60 ವರ್ಷದಲ್ಲಿ ಆಗದ ಅಭಿವೃದ್ಧಿ ಕಾರ್ಯಗಳು ಮೋದಿ ಅವಧಿಯಲ್ಲಿ ನಡೆದಿದೆ: ರಾಜೀವ್ ಚಂದ್ರಶೇಖರ್

– ಮೋದಿ ಆಡಳಿತದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪ ಇಲ್ಲ

ಶಿವಮೊಗ್ಗ: ದೇಶಕ್ಕೆ ಸ್ವಾತಂತ್ರ್ಯ ಬಂದ 75 ವರ್ಷದಲ್ಲಿ ಕಾಂಗ್ರೆಸ್ 60 ವರ್ಷಕ್ಕೂ ಅಧಿಕ ಕಾಲ ದೇಶದಲ್ಲಿ ಆಡಳಿತ ನಡೆಸಿದೆ. ಆದರೆ 60 ವರ್ಷದಲ್ಲಿ ಆಗದ ಅಭಿವೃದ್ಧಿ ಕೆಲಸಗಳು ಮೋದಿಯವರ ಕಾಲದಲ್ಲಿ ನಡೆದಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದರು.

ಶಿವಮೊಗ್ಗದ ಶುಭಮಂಗಳ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ 60 ವರ್ಷಗಳ ಕಾಲ ಒಂದು ಪಕ್ಷ ಆಡಳಿತ ನಡೆಸಿದೆ. 60 ವರ್ಷ ಆಡಳಿತ ನಡೆಸಿದ ಪಕ್ಷಕ್ಕೆ ಆರ್ಟಿಕಲ್ 370 ರದ್ದುಗೊಳಿಸಲು ಸಾಧ್ಯವಾಗಿರಲಿಲ್ಲ ಎಂದರು.

ರಾಮ ಮಂದಿರ ನಿರ್ಮಾಣಕ್ಕೆ ಮೋದಿ ಸರ್ಕಾರವೇ ಬರಬೇಕಾಯಿತು. ಪುಲ್ವಾಮಾ, ಬಾಲಕೋಟ್ ಅಂತಹ ಭಯೋತ್ಪಾದಕರ ದಾಳಿಗೆ ಪ್ರತ್ಯುತ್ತರ ನೀಡಲು ಮೋದಿ ಅವರೇ ಬರಬೇಕಾಯಿತು. ಮೋದಿ ಅವರ ಆಡಳಿತದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪ ಕೇಳಿಲ್ಲ. ರಾಜೀವ್ ಗಾಂಧಿ ಅವರ ಆಡಳಿತದ ಅವಧಿಯಲ್ಲಿ ಸರ್ಕಾರದ ಯೋಜನೆಗಳು ಕೇವಲ ಶೇ.15 ರಷ್ಟು ತಲುಪುತಿತ್ತು. ಶೇ.85 ರಷ್ಟು ಭ್ರಷ್ಟಾಚಾರ ಇತ್ತು. ಆದರೆ ಮೋದಿಯವರ ಸರ್ಕಾರದಲ್ಲಿ ಶೇ.100 ರಷ್ಟು ಯೋಜನೆಗಳು ಫಲಾನುಭವಿಗಳಿಗೆ ತಲುಪುತ್ತಿವೆ ಎಂದರು. ಇದನ್ನೂ ಓದಿ: ಆರ್ಟಿಕಲ್ 370 ರದ್ದು ಭಾರತದ ಆಂತರಿಕ ವಿಚಾರ ಅಂತ ಒಪ್ಕೊಂಡ ಪಾಕ್

ನವ ಭಾರತದ ಕಲ್ಪನೆಯನ್ನು ಮೋದಿ ಸರ್ಕಾರ ಹೊಂದಿದ್ದು, ಮುಂದಿನ 25 ವರ್ಷದಲ್ಲಿ ಈ ಯೋಜನೆ ನಿರ್ಮಿಸುವ ಗುರಿ ಹೊಂದಲಾಗಿದೆ. ಈ 25 ವರ್ಷದಲ್ಲಿ ಹೊಸ ಶಿಕ್ಷಣ ನೀತಿ, ತಾಂತ್ರಿಕತೆ, ಮೊದಲಾದ ಉತ್ತಮ ಯೋಜನೆಗಳಿದ್ದು 2047 ಕ್ಕೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಇನ್ನು 25 ವರ್ಷಗಳ ಕಾಲ ಈ ದೇಶಕ್ಕೆ ಮೋದಿ ಅವರ ನಾಯಕತ್ವ ಅವಶ್ಯಕತೆ ಇದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದರು. ಇದನ್ನೂ ಓದಿ: ಆರ್ಟಿಕಲ್ 370 ರದ್ದು ಬಳಿಕ ಮೊದಲ ಬಾರಿಗೆ ಜಮ್ಮು, ಕಾಶ್ಮೀರ ನಾಯಕರೊಂದಿಗೆ ಮೋದಿ ಸಭೆ

 

Comments

Leave a Reply

Your email address will not be published. Required fields are marked *