ಲಕ್ನೋ: ಬಿಜೆಪಿ ಮುಖಂಡರೊಬ್ಬರು ಮಹಿಳಾ ಸ್ನೇಹಿತೆಯೊಂದಿಗೆ ತೆರಳುತ್ತಿದ್ದಾಗ ಪತ್ನಿಯ ಬಳಿ ಸಿಕ್ಕಿಬಿದ್ದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಬುಂದೇಲ್‍ಖಂಡ್ ಪ್ರದೇಶದ ಬಿಜೆಪಿ ಕಾರ್ಯದರ್ಶಿಯಾಗಿರುವ ಮೋಹಿತ್ ಸೋಂಕರ್ ಬೇರೊಂದು ಮಹಿಳೆಯ ಜೊತೆಗೆ ಕಾರಿನಲ್ಲಿ ಹೋಗುತ್ತಿದ್ದರು. ಇದನ್ನು ನೋಡಿದ ಆತನ ಪತ್ನಿ ಹಾಗೂ ಪತ್ನಿಯ ಕಡೆಯವರು ಮೋಹಿತ್‍ಗೆ ನಡುರಸ್ತೆಯಲ್ಲೇ ಚಪ್ಪಲಿಯಿಂದ ಥಳಿಸಿದ್ದರು. ಇದರೊಂದಿಗೆ ಆತನ ಜೊತೆ ಇದ್ದ ಮಹಿಳೆಗೂ ಆಕೆಯ ಪತಿ ಸೇರಿದಂತೆ ಇನ್ನಿತರರು ಥಳಿಸಿದ್ದಾರೆ.

ಮೋಹಿತ್ ಸೋಂಕರ್ ಅವರ ಪತ್ನಿ ಮೋಹಿತ್‍ಗೆ ಥಳಿಸುತ್ತಿರುವ ಘಟನೆಯನ್ನು ವೀಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ಜೂಹಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರನ್ನು ಠಾಣೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ದಲಿತನಿಗೆ ಚಪ್ಪಲಿಯಿಂದ ಥಳಿಸಿದ ಗ್ರಾಮದ ಮುಖ್ಯಸ್ಥ – ಬಂಧನ

ಬಿಜೆಪಿ ನಾಯಕನ ಪತ್ನಿ ಹಾಗೂ ಮಹಿಳೆಯ ಪತಿ ಜೂಹಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಹೈಕಮಾಂಡ್ ಗಮನ ಸೆಳೆಯಲು ಕೆಜಿಎಫ್ ಬಾಬು ಹೊಸ ಪ್ಲ್ಯಾನ್!

Leave a Reply