ಬಿಜೆಪಿಯವರು ನನಗೆ 30 ಕೋಟಿ ಕೊಡ್ತೀವಿ ಪಕ್ಷಕ್ಕೆ ಬನ್ನಿ ಅಂದಿದ್ದರು- ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: ಬಿಜೆಪಿ ಮುಖಂಡರು ನನಗೆ ಪಕ್ಷಕ್ಕೆ ಬರಲು 30 ಕೋಟಿ ಹಣದ ಆಫರ್ ನೀಡಿದ್ದರು ಅಂತ ಹೇಳುವ ಮೂಲಕ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡರೇ ನನಗೆ ಫೋನ್ ಮಾಡಿದ್ರು. ಈ ವಿಚಾರವನ್ನು ನಮ್ಮ ಮುಖಂಡರ ಗಮನಕ್ಕೆ ತೆಗೆದುಕೊಂಡು ಬಂದೆ. ಬಿಜೆಪಿಯವರ ಮೆಸೇಜ್ ಗಳನ್ನು ಕೂಡ ನಮ್ಮ ಮುಖಂಡರಿಗೆ ತೋರಿಸಿದೆ. ಆ ಸಂದರ್ಭದಲ್ಲಿ ಡಾ. ಜಿ ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಆವಾಗ ಅವರ ಬಳಿ ಎಲ್ಲವನ್ನು ಹೇಳಿಕೊಂಡಿದ್ದೆ ಅಂದ್ರು.

ನನ್ನನ್ನು ಕೂಡ ಅವರು ಸಂಪರ್ಕ ಮಾಡಿದ್ರು ಅಂತ ಹೇಳುತ್ತಿದ್ದೇನೆ. ಹೀಗೆ ಬೇರೆಯವರನ್ನು ಕೂಡ ಸಂಪರ್ಕ ಮಾಡಿರುವುದಾಗಿ ಈಗಾಗಲೇ ಎಲ್ಲರೂ ಹೇಳಿದ್ದಾರೆ. ಹೀಗೆ ಬಿಜೆಪಿಯವರು ನನಗೆ 30 ಕೋಟಿ ಕೊಡುವುದಾಗಿ, ಮಂತ್ರಿ ಮಾಡುವುದಾಗಿ ಭರವಸೆ ನೀಡಿದ್ದರು ಎಂದು ತಿಳಿಸಿದರು.

ಪ್ರಜಾಪ್ರಭುತ್ವದಲ್ಲಿ ಸರ್ಕಾರ ಬಹಳಷ್ಟು ಚೆನ್ನಾಗಿ ಕೆಲಸ ಮಾಡುತ್ತಿದೆ. ಅಪರೇಷನ್ ಕಮಲ ಅಥವಾ ಇನ್ಯಾವುದೋ ಆಪರೇಷನ್ ಆಗಲಿ ಕಾಂಗ್ರೆಸ್ ನವರು ಬಿಜೆಪಿಗೆ ಹೋಗಲ್ಲ ಅಂತ ಸ್ಪಷ್ಟಪಡಿಸಿದ್ರು.

ಇದೇ ವೇಳೆ ಈ ತರ ಆಫರ್ ಮಾಡದವರು ಯಾರು ಅಂತ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅದನ್ನೆಲ್ಲ ಇಲ್ಲಿ ಹೇಳಲು ಆಗಲ್ಲ. ನಮ್ಮ ಪಕ್ಷದ ವರಿಷ್ಠರಿಗೆ ಹೇಳೋದಾಗಿ ಆಫರ್ ಮಾಡಿದ ಬಿಜೆಪಿಯವರ ಹೆಸರು ಹೇಳಲು ನಿರಾಕರಿಸಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *