ 24 ಗಂಟೆಗಳಲ್ಲಿ ಬಹುಮತ ಸಾಬೀತು ಪಡಿಸಲು ಸೂಚನೆ ನೀಡಿದ್ದರು. ಇದರಂತೆ ಬಹುಮತಯಾಚನೆಗೆ ಮುಂದಾಗದ ಬಿಎಸ್ ಯಡಿಯೂರಪ್ಪ ಅವರು ಸದನದಲ್ಲಿ ಭಾಷಣ ಮಾಡಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತೆರಳಿದ್ದರು. ಸದ್ಯ ಇದೇ ತೀರ್ಪನ್ನು ನಾಯ್ಯಾಲಯದ ಮುಂದೇ ಪ್ರಸ್ತಾಪ ಮಾಡಿರುವ ಬಿಜೆಪಿ ಬಹುಮತ ಸಾಬೀತು ಪಡಿಸಲು ಸೂಚನೆ ನೀಡುವಂತೆ ಮನವಿ ಮಾಡಿದೆ.

Comments

Leave a Reply

Your email address will not be published. Required fields are marked *