ಕಾವೇರಿ ಮಾತೆಯ ಶಾಪ ಸಿಎಂ ಅವರನ್ನು ಸುಮ್ಮನೆ ಬಿಡಲ್ಲ: ಕೆ.ಜೆ.ಬೋಪಯ್ಯ

ಮಡಿಕೇರಿ: ಕಾವೇರಿ ಮಾತೆಯ ಶಾಪ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಸುಮ್ಮನೆ ಬಿಡುವುದಿಲ್ಲವೆಂದು ಮಾಜಿ ಸ್ಪೀಕರ್ ಹಾಗೂ ಹಾಲಿ ಶಾಸಕ ಕೆ.ಜೆ.ಬೋಪಯ್ಯ ಕಿಡಿಕಾರಿದ್ದಾರೆ.

ಶುಕ್ರವಾರ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ನಗರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಟಿಪ್ಪು ಜಯಂತಿಯನ್ನು ಈ ಮಣ್ಣಿನಲ್ಲಿ ಆಚರಣೆ ಮಾಡುತ್ತಿದ್ದೀರಾ? ಬೆಂಗಳೂರಿನಲ್ಲಿ ನಡೆಯುವ ಆಚರಣೆಯಲ್ಲಿ ಸಿಎಂ ಕುಮಾರಸ್ವಾಮಿ ಹೆಸರಿಲ್ಲ. ಆದರೆ ಇಲ್ಲಿ ಏಕೆ ದಮನ ಮಾಡುವ ರೀತಿ ಮಾಡುತ್ತಿದ್ದೀರಿ? ಎಲ್ಲೂ ಇಲ್ಲದ ಸುತ್ತೋಲೆ, ಸೆಕ್ಷನ್‍ಗಳು ಏತಕ್ಕೆ? ನೀವು ಕಾರ್ಯಕ್ರಮಕ್ಕೆ ಹೋಗದೆ, ಒಡೆದು ಆಳುವ ರೀತಿ ಮಾಡುತ್ತಿದ್ದೀರಾ. ನಾಡಿನ ಜನತೆ ಬುದ್ಧಿವಂತರಿದ್ದಾರೆ, ಎಲ್ಲವನ್ನು ನೋಡುತ್ತಿರುತ್ತಾರೆ ಎಂದು ಹೇಳಿದರು.

ಈಗಲೂ ಕಾಲ ಮಿಂಚಿಲ್ಲ, ದಯಮಾಡಿ ಟಿಪ್ಪು ಜಯಂತಿಯನ್ನು ಕೈ ಬಿಡಿ. ಈ ಪುಣ್ಯ ನೆಲದಲ್ಲಿ ಜಯಂತಿ ಮಾಡಬೇಡಿ. ಒಂದು ವೇಳೆ ಮಾಡಿದರೆ, ಕಾವೇರಿ ಮಾತೆಯ ಶಾಪ ತಟ್ಟೇ ತಗಲುತ್ತದೆ. ಸಿದ್ದರಾಮಯ್ಯ ಅವರಿಗೆ ಅದ ರೀತಿ ನಿಮಗೂ ಅಗುತ್ತೆ ಇದನ್ನ ನೆನಪಿನಲ್ಲಿ ಇಟ್ಟುಕೊಳ್ಳಿ. ಕಾವೇರಿ ಶಾಪ ನಿಮಗೂ ತಟ್ಟುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ನಡೆಯುವ ಪ್ರತಿಭಟನೆಯಲ್ಲಿ ನಾವು ಭಾಗವಹಿಸುತ್ತೇವೆ. ನಮ್ಮ ಮೇಲೆ ಮೊಕದ್ದಮೆ ದಾಖಲು ಮಾಡಿದರೆ ನಾವು ಹೆದರುವುದಿಲ್ಲ. ನೀವು ನಮ್ಮ ಮೇಲೆ ಮರಣದಂಡನೆಯಾಗಲಿ, ಜೀವಾವಧಿ ಶಿಕ್ಷೆಯಾಗಲಿ ನೀಡಲು ಸಾಧ್ಯವಿಲ್ಲ. ಏನು? ನಮ್ಮ ಮೇಲೆ ಕೇಸ್ ಹಾಕಿ, ಒಳಗೆ ಹಾಕಿಸಬಹುದು. ಆದರೆ ನಾವು ಹೊರಗಡೆ ಬಂದ ಮೇಲೆ ನೀವು ಇರ್ತೀರಾ ಆಗ ನೋಡಿ ಎಂದು ಅಸಮಾಧಾನ ಹೊರಹಾಕಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *