ಹೊಸ ವರ್ಷದಿಂದಲೇ ಶುರುವಾಗಲಿದೆ ಬಿಜೆಪಿ `ಮಿಷನ್ 150′ ಟಾರ್ಗೆಟ್ ಕಾರ್ಯತಂತ್ರ

ಬೆಂಗಳೂರು: ಕರ್ನಾಟಕದಲ್ಲಿ ಕಮಲ ಅರಳಿಸಿಯೇ ಸಿದ್ಧ ಅಂತ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪಣ ತೊಟ್ಟಿದ್ದಾರೆ. ಹೊಸ ವರ್ಷದಿಂದಲೇ ‘ಮಿಷನ್ 150’ ಟಾರ್ಗೆಟ್ ಕಾರ್ಯತಂತ್ರ ಶುರುವಾಗಲಿದೆ. ಬಿಜೆಪಿ ನಾಯಕರಲ್ಲಿ ಚುನಾವಣೋತ್ಸಾಹ ತುಂಬಲು ಡಿಸೆಂಬರ್ 31ಕ್ಕೆ ಸಿಕ್ರೇಟ್ ಟ್ರೀಟ್‍ಮೆಂಟ್ ನಡೆಯಲಿದೆ. ಡಿಸೆಂಬರ್ 31ರಂದೇ ಅಮಿತ್ ಶಾ `ವಾರ್ ರೂಮ್’ಗೆ ರಹಸ್ಯ ಪೂಜೆ ನಡೆಸಲಿದ್ದಾರೆ ಎನ್ನಲಾಗಿದೆ.

ಡಿಸೆಂಬರ್ 31ಕ್ಕೆ ಬೆಂಗಳೂರಿಗೆ ಬರಲಿರುವ ಅಮಿತ್ ಶಾ ಹೊಸ ವರ್ಷದಿಂದ ಬಿಜೆಪಿ `ಮಿಷನ್ 150′ ಟಾರ್ಗೆಟ್ ಕಾರ್ಯತಂತ್ರ ಶುರು ಮಾಡಲಿದ್ದಾರೆ, ಬೆಂಗಳೂರು ಏರ್‍ಪೋರ್ಟ್ ರಸ್ತೆಯಲ್ಲಿ ಬಿಜೆಪಿ 6 ಬೆಡ್ ರೂಂಗಳ ವಿಲ್ಲಾ ಬಾಡಿಗೆಗೆ ಪಡೆದಿದೆ. ಅಮಿತ್ ಶಾ ಜೊತೆ 10 ಜನರ ವಾರ್ ರೂಂ ತಂಡವೂ ಕೂಡ ಆಗಮನವಾಗಲಿದೆ. ಡಿಸೆಂಬರ್ 31ರಂದೇ ಅಮಿತ್ ಶಾ ಕೋರ್ ಕಮಿಟಿ ಸಭೆ, ಶಾಸಕರ ಸಭೆ ನಡೆಸಲಿದ್ದಾರೆ.

ಮಹದಾಯಿ ವಿಚಾರದಲ್ಲಿ ಮುಂದೇನು ಮಾಡ್ಬೇಕು ಅನೋದ್ರ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಜೊತೆಗೆ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವಾಗಿ ವಿಶ್ಲೇಷಣೆ, ವಿವರಣೆ ಹಾಗೂ ಸಿಎಂ ವಿರುದ್ಧದ ಪ್ರಾಸಿಕ್ಯೂಶನ್ ಅನುಮತಿ ವಿಚಾರವಾಗಿ ಮಹತ್ವದ ಸಭೆ ನಡೆಯಲಿದೆ. ಅನಂತಕುಮಾರ್ ಹೆಗ್ಡೆ, ಪ್ರತಾಪ್ ಸಿಂಹ ನಡವಳಿಕೆಗಳ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ.

ಈ ಮಧ್ಯೆ, ಜನವರಿ ಕೊನೆವಾರದಲ್ಲಿ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ ಅಂತ ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *