ಬೆಂಗಳೂರು: ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಕಾವು ಹೆಚ್ಚಾಗುತ್ತಿದ್ದರೆ ಇನ್ನೊಂದು ಕಡೆ ಸ್ಪೀಕರ್ ಕೆಟ್ಟು ಹೋಗಿದೆ ಎಂದು ಈಶ್ವರಪ್ಪ ಟಾಂಗ್ ಕೊಟ್ಟಿದ್ದಾರೆ.
ಕೆ.ಎಸ್.ಈಶ್ವರಪ್ಪ ಅವರು ಹರಿದಿರುವ ಸ್ಪೀಕರ್ ಫೋಟೋವನ್ನು ಟ್ವೀಟ್ ಮಾಡಿ, ಈ ಸ್ಪೀಕರ್ ಕೆಟ್ಟುಹೋಗಿದೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಮಲ್ಲಿಕಾರ್ಜುನ ಸಜ್ಜನ್ ಎಂಬವರು ಸೋಮವಾರ ಹೊಸ ಸ್ಪೀಕರ್ ಬರುತ್ತೆ ಬಿಡಿ ಸರ್ ಎಂದು ಕಮೆಂಟ್ ಮಾಡಿದ್ದಾರೆ.
ಈ ಸ್ಪೀಕರ್ ಕೆಟ್ಟುಹೋಗಿದೆ… pic.twitter.com/x0z3xyUnNg
— K S Eshwarappa (@ikseshwarappa) July 18, 2019
ಸುನಿಲ್ ಮಾಪಾ ಎಂಬವರು ನೀವು ತುಂಬಾ ಲೇಟ್ ಸರ್ ಅದು 2018ರಲ್ಲೇ ಕೆಟ್ಟು ಹೋಗಿತ್ತು ಪ್ರತಿಕ್ರಿಯಿಸಿದರೆ ಹೌದು ಹಾಡಿದನ್ನೆ ಹಾಡುತ್ತೆ. ವಿನ್ಯಾಸವಷ್ಟೇ ವಿವರಿಸುವ, ವಿಪರೀತ, ವಿನಾಕಾರಣ, ಕಾಲಹರಣ ಮಾಡಿಸುವ ಸ್ಪೀಕರ್ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಅನುಪ್ ಕುಲಕರ್ಣಿ ಎಂಬವರು, ಸ್ಪೀಕರ್ ಕೆಟ್ಟು ಹೋಗಿದೆ. ಸ್ಪೀಕರ್ ಕೆಟ್ಟರೆ ಅದರಲ್ಲಿರುವ ಮ್ಯಾಗ್ನೆಟ್‍ಗೆ ಬೆಲೆಯಿಲ್ಲ ಎಂದು ಬರೆದುಕೊಂಡಿದ್ದಾರೆ.
https://twitter.com/Mallika29340855/status/1151811842097856512

Leave a Reply