ಅನಂತಕುಮಾರ ಹೆಗಡೆ ಕಾಲಿನ ಹೆಬ್ಬೆರಳಿಗಿರುವಷ್ಟೂ ಬೆಲೆ ಆನಂದ್ ಅಸ್ನೋಟಿಕರ್ ಗೆ ಇಲ್ಲ: ಬಿಜೆಪಿ ಮುಖಂಡ

ಕಾರವಾರ: ಮಾಜಿ ಶಾಸಕ ಆನಂದ್ ಅಸ್ನೋಟಿಕರ್ ಒಬ್ಬ ಪರಮನೀಚ, ಆತನಿಗೆ ಅನಂತಕುಮಾರ್ ಹೆಗಡೆ ಕಾಲಿನ ಹೆಬ್ಬೆರಳಿಗಿರುವಷ್ಟೂ ಬೆಲೆಯಿಲ್ಲ ಎಂದು ಬಿಜೆಪಿ ಮುಖಂಡ ಸುನಿಲ್ ಹೆಗಡೆ ಕಿಡಿಕಾರಿದ್ದಾರೆ. ಕಾರವಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಅನಂತಕುಮಾರ ಓರ್ವ ನೀಚ ರಾಜಕಾರಣಿ ಎಂದು ಹೇಳಿದ್ದ ಆನಂದ್ ಅಸ್ನೋಟಿಕರ್ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ರು.

ಉದ್ಯಮಿಯಾಗಿರುವ ಆನಂದ್ ಅಸ್ನೋಟಿಕರ್ ಸ್ವಹಿತ ಸಾಧನೆಗಾಗಿ ಕಾಂಗ್ರೆಸ್ ದೃಷ್ಟಿಯಲ್ಲಿ ಒಳ್ಳೆಯವರೆನಿಸಿಕೊಳ್ಳಲು ಈ ರೀತಿಯ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಆದರೆ ವಸಂತ ಅಸ್ನೋಟಿಕರ್ ಬಳಿಕ ಸಿಂಪತಿ ಮೇಲೆ ಚುನಾವಣೆಯಲ್ಲಿ ಆರಿಸಿ ಬಂದ ಆನಂದ್ ಪಕ್ಷದಿಂದ ಪಕ್ಷವನ್ನ ಬದಲಾವಣೆ ಮಾಡುತ್ತಾ ಆರಿಸಿದ ಮತದಾರರಿಗೂ ನಿಷ್ಠಾವಂತರಾಗಿರದೇ ಪ್ರಜಾಪ್ರಭುತ್ವವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ದೇಶದ ನೀಚ ಮಂತ್ರಿ ಅಂದ್ರೆ ಅನಂತಕುಮಾರ್ ಹೆಗಡೆ-ಆನಂದ್ ಅಸ್ನೋಟಿಕರ್

ಗೋವಾದ ಕ್ಯಾಸಿನೋ ಒಂದರಲ್ಲಿ ತೆವಲನ್ನ ತೀರಿಸಿಕೊಳ್ಳಲು ಹೋಗಿದ್ದ ಆನಂದ್ ಅಸ್ನೋಟಿಕರ್ ಅಲ್ಲಿನ ಬೌನ್ಸರ್ ಗಳಿಂದ ಹೊಡೆತ ತಿಂದು ಬಂದಿದ್ದರು. ಸಚಿವ ಅನಂತಕುಮಾರ್ ವಿರುದ್ಧ ಮಾತನಾಡುವ ಯಾವುದೇ ನೈತಿಕತೆ ಆನಂದ್ ಅಸ್ನೋಟಿಕರ್ ಗೆ ಇಲ್ಲ ಎಂದು ಮಾಜಿ ಶಾಸಕ ಸುನಿಲ್ ಹೆಗಡೆ ಟೀಕಿಸಿದ್ರು.

ಸಚಿವ, ಸಂಸದ ಅನಂತಕುಮಾರ್ ಹೆಗಡೆ ಹೋರಾಟಗಳ ಮೂಲಕವೇ ತಮ್ಮನ್ನ ತಾವು ಗುರುತಿಸಿಕೊಂಡು ಬಂದಿರುವವರು. ಅನಂತಕುಮಾರ್ ಯಾರೋ ಹಾರಿಸಿದ ಧ್ವಜವನ್ನ ಹಾರಿಸಿ ಹೆಸರು ಪಡೆದುಕೊಂಡಿದ್ದಾರೆ ಅಂತಾ ತುಚ್ಛವಾಗಿ ಮಾತನಾಡಿರುವುದು ಸರಿಯಲ್ಲ. ಇನ್ನು ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಸಚಿವ ಅನಂತಕುಮಾರ್ ಹಲ್ಲೆ ಮಾಡಿದ್ದರು ಎನ್ನುವ ಕುರಿತು ದಾಖಲೆಗಳಿದ್ದರೆ ಅದನ್ನ ಬಿಡುಗಡೆ ಮಾಡಲೀ ಅಂತಾ ಬಿಜೆಪಿ ಆನಂದ್ ಅಸ್ನೋಟಿಕರ್ ಗೆ ಬಹಿರಂಗ ಸವಾಲನ್ನು ಹಾಕಿದರು.

Comments

Leave a Reply

Your email address will not be published. Required fields are marked *