ಬಿಜೆಪಿ ಹೈಕಮಾಂಡ್‌ನಿಂದ ಗುಪ್ತ ಆಪರೇಷನ್‌ 23

ಬೆಂಗಳೂರು: ಕರ್ನಾಟಕ ಎಲೆಕ್ಷನ್‍ಗೆ(Karnataka Election) ಬಿಜೆಪಿ ಹೈಕಮಾಂಡ್‍ (BJP High Command) ಭರ್ಜರಿ ತಯಾರಿ ನಡೆಸಿದ್ದು 224 ವಿಧಾನಸಭೆ ಕ್ಷೇತ್ರಗಳಲ್ಲಿ ಸಮೀಕ್ಷೆ(Survey) ನಡೆಸಲು 23 ಜನರ ತಂಡವನ್ನು ಕಳುಹಿಸಿ ಕೊಟ್ಟಿದೆ.

ಕಳೆದ ವಾರ ಸುದ್ದಿಗೋಷ್ಠಿಯಲ್ಲಿ ನಮ್ಮಲ್ಲಿ ಚಂದ್ರಗುಪ್ತ, ಚಾಣಾಕ್ಯರು ಇದ್ದಾರೆ. ನಮಗೆ ಯಾವುದೇ ಭಯವಿಲ್ಲ ಎಂದು ಸಿಟಿ ರವಿ(CT Ravi) ಹೇಳಿದ್ದರು. ಆದರೆ ಈ ಚಾಣಾಕ್ಯರು ಯಾರು ಎಂದು ಹೇಳಿರಲಿಲ್ಲ. ಆದರೆ ಈಗ 23 ಮಂದಿಯ ತಂಡ ರಹಸ್ಯವಾಗಿ ಸಮೀಕ್ಷೆ ಆರಂಭಿಸಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಮುಂದೆ ಭಾರತ್ ಜೋಡೋ, ಹಿಂದೆ ಎಲೆಕ್ಷನ್ ಸರ್ವೆ – ಮಳೆಯಲ್ಲೂ ನಿಲ್ಲದ ರಾಹುಲ್ ಜೋಶ್

ಗುಪ್ತ್ ಆಪರೇಷನ್ 23
ಗುಪ್ತ್ ಆಪರೇಷನ್ 23 ಟೀಂನಿಂದ 224 ಕ್ಷೇತ್ರಗಳ ಇಂಚಿಂಚು ಮಾಹಿತಿ ಸಂಗ್ರಹ ಆರಭವಾಗಿದೆ. ಒಬ್ಬರಿಗೆ 10 ಕ್ಷೇತ್ರಗಳಂತೆ 23 ಜನರಿಗೆ 224 ಕ್ಷೇತ್ರಗಳನ್ನ ಹಂಚಿ ಹೈಕಮಾಂಡ್‌ ಟಾಸ್ಕ್ ನೀಡಿದೆ.

ಮಾಹಿತಿ ಕಲೆ ಹಾಕುವುದಷ್ಟೇ ಅಲ್ಲ ಕೆಲ ರಹಸ್ಯ ಚಟುವಟಿಕೆಗಳ ಮೇಲೆಯೂ ತಂಡ ನಿಗಾ ಇಡಲಿದೆ. ಎಲ್ಲ ಪಕ್ಷಗಳ ನಾಯಕರ ಎಲೆಕ್ಷನ್ ಚಟುವಟಿಕೆಗಳ ಬಗ್ಗೆ ಆ ಟೀಂ ಹದ್ದಿನ ಕಣ್ಣು ಇಡಲಿದೆ. 23 ಜನರ ತಂಡದಲ್ಲಿ ಯಾರಿದ್ದಾರೆ ಎನ್ನುವುದು ರಾಜ್ಯ ಬಿಜೆಪಿ ನಾಯಕರಿಗೆ ಗೊತ್ತಿಲ್ಲ. ಈ ತಂಡ ನೀಡುವ ವರದಿ ಆಧಾರದ ಮೇಲೆ ಹೈಕಮಾಂಡ್‍ನಿಂದ ತಂತ್ರಗಾರಿಕೆಗಳು ಕಾರ್ಯರೂಪಕ್ಕೆ ಬರಲಿವೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *