ಕಾಂಗ್ರೆಸ್ ಈಗ ಒಡೆದ ಮನೆ ಒಂದಷ್ಟು ಬಣ ವಲಸೆರಾಮಯ್ಯರಿಗೆ ಜೈಕಾರ ಹಾಕುತ್ತಿದೆ: ಬಿಜೆಪಿ ವ್ಯಂಗ್ಯ

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಈಗ ಒಡೆದ ಮನೆಯಂತಾಗಿದೆ. ಒಂದಷ್ಟು ಬಣ ವಲಸೆರಾಮಯ್ಯ ಅವರಿಗೆ ಜೈಕಾರ ಹಾಕುತ್ತಿದ್ದಾರೆ ಎಂದು ಬಿಜೆಪಿ ಟ್ವಿಟ್ಟರ್ ಮೂಲಕ ವ್ಯಂಗ್ಯವಾಡಿದೆ.

ಟ್ವೀಟ್‍ನಲ್ಲಿ ಏನಿದೆ?
ಭ್ರಷ್ಟಾಧ್ಯಕ್ಷ ಡಿಕೆಶಿ ಮಾತ್ರ ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಬಣ ಡಿಕೆ ಶಿವಕುಮಾರ್ ಅವರಿಗೆ ಕವಡೆ ಕಾಸಿನ ಕಿಮ್ಮತ್ತೂ ನೀಡುತ್ತಿಲ್ಲವೇಕೆ? ಮಹಡಿ ಹತ್ತಲು ಆಗದವರು, ಬೆಟ್ಟ ಹತ್ತುವ ಕನಸು ಕಂಡರಂತೆ! ತಮ್ಮ ಬೆಂಬಲಿಗರ ಮೂಲಕ ಮುಂದಿನ ಸಿಎಂ ಎಂದು ಘೋಷಿಸಿಕೊಳ್ಳುವ ಬುರುಡೆರಾಮಯ್ಯ ಅವರು ಈಗ ಚುನಾವಣೆ ನಡೆದರೂ ಬಾದಾಮಿಯಲ್ಲಿ ಸೋಲುವುದು ಖಚಿತ, ಇದು ವಾಸ್ತವ. ಇದನ್ನೂ ಓದಿ: ಪಿಎಸ್‌ಐ ಸಮವಸ್ತ್ರ ಧರಿಸಿ ಬಿಲ್ಡಪ್‌ – ಬೆಂಗಳೂರಿನ ಕಾನ್‌ಸ್ಟೇಬಲ್‌ ಅಮಾನತು

ಸಿದ್ದರಾಮಯ್ಯ ಸಿಎಂ ಆಗುವುದೂ ಇಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಇಲ್ಲ. ಒಂದೆಡೆ ಶಾಸಕರ ಅಭಿಪ್ರಾಯ ತೆಗೆದುಕೊಂಡು, ಹೈಕಮಾಂಡ್ ಸಿಎಂ ಅಭ್ಯರ್ಥಿ ಘೋಷಣೆ ಮಾಡುತ್ತದೆ ಎಂದು ಹೇಳುವ ಸಿದ್ದರಾಮಯ್ಯ ಮತ್ತೊಂದೆಡೆ ಬೆಂಬಲಿಗರ ಮೂಲಕ? ಮುಂದಿನ ಸಿಎಂ ಸಿದ್ದರಾಮಯ್ಯ? ಎಂದು ಜೈಕಾರ ಹಾಕಿಸಿಕೊಳ್ಳುತ್ತಿದ್ದಾರೆ. ಇದೆಲ್ಲ ಡಿಕೆ ಶಿವಕುಮಾರ್ ಅವರನ್ನು ಕಟ್ಟಿಹಾಕುವ ಪೂರ್ವನಿಯೋಜಿತ ರಣತಂತ್ರದ ಭಾಗವೇ?. ಇದನ್ನೂ ಓದಿ: PSI ಹಗರಣ CBI ತನಿಖೆಗೆ ಒಪ್ಪಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಗ್ರಹ

SIDDARAMAIAH

ಡಿಕೆ ಸಹೋದರರು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೆಪಿಎಸ್‍ಸಿಯನ್ನು ಅಕ್ರಮದ ಗೂಡನ್ನಾಗಿ ಪರಿವರ್ತಿಸಿದ್ದರು. ತಮ್ಮ ಸಂಬಂಧಿಯನ್ನು ಕೆಪಿಎಸ್‍ಸಿ ಸದಸ್ಯರಾಗಿ ನೇಮಿಸಿಕೊಂಡ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರು ನಡೆಸಿದ ಅಕ್ರಮಕ್ಕೆ ಇಲ್ಲಿದೆ ಸಾಕ್ಷ್ಯ. ನೇಮಕಾತಿಗೆ 25 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದು ಏಕೆ? ಮಜವಾದಿ ನಾಯಕ ಸಿದ್ದರಾಮಯ್ಯ ಅವರೇ, ಪಿಎಸ್‍ಐ ನೇಮಕ ಹಗರಣದ ಬಗ್ಗೆ ವೃಥಾರೋಪ ಮಾಡುವ ಮುನ್ನ ನಿಮ್ಮ ಸರ್ಕಾರದ ಅವಧಿಯಲ್ಲಿ ನಡೆದ ನೇಮಕ ದಂಧೆಯ ಬಗ್ಗೆ ಸ್ವಲ್ಪ ಕಣ್ಣು ಹಾಯಿಸುವಿರಾ? ಕೆಪಿಸಿಸಿಯ ಭ್ರಷ್ಟಾಧ್ಯಕ್ಷರ ಕಮಾಯಿ ಬಗ್ಗೆ ಮಾತನಾಡುವ ತಾಕತ್ತು ತೋರುವಿರಾ?. ಇದನ್ನೂ ಓದಿ: ಸಿದ್ದರಾಮಯ್ಯನನ್ನು ಕಾಂಗ್ರೆಸ್‌ನಿಂದಲೇ ಹೊರಹಾಕ್ತಾರೆ: ಮುನಿರತ್ನ ಹೊಸ ಬಾಂಬ್

ಕೆಪಿಎಸ್‍ಸಿ ಹಾಗೂ ಪೊಲೀಸ್ ನೇಮಕ ಸಮಯದಲ್ಲಿ ನಡೆದ ಅಕ್ರಮವನ್ನು ಕಾಂಗ್ರೆಸ್ ಸರ್ಕಾರ ಮುಚ್ಚಿ ಹಾಕಿದ್ದೇಕೆ? ಸಿದ್ದರಾಮಯ್ಯ ಅವರೇ, ಈ ಹಗರಣದಲ್ಲಿ ನೀವು ಪಡೆದ ಪರ್ಸಂಟೇಜ್ ಎಷ್ಟು ಕಾಮಾಲೆ ಕಣ್ಣಿಗೆ ಲೋಕವೆಲ್ಲಾ ಹಳದಿ ಕಾಣುವಂತೆ ಕಾಂಗ್ರೆಸ್ ಕಾಲದಲ್ಲಿ ಮಾಡಿದ ಅಕ್ರಮಗಳ ಫಲಶ್ರುತಿಯೇ ಇಂದಿನ ಪರಿಸ್ಥಿತಿಗೆ ಕಾರಣ. ಕಾಂಗ್ರೆಸ್ ಅವಧಿಯಲ್ಲಿ ನಡೆದ ನೇಮಕಾತಿ ಅಕ್ರಮಗಳನ್ನು ತನಿಖೆಗೆ ಒಳಪಡಿಸಿಲ್ಲವೇಕೆ, ಸಿದ್ದರಾಮಯ್ಯ? ಬಿಜೆಪಿ ಸರ್ಕಾರ ತನಿಖೆಯ ಆಳ ಇಳಿದಂತೆ ಬಿಸಿ ತಟ್ಟಿತೇ?.

 

Comments

Leave a Reply

Your email address will not be published. Required fields are marked *