ಬಿಜೆಪಿ ಒಂದು ಅವಕಾಶವಾದಿ ಪಕ್ಷ: ಶಿವಾರಾಜ್ ತಂಗಡಗಿ ವ್ಯಂಗ್ಯ

ಕೊಪ್ಪಳ: ಬಿಜೆಪಿ ಒಂದು ಅವಕಾಶವಾದಿ ಪಕ್ಷ. ಅವಕಾಶ ಇದ್ದಾಗ ಉಪಯೋಗಿಸಿ ನಂತರ ಕೈ ಕೊಡುತ್ತಾರೆ. ಇದಕ್ಕೆ ಜೀವಂತ ಸಾಕ್ಷಿ ಅಂದರೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಶಾಸಕ ಬಿ.ಶ್ರೀರಾಮುಲು ಎಂದು ಹೇಳುವ ಮೂಲಕ ಮಾಜಿ ಸಚಿವ ಶಿವಾರಾಜ್ ತಂಗಡಗಿ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಗಾಲಿ ಜನಾರ್ದನ್ ರೆಡ್ಡಿ ಇಲ್ಲ ಅಂದಿದ್ದರೆ ಅಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಜನಾರ್ದನ ರೆಡ್ಡಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಈಗ ಜನಾರ್ದನ ರೆಡ್ಡಿ ನನಗೆ ಸಂಬಂಧವೇ ಇಲ್ಲ ಅಂತಾ ಹೇಳುತ್ತಿದ್ದಾರೆ.

ಸಮ್ಮಿಶ್ರ ಸರ್ಕಾರ ರಚನೆಯಲ್ಲಿ 5 ಜನ ಪಕ್ಷೇತರ ಶಾಸಕರನ್ನು ಕರೆತರಲು ಈ ಇಬ್ಬರು ನಾಯಕರು ಪ್ರಮುಖ ಪಾತ್ರ ವಹಿಸಿದ್ದರು. ಆದರೆ ನಂತರದಲ್ಲಿ ಬಹುಮತದಿಂದ ಜಯ ಸಾಧಿಸಿದ್ದ ಬಿಜೆಪಿಯವರು ನಮ್ಮನ್ನು ಕೈಬಿಟ್ಟರು. ನಮ್ಮಂತೆ ಈಗ ಜನಾರ್ದನ ರೆಡ್ಡಿ ಬಿಜೆಪಿ ಕೈಬಿಟ್ಟಿದೆ. ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರಿಗೆ ಈಗಲಾದರೂ ಅರ್ಥ ಆಗಬೇಕು ಎಂದು ಆರೋಪಿಸಿದರು.

ಸಮ್ಮಿಶ್ರ ಸರ್ಕಾರ ರಚನೆಯ ಜವಾಬ್ದಾರಿ ಹೊತ್ತು, ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು. ಅಷ್ಟೇ ಅಲ್ಲದೆ ಚುನಾವಣೆ ವೇಳೆ ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಸುಳ್ಳು ಹೇಳಿ ಈ ಭಾಗದ ಮತಗಳನ್ನು ಕದ್ದಿದ್ದರು ಎಂದು ದೂರಿದರು.

ಶ್ರೀರಾಮುಲು ಅವರು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಅಂತಾ ಬಳ್ಳಾರಿ ಲೋಕಸಭಾ ಉಪಚುನಾವಣೆ ಪ್ರಚಾರದ ವೇಳೆ ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ ಹೇಳಿದ್ದರು. ಸತ್ಯ ಏನು ಅಂದರೆ ಅವರು ಬೊಗಳೆ ಬಿಟ್ಟಿದ್ದಾರೆ ಅಷ್ಟೇ. ಉಪಮುಖ್ಯಮಂತ್ರಿ ಅಲ್ಲಾ ಕೊನೆಪಕ್ಷ ವಿರೋಧ ಪಕ್ಷದ ಉಪನಾಯಕರನ್ನಾಗಿ ಶ್ರೀರಾಮುಲು ಅವರನ್ನು ನೇಮಿಸಲಿಲ್ಲ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *