ಬಿಜೆಪಿ ಶಾಸಕ ಸುನಿಲ್ ನಾಯ್ಕ್ ಬೆಂಬಲಿಗರ ಅಟ್ಟಹಾಸ – ರಾಡ್ ಹಿಡಿದು ಮೀನುಗಾರರ ಮೇಲೆ ದೌರ್ಜನ್ಯ

ಕಾರವಾರ: ಭಟ್ಕಳ ಶಾಸಕ ಸುನಿಲ್ ನಾಯ್ಕ್ ಆಪ್ತ ಗುತ್ತಿಗೆದಾರರಿಂದ ಮೀನುಗಾರರ ಮೇಲೆ ರಾಡ್ ಹಿಡಿದು ಗೂಂಡಾಗಿರಿ ನಡೆಸಿದ ಘಟನೆ ಹೊನ್ನಾವರ ಕಾಸರಕೋಡ ಟೊಂಕಾದ ಕಡಲತೀರದ ಬಳಿ ನಡೆದಿದೆ.

ಉತ್ತರ ಕನ್ನಡದ ಭಟ್ಕಳದ ಬಿಜೆಪಿ ಶಾಸಕ ಸುನಿಲ್ ನಾಯ್ಕ್ ಬೆಂಬಲಿಗರ ಅಟ್ಟಹಾಸ ಎಲ್ಲೆ ಮೀರಿದೆ. ಶಾಸಕರ ಆಪ್ತ ಗುತ್ತಿಗೆದಾರರು ರಾಡ್ ಹಿಡಿದು ಮೀನುಗಾರರ ಮೇಲೆ ದೌರ್ಜನ್ಯ ನಡೆಸಲು ಯತ್ನಿಸಿದ ಘಟನೆ ಕಾಸರಕೋಡ ಟೊಂಕಾದ ಕಡಲತೀರದ ಬಳಿ ನಡೆದಿದೆ. ವಾಣಿಜ್ಯ ಬಂದರು ನಿರ್ಮಾಣಕ್ಕೆ ಕೋರ್ಟ್ ತಡೆಯಾಜ್ಞೆ ಇದ್ದರೂ, ಕಳೆದ ಮೂರು ದಿನದಿಂದ ಅಕ್ರಮವಾಗಿ ಕಾಮಗಾರಿ ನಡೆಸಲು ಶಾಸಕರ ಬೆಂಬಲಿಗರು ಯತ್ನಿಸಿದ್ರು. ಇದನ್ನೂ ಓದಿ: ಮದುವೆ ಮನೆಯಲ್ಲಿ ಕರಿಮಣಿ ಪೋಣಿಸಿದ ಶಾಸಕ ರೇಣುಕಾಚಾರ್ಯ

ಈ ಸಂಬಂಧ ಹೊನ್ನಾವರ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿತ್ತು. ಆದರೇ ಇಂದು ಕೂಡ, ಶಾಸಕರ ಆಪ್ತರಾದ ತುಂಬೊಳ್ಳಿ ಜಗದೀಶ್, ರಮೇಶ್ ಅಕ್ರಮ ಕಾಮಗಾರಿಗೆ ಯತ್ನಿಸಿದ್ರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ವಾಹನಗಳನ್ನು ತಡೆದ ಮೀನುಗಾರರ ಮೇಲೆ ರಾಡ್ ಮೂಲಕ ಬೆದರಿಸಲು ನೋಡಿದ್ದಾರೆ. ಮೀನುಗಾರರು ವಿರೋಧ ವ್ಯಕ್ತಪಡಿಸಿ ವಾಹನಗಳನ್ನು ತಡೆದಿದ್ದು, ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ವಾಹನದಿಂದ ರಾಡ್ ಅನ್ನು ಹೊರತೆಗೆದ ಶಾಸಕರ ಆಪ್ತರು ಮೀನುಗಾರರಿಗೆ ಹೆದರಿಸಿದ್ದಾರೆ. ನಂತರ ತಮ್ಮ ಆತ್ಮ ರಕ್ಷಣೆಗಾಗಿ ರಾಡ್ ಇಟ್ಟುಕೊಂಡಿರುವುದಾಗಿ ಸಮಜಾಯಿಸಿ ನೀಡಿದ್ದು, ಈ ಕುರಿತು ಮೀನುಗಾರರು ಮತ್ತೊಂದು ಕಂಪ್ಲೇಂಟ್ ನೀಡಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ಯುವತಿಯ ಮೇಲೆ ಬೆಂಗ್ಳೂರಿನಲ್ಲಿ ಗ್ಯಾಂಗ್‌ ರೇಪ್‌ – 7 ಮಂದಿಗೆ ಜೀವಾವಧಿ ಶಿಕ್ಷೆ

 

Comments

Leave a Reply

Your email address will not be published. Required fields are marked *