ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರನ್ನು ಮುಟ್ಟಬಹುದೇ- ಸಿಎಂ ಬಗ್ಗೆ ಬಿಜೆಪಿ ನಾಯಕ ಅವಹೇಳನ

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಮುಖ್ಯಮಂತ್ರಿಗಳು ಮಹಿಳೆಯರೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವುದು ತಪ್ಪಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಹೌದು, ಬಿಜೆಪಿ ನಾಯಕರೊಬ್ಬರು ಅದೇ ಫೋಟೋ ಮತ್ತು ವಿಡಿಯೋಗಳನ್ನು ಬಳಸಿಕೊಂಡು ಸಿಎಂ ಸಿದ್ದರಾಮಯ್ಯರನ್ನು ಅವಹೇಳನ ಮಾಡುತ್ತಿದ್ದಾರೆ.

ಶಿವಮೊಗ್ಗದಲ್ಲಿ ನಡೆದಿದ್ದ ಹಕ್ಕು ಪತ್ರ ವಿತರಣಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಲವು ವಿದ್ಯಾರ್ಥಿನಿಯರು ಮುಖ್ಯಮಂತ್ರಿಗಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದರು. ಇಂದು ಅದೇ ವಿಡಿಯೋವನ್ನು ಬಳಸಿ ಬಿಜೆಪಿ ನಾಯಕ, ಐಟಿ ಸೆಲ್‍ನ ಉಸ್ತುವಾರಿ ಅಮಿತ್ ಮಾಳವಿಯಾ ಸಿಎಂರನ್ನು ಅವಹೇಳನ ಮಾಡುತ್ತಿದ್ದಾರೆ.

ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಿಎಂ ವಿದ್ಯಾರ್ಥಿನಿಯ ಕೈ ಹಿಡಿದು ಎಳೆದು ಫೋಟೋ ತೆಗೆದುಕೊಂಡಿದ್ದಾರೆ ಎಂದು ಅಮಿತ್ ಮಾಳವಿಯಾ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಹಿಂದೆ ಸಿಎಂ ಮಂಗಳೂರಿನಲ್ಲಿ ಮೇಯರ್ ಕವಿತಾ ಸನೀಲ್ ಅವರ ಹೊಟ್ಟೆಗೆ ಪಂಚ್ ಕೊಟ್ಟಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 2016ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತರೀಕೆರೆ ತಾಲೂಕು ಪಂಚಾಯ್ತಿ ಸದಸ್ಯೆಯಾಗಿರುವ ಗಿರಿಜಾ ಶ್ರೀನಿವಾಸ್ ಎಂಬವರು ಸಿಎಂಗೆ ಮುತ್ತು ಕೊಟ್ಟಿದ್ದರು.

ಅಮಿತ್ ಮಾಳವಿಯಾ

Comments

Leave a Reply

Your email address will not be published. Required fields are marked *